ಇಂದು ರಾಜ್ಯ ಬಜೆಟ್: 14 ನೇ ಬಾರಿಗೆ ಸಿಎಂ ಸಿದ್ದು ಬಜೆಟ್ ಮಂಡನೆ

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಬಜೆಟ್​ ಮಂಡನೆಗೆ ಕೌಂಟ್​​ಡೌನ್ ಆರಂಭವಾಗಿದ್ದು ಇಂದು ಮಧ್ಯಾಹ್ನ 12 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 14ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.

ಇದನ್ನೂ ಓದಿ: ಪತ್ನಿ ಇಲ್ಲದೇ ಪ್ರಧಾನಿ ನಿವಾಸದಲ್ಲಿ ಇರಬಾರದು : ಲಾಲು ಪ್ರಸಾದ್

ಈ ಬಜೆಟ್ ರಾಜ್ಯದ ಜನತೆಯಲ್ಲಿ ಬಾರಿ ನೀರೀಕ್ಷೆ ಹುಟ್ಟಿಸಿದ್ದು ರಾಜ್ಯ ಸರ್ಕಾರದ ಗ್ಯಾರೆಂಟೆ ಯೋಜನೆಗಳಿಂದ ಬೇರೆ ಯೋಜನೆಗಳಿಗೆ ಅನುದಾನ ಕಡಿತವಾಗುವುದಾ ಮತ್ತು  ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಕ್ಕೆ ಬಂಪರ್​ ಕೊಡುಗೆ ಸಿಗಲಿದೆಯಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

ರಾಜ್ಯದ ಜನರ ನಿರೀಕ್ಷೆಗಳೇನು..? ಯಾರಿಗೆ ಗಿಫ್ಟ್..?

ಗ್ಯಾರಂಟಿ ಬಜೆಟ್​..!

1. ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಿದೆ

2. ಕೆಲ ಇಲಾಖೆಗಳಲ್ಲಿ ತೆರಿಗೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ

3. ಮುದ್ರಾಂಕ & ನೋಂದಣಿ ಶುಲ್ಕ ಗುರಿ ಏರಿಕೆ ಸಾಧ್ಯತೆ

4. ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹ ಹೆಚ್ಚಳದ ಟಾರ್ಗೆಟ್​

5. ತೆರಿಗೆ ಸೋರಿಕೆ ಮೇಲೆ ನಿಗಾ ವಹಿಸಿ ವಾಣಿಜ್ಯ ತೆರಿಗೆ ಸಂಗ್ರಹ ಏರಿಕೆ

6. ಹಿಂದಿನ ಸರ್ಕಾರದ ಯೋಜನೆಗಳಿಗೆ ಕತ್ತರಿ ಪ್ರಯೋಗ..?

7. ಹೊಸ ಯೋಜನೆಗಳನ್ನ ಜೊತೆ ಹಳೆ ಯೋಜನೆಗಳ ವೀಲಿನ ಸಾಧ್ಯತೆ

8. ಗ್ಯಾರಂಟಿ ಯೋಜನೆಗಳಿಗೆ 35 ರಿಂದ 40 ಸಾವಿರ ಕೋಟಿ ರೂ. ಬೇಕಿದೆ

9. ಗ್ಯಾರಂಟಿ ಯೋಜನೆಗಳನ್ನೇ ಹೋಲುವ ಕೆಲವು ಯೋಜನೆಗಳಿಗೆ ಕತ್ತರಿ

10. ಸರ್ಕಾರದ ಆಡಳಿತ ಯಂತ್ರದ ಖರ್ಚು ವೆಚ್ಚಗಳಿಗೆ ಬ್ರೇಕ್ ಬೀಳುವ ಸಂಭವ

RELATED ARTICLES

Related Articles

TRENDING ARTICLES