ಇಸ್ಲಾಮಾಬಾದ್: ಸದಾ ಒಂದಲ್ಲ ಒಂದು ಸುಳ್ಳು ಹೇಳುತ್ತಾ ಜಗತ್ತಿನ ಮುಂದೆ ಬೆತ್ತಲಾಗುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಜಗತ್ತಿನ ಮುಂದೆ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತನ್ನ ಸೇನಾ ಮುಖ್ಯಸ್ಥನಿಗೆ ಅಸಿಮ್ ಮುನೀರ್ಗೆ ಪೋಟೊವೊಂದನ್ನು ಗಿಫ್ಟ್ ನೀಡಿ ನಗೆಪಾಟಲಿಗೆ ಈಡಾಗಿದ್ದಾರೆ.
ಇದನ್ನೂ ಓದಿ :ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ; ಪತ್ನಿ ಶೀಲ ಶಂಕಿಸಿ ಗಂಡನೇ ಹತ್ಯೆ ಮಾಡಿರುವ ಆರೋಪ
‘ಆಪರೇಷನ್ ಸಿಂಧೂರ್’ ನಂತರ ಸೋತರು ಮೀಸೆ ಮಣ್ಣಾಗಿಲ್ಲ ಎಂದು ವರ್ತಿಸುತ್ತಿರುವ ಪಾಕಿಸ್ತಾನದ, ಭಾರತದ ವಿರುದ್ದ ಗೆಲುವು ಸಾಧಿಸಿದ್ದೇವೆ ಎಂದು ಸಂಭ್ರಮಿಸುತ್ತಿದೆ. ಶೆಹಬಾಜ್ ಷರೀಫ್ ಸರ್ಕಾರದ ಲಾಡಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಆಸೀಮ್ ಮುನೀರ್, ಪಾಕಿಸ್ತಾನ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾನೆ, ಇದರ ನಡುವೆ ಫೀಲ್ಡ್ ಮಾರ್ಷಲ್ ಎಂಬ ಬಿರುದನ್ನು ತನಗೆ ತಾನೇ ಕೊಟ್ಟುಕೊಂಡಿದ್ದಾನೆ.
ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಅಸಿಮ್ ಮುನೀರ್ ಪಾಕಿಸ್ತಾನದ ರಾಜಕಾರಣಿಗಳಿಗಾಗಿ ಔತಣಕೂಟವನ್ನು ಆಯೋಜಿಸಿದ್ದನು. ಈ ವೇಳೆ ಶಹಬಾಜ್ ಷರೀಫ್ ದೀರ್ಘ ವ್ಯಾಪ್ತಿಯ ರಾಕೆಟ್ ಲಾಂಚರ್‌ನಿಂದ ಕ್ಷಿಪಣಿ ಚಿಮ್ಮುತ್ತಿರುವ ಫೋಟೋವನ್ನು ಗಿಫ್ಟ್ ನೀಡಿದ್ದರು. ಇದನ್ನೂ ಓದಿ: BJP ಶಾಸಕರ ಅಮಾನತು ವಾಪಸ್: ಸ್ಪೀಕರ್ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಟೀಕೆ