ಕಲಬುರಗಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿರುವ ಕಾಲ್ತುಳಿತಕ್ಕೆ ಸರ್ಕಾರವನ್ನೇ ನೇರ ಹೊಣೆಯಾಗಿಸಿರುವ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ರಾಜಿನಾಮೇ ನೀಡುವಂತೆ ಆಗ್ರಹಿಸಿವೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು. ಇಲ್ಲಿ ಆಗಿರುವ ಅನಾಹುತಕ್ಕೆ ನಾವು ರಾಜೀನಾಮೆ ಕೊಡ್ತೀವಿ, ಆದರೆ ಕುಂಭಮೇಳ ಮತ್ತು ಪಹಲ್ಗಾಂನಲ್ಲಿ ನಡೆದಿರುವ ಅನಾಹುತಕ್ಕೆ ಅವರು ರಾಜೀನಾಮೆ ಕೊಡಲಿ, ಎಲ್ಲರಿಗೂ ಒಂದೇ ಮಾನದಂಡವಿರಬೇಕು ಎಂದು ಹೇಳಿದರು. ಇದನ್ನೂ ಓದಿ :ಪೊಲೀಸರು ರಕ್ಷಣೆ ಮಾಡ್ತಿದ್ದರೆ, ಇವರು ಪೋಟೊ ಶೂಟ್ ಮಾಡ್ತಿದ್ರು; ಸರ್ಕಾರದ ಮೇಲೆ ಆರ್.ಅಶೋಕ್ ವಾಗ್ದಾಳಿ
ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ” ರಾಜೀನಮೆ ಕೊಡುವುದಾದರೆ ಎಲ್ಲರಿಗೂ ಒಂದೇ ಮಾನದಂಡವಿರಬೇಕು. ಬೆಂಗಳೂರಿನ ಕಾಲ್ತುಳಿತವಾಗಲಿ ಅಥವಾ ಕುಂಭಮೇಳ, ಪಹಲ್ಗಾಂ ದಾಳಿಗೆ ಎಲ್ಲದಕ್ಕೂ ಒಂದೇ ಮಾನದಂಡವಿರಬೇಕು. ಪಹಲ್ಗಾಂನಲ್ಲಿ 26 ಜನರನ್ನು ಕೊಂದ ಉಗ್ರರು ಎಲ್ಲಿದ್ದಾರೆ ಗೊತ್ತಿಲ್ಲ. ಇದನ್ನೂ ಓದಿ :ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಮೂವರು ಸಾ*ವು
ಈಗಿರುವಾಗ ಯಾರಾದರು ಅಮಿತ್ ಶಾ ಬಳಿ ರಾಜಿನಾಮೇ ಕೇಳಿದ್ರಾ? ಕುಂಭಮೇಳದಲ್ಲಿ ಕಾಲ್ತುಳಿತವಾದಾಗ ಯೋಗಿ ಆದಿತ್ಯನಾಥ್ ಏನು ಮಾಡಿದರು. ಅಲ್ಲಿ ಸಾವಾದರೆ ಅದು ಭಕ್ತರ ತಪ್ಪು ಎಂದು ಬಿಂಬಿಸುತ್ತಾರೆ. ಆದರೆ ಇಲ್ಲಿ ಸಾವಿದರೆ ಅದನ್ನು ಸರ್ಕಾರದ ತಪ್ಪು ಎಂದು ಬಿಂಬಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಪೋಟೊಗ್ರಾಫ್ ಹುಚ್ಚು ನಮಗಿಂತ ಮೋದಿಗೆ ಜಾಸ್ತಿ ಇದೆ..!
ಇದನ್ನೂ ಓದಿ:ಕಾಲ್ತುಳಿತ ಪ್ರಕರಣ; ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು
ರಾಜ್ಯ ಸರ್ಕಾರ ವಿಧಾನಸೌದದ ಮೇಲೆ ಫ್ಯಾಮಿಲಿ ಪೋಟೊಶೂಟ್ ಮಾಡಿಸಿದೆ ಎಂದು ವಿಪಕ್ಷಗಳು ಪ್ರಶ್ನಿಸುತ್ತಿರುವುದರ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ “ಬಿಜಿಪಿ ಅವರು ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಇವರು ರಣಹದ್ದುಗಳಿದ್ದಂತೆ. ಹೀಗಾಗಿ ಇದೀಗ ಸಾವಿನ ಮೇಲೆ ಮತ್ತೆ ರಾಜಕಾರಣ ಮಾಡುತ್ತಿದ್ದಾರೆ. ವಿಧಾನಸೌಧದ ಮುಂದೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡಿದ್ದು ಆಟೋಗ್ರಾಫ್, ಪೋಟೋಗ್ರಾಫ್ಗಲ್ಲ, ನಮಗಿಂದ ಪೋಟೊಗ್ರಾಫ್ ಹುಚ್ಚು ಮೋದಿಗೆ ಇದೆ ಎಂದು ಹೇಳಿದರು.


