ಗುಜರಾತ್‌ನ ಸೂರತ್ ಮೂಲದ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ಕಿರೀಟಗಳು ಮತ್ತು ಚಿನ್ನದ ಬಿಲ್ಲು ಮತ್ತು ಬಾಣ ಸೇರಿದಂತೆ ಹಲವಾರು ಆಭರಣಗಳನ್ನು ದಾನ ಮಾಡಿದ್ದಾರೆ. ಕೋಟ್ಯಾಂತರ ಮೌಲ್ಯದ ಆಭರಣಗಳನ್ನು ದಾನ ನೀಡಿದ ಉದ್ಯಮಿಯನ್ನು ಮುಖೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ :ಭೀಕರ ರಸ್ತೆ ಅಪಘಾತ; ಖ್ಯಾತ ನಟ ಶೈನ್ ಚಾಕೋಗೆ ಗಂಭೀರ ಗಾಯ, ತಂದೆ ನಿಧನ
ವಿಶ್ವ ಹಿಂದೂ ಪರಿಷತ್ ಅಧಿಕಾರಿಗಳ ಪ್ರಕಾರ, 11 ವಜ್ರ-ಖಚಿತ ಕಿರೀಟಗಳು, 30 ಕಿಲೋಗ್ರಾಂಗಳಷ್ಟು ಬೆಳ್ಳಿ, 300 ಗ್ರಾಂ ಚಿನ್ನ ಮತ್ತು ಮಾಣಿಕ್ಯಗಳು ಮತ್ತು ಇತರ ಅಲಂಕೃತ ವಸ್ತುಗಳು ಸೇರಿವೆ. ವಿಎಚ್‌ಪಿಯ ರಾಷ್ಟ್ರೀಯ ಖಜಾಂಚಿ ದಿನೇಶ್ ನೆವಾಡಿಯಾ ಅವರು ಪ್ರಕಾರ ದೇಣಿಗೆಯಲ್ಲಿ ಹಾರಗಳು, ಕಿವಿಯೋಲೆಗಳು, ಅಲಂಕಾರಿಕ ಹಣೆಯ ತಿಲಕಗಳು, ರಾಮಾಯಣದ ಸಹೋದರರನ್ನು ಪ್ರತಿನಿಧಿಸುವ ಏಳು ಬಿಲ್ಲುಗಳು, ನಾಲ್ಕು ಬತ್ತಳಿಕೆಗಳು, ಮೂರು ಗದೆಗಳು, ರೇಷ್ಮೆಯಿಂದ ಮಾಡಿದ ಬೀಸಣಿಗೆಗಳು ಸೇರಿವೆ ಎಂದು ಬಹಿರಂಗಪಡಿಸಿದರು. ಇದನ್ನೂ ಓದಿ :KSCA ಸಿಬ್ಬಂದಿಗಳಿಗೆ ಬಿಗ್ ರಿಲೀಫ್; ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್

ಸೂರತ್ ಮೂಲದ ಆಭರಣ ಸಂಸ್ಥೆ ಗ್ರೀನ್ ಲ್ಯಾಬ್ ಮಾಲೀಕ ಮುಖೇಶ್ ಪಟೇಲ್ ವಜ್ರ ವ್ಯಾಪಾರದಲ್ಲಿ ಚಿರಪರಿಚಿತರಾಗಿದ್ದು, ಈ ಹಿಂದೆಯೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳಿಗಾಗಿ ದೇಣಿಗೆ ನೀಡಿದ್ದಾರೆ. ಆದರೆ ಅವೆಲ್ಲವುಗಳಿಗಿಂತ ರಾಮ ಮಂದಿರದ ಅಲಂಕಾರಕ್ಕೆ ನೀಡಿದ ಕೊಡುಗೆ ಅತ್ಯಂತ ಮಹತ್ವಗಳಲ್ಲಿ ಒಂದಾಗಿದೆ ಎಂದು ತಿಳಿದು ಬಂದಿದೆ.


