ನವದೆಹಲಿ : ನೀವೆಲ್ಲರೂ ಭಾರತವನ್ನು ಡ್ರಗ್ಸ್ನಿಂದ ಮುಕ್ತಗೊಳಿಸಬೇಕು. ಯಾರೂ ಡ್ರಗಸ್ ಸೇವಿಸಬೇಡಿ ಅಂತ ಜನರಲ್ಲಿ ಮನವಿ ಮಾಡಿಕೊಳ್ಳಿ ಎಂದು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ನೀವೆಲ್ಲರೂ ಇತಿಹಾಸ ನಿರ್ಮಿಸಿದ್ದೀರಿ. ನಮ್ಮ ದೇಶದ ನಾರಿಯರು (ಹೆಣ್ಣ ಮಕ್ಕಳು) ಉತ್ತಮ ಸಾಧನೆ ತೋರಿದ್ದಾರೆ. ಇದರಿಂದ ಭಾರತದ ಹೆಣ್ಣು ಮಕ್ಕಳ ಸಾಮರ್ಥ್ಯ ಸಾಬೀತಾಗಿದೆ ಎಂದು ಕೊಂಡಾಡಿದರು.
ಎಲ್ಲ ಆಟಗಾರರು ತೋರಿದ ಶೌರ್ಯ, ಅವರು ಮಾಡಿದ ಪ್ರಯತ್ನ ಹಾಗೂ ನೀವು ನೀಡಿದ ಫಲಿತಾಂಶಗಳಿಂದಾಗಿ ದೇಶದ ಮೂಲೆ ಮೂಲೆಯಲ್ಲಿ ಸಂಭ್ರಮದ ವಾತಾವರಣವಿದೆ. 100 ಪದಕಗಳನ್ನು ದಾಟಲು ನೀವು ಹಗಲಿರುಳು ಶ್ರಮಿಸಿದ್ದೀರಿ. ಏಷ್ಯನ್ ಕ್ರೀಡಾಕೂಟದಲ್ಲಿ ಎಲ್ಲಾ ಆಟಗಾರರ ಪ್ರದರ್ಶನದಿಂದ ಇಡೀ ದೇಶವು ಹೆಮ್ಮೆಪಡುತ್ತಿದೆ ಎಂದರು.
ದೇಶದ ಯುವಕರು ಕೇವಲ ಉತ್ತಮ ಪ್ರದರ್ಶನದಿಂದ ಸಂತೋಷವಾಗಿಲ್ಲ. ಇದು ಪದಕ ಮತ್ತು ವಿಜಯವನ್ನು ಬಯಸುತ್ತದೆ. ದೇಶಕ್ಕಾಗಿ, ನೀವೆಲ್ಲರೂ G.O.A.T (Greatest of all time). ಅನೇಕ ಆಟಗಳಲ್ಲಿ ನೀವು ಖಾತೆಯನ್ನು ಮಾತ್ರ ತೆರೆದಿಲ್ಲ. ಹೊಸ ಮಾರ್ಗವನ್ನು ಸಹ ತೆರೆದಿದ್ದೀರಿ. ಅದು ಇಡೀ ಪೀಳಿಗೆಯ ಯುವಜನತೆಗೆ ಸ್ಫೂರ್ತಿ ನೀಡುವ ಮಾರ್ಗ ಎಂದು ಬಣ್ಣಿಸಿದರು.
ಆತ್ಮವಿಶ್ವಾಸ ನೀಡುವ ಮಾರ್ಗ
ನೀವು ತೆರೆದಿರುವ ಮಾರ್ಗ ಏಷ್ಯನ್ ಕ್ರೀಡಾಕೂಟವನ್ನು ಮೀರಿ ಸಾಗುವ ಹಾಗೂ ಒಲಿಂಪಿಕ್ಸ್‌ನತ್ತ ನಮ್ಮ ಪಯಣಕ್ಕೆ ಹೊಸ ಆತ್ಮವಿಶ್ವಾಸವನ್ನು ನೀಡುವ ಮಾರ್ಗ. ಇದು ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಬಾರಿ ವಿದೇಶಿ ನೆಲದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತ ಗರಿಷ್ಠ ಸಂಖ್ಯೆಯ ಪದಕಗಳನ್ನು ಭಾರತ ಗೆದ್ದಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಕ್ರೀಡಾ ಬಜೆಟ್ ಮೂರು ಪಟ್ಟು ಹೆಚ್ಚಳ
ನಮ್ಮ ಎಲ್ಲಾ ಆಟಗಾರರ ನೈತಿಕ ಸ್ಥೈರ್ಯ ಅಖಂಡವಾಗಿರುವಂತೆ ಮತ್ತು ಅವರು ಯಾವುದೇ ನ್ಯೂನತೆಗಳಿಂದ ಬಳಲುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಕಳೆದ 9 ವರ್ಷಗಳಲ್ಲಿ ಕ್ರೀಡಾ ಬಜೆಟ್ ಅನ್ನು ಹಿಂದಿನದಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿಸಲಾಗಿದೆ. ‘ಖೇಲೋ ಇಂಡಿಯಾ’ ಗೇಮ್ ಚೇಂಜರ್ ಎಂಬುದನ್ನು ಸಾಬೀತುಪಡಿಸಿದೆ ಎಂದರು.
Glimpses from the very special meeting with our Asian Games contingent, their coaches and support staff.
The unwavering spirit, dedication and the countless hours of hard work of every athlete is inspiring.
The accomplishments of our athletes have not just added to India’s… pic.twitter.com/L9edaCS4tA
— Narendra Modi (@narendramodi) October 10, 2023


