ಬೆಂಗಳೂರು: ಕರ್ನಾಟಕ ಇತಿಹಾಸದಲ್ಲಿ ಸಿದ್ದರಾಮಯ್ಯ ಹೊಸ ದಾಖಲೆಯ ಮುನ್ನುಡಿ ಬರೆಯಲು ಇಂದು ಸಿದ್ದರಾಗಿದ್ದಾರೆ .ಹೌದು ರಾಜದ ರಾಕಕೀಯ ಇತಿಹಾಸದಲೇ ಸಿಎಂ ಸಿದ್ದರಾಮಯ್ಯ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿ ಹೊಸ ದಾಖಲೆ ಬರೆಯಲಿದ್ದಾರೆ.
ಇದುವರೆಗೂ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ 13 ಬಾರಿ ಬಜೆಟ್ ಮಂಡನೆ ಮಾಡಿ ಇಂದು 14ನೇ ಬಾರಿ ಬಜೆಟ್ ಮಂಡಿಸಲಿದ್ದು, 13 ಬಾರಿ ಬಜೆಟ್ ಮಂಡಿಸಿದ್ದ ಮಾಜಿ ಸಿಎಂ ರಾಮಕೃಷ್ಣ ಹೆಗೆಡೆ ಹಿಂದೆ ಹಾಕಿ ಹೊಸ ದಾಖಲೆ ಸೃಷ್ಟಿಸಲಿದ್ದಾರೆ.
ಇದನ್ನೂ ಓದಿ: Karnataka Budget 2023: ಬಜೆಟ್ ಮಂಡನೆಗೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಹೆಗಡೆ ದಾಖಲೆ ಅಂತ್ಯ
ಈವರೆಗೆ 13 ಬಜೆಟ್ ಮಂಡಿ ಸಿದ್ದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮುರಿಯುತ್ತಿದ್ದಾರೆ. ಸಿದ್ದರಾಮಯ್ಯ ಡಿಸಿಎಂ, ಹಣ ಕಾಸು ಸಚಿವರಾಗಿ 1995-96ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿ ದ್ದರು. 2018-19ರಲ್ಲಿ ಮೊದಲ ಮುಖ್ಯಮಂತ್ರಿ ಅವಧಿಯ ಕೊನೆಯ ಹಾಗೂ 13ನೇ ಬಾರಿಯ ಆಯವ್ಯಯ ಮಂಡಿಸಿದ್ದರು.
ರಾಜ್ಯದಲ್ಲಿ ಹೆಚ್ಚು ಬಜೆಟ್ ಮಂಡಿಸಿರುವ ಹಣಕಾಸು ಸಚಿವ
ಮಾಜಿ ಸಿಎಂ ರಾಮಕೃಷ್ಣ ಹೆಗೆಡೆ 13 ಬಾರಿ , ಯಡಿಯೂರಪ್ಪ 8 ಬಾರಿ, ವೀರಪ್ಪ ಮೊಯ್ಲಿ 5 ಬಾರಿ, ಎಸ್.ಎಂ.ಕೃಷ್ಣ 5 ಬಾರಿ, ಸಿದ್ದರಾಮಯ್ಯ 13 ಬಾರಿ (ಇಂದು ಬಜೆಟ್ ಸೇರಿದ್ರೆ 14 ಬಾರಿ) ಬಜೆಟ್ ಮಂಡನೆ ಮಾಡಿದ್ದಾರೆ.
14ನೇ ಬಾರಿ ರಾಜ್ಯದಲ್ಲಿ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಇಂದು ಸಿಎಂ ಸಿದ್ದರಾಮಯ್ಯ ಸಾಕ್ಷಿಯಾಗಲಿದ್ದಾರೆ.


