KSRTC ಬಸ್​ ಬ್ರೇಕ್​ಫೇಲ್​ : ಹೊಸವರ್ಷದ ಮೊದಲ ದಿನವೇ ತಪ್ಪಿತು ಭಾರಿ ದುರಂತ !

ರಾಮನಗರ : ಹೊಸ ವರ್ಷದ ದಿನವೇ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು. KSRTC ಬಸ್​ ಬ್ರೇಕ್​ ಫೇಲ್​ ಆದ ಪರಿಣಾಮ ಬಸ್​ ತಡೆಗೋಡೆಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್​ನಲ್ಲಿ ಐವತಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕನಕಪುರ ತಾಲೂಕಿನ ಸಂಗಮದ ರಸ್ತೆಯಲ್ಲಿ ಘಟನೆ ನಡೆದಿದ್ದು. ರಸ್ತೆಯ ತಿರುವಿನಲ್ಲಿ ಬಸ್​ನ ಬ್ರೇಕ್​ ಫೇಲ್​ ಆದ ಪರಿಣಾಮ ಬಸ್​ ರಸ್ತೆಯ ತಡಗೋಡೆಗೆ ಡಿಕ್ಕಿ ಹೊಡೆದು ನಿಂತಿಕೊಂಡಿದೆ. ಈ  ವೇಳೆ ಬಸ್​ನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಒಂದು ವೇಳೆ ಪ್ರಪಾತಕ್ಕೆ ಉರುಳಿದ್ದರೆ ಭಾರೀ ದೊಡ್ಡ ದುರಂತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್​ ಭಾರೀ ದುರ್ಘಟನೆಯೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಇದನ್ನೂ ಓದಿ: ಪ್ರೀತಿಯಿಂದ ಸಾಕಿದ್ದ ನಾಯಿ ಸಾವು : ನೇಣಿಗೆ ಶರಣಾದ ಯುವಕ !

ಘಟನಾ ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಘಟನೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES