ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ರೆಬೆಲ್ ಅಂತ ಸಖತ್ ಫೇಮಸ್ ಆಗಿದ್ದ, ಸಾಹುಕಾರನ ಪಲ್ಲಂಗ ಪುರಾಣ ಈಗ ಜಗತ್ ಜಾಹೀರಾಗಿದೆ. ಜಲ ಸಂಪನ್ಮೂಲ ಸಚಿವರ ರಾಸಲೀಗೆ ಇಡೀ ಬಿಜೆಪಿ ಶಾಕ್ ಆಗಿದೆ.
ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಸಚಿವರ ರಾಸಲೀಲೆ ವಿಡಿಯೋ ಬಿರುಗಾಳಿ ಎಬ್ಬಿಸಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಖಾಸಗಿ ಕ್ಷಣದ ವಿಡಿಯೋ ರಿಲೀಸ್ ಆಗಿದ್ದು,ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ದೆಹಲಿಯ ಸರ್ಕಾರಿ ಭವನವೊಂದರಲ್ಲಿ ಸಚಿವರೊಬ್ಬರು ಯುವತಿಯೊಂದಿಗಿನ ಮಧುರ ಕ್ಷಣದ ವಿಡಿಯೋ ಇದಾಗಿದ್ದು, ಸರ್ಕಾರಿ ಐಬಿಯನ್ನು ಸಚಿವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಸೆಕ್ಸ್ ಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಕೆಪಿಟಿಸಿಎಲ್ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆರೋಪಿದ್ದಾರೆ.
ಈ ವಿಡಿಯೋ ಲೀಕ್ ಆಗಿರುವ ಕಾರಣ ಭಾರಿ ಮುಜುಗರಕ್ಕೆ ತುತ್ತಾಗಿದ್ದಾರೆ ರಮೇಶ್ ಜಾರಕಿಹೊಳಿ. ರಾಜಕಾರಣಿಯ ಖಾಸಗಿ ಕ್ಷಣದ ವಿಡಿಯೋ ಆಗಿರುವ ಕಾರಣ ಪವರ್ ಟಿವಿ ಇದನ್ನು ಪ್ರಸಾರ ಮಾಡಿಲ್ಲ. ಸದ್ಯ ರಾಸಲೀಲೆ ಸಿಡಿ ಸಂಬಂಧ ದಿನೇಶ್ ಕಲ್ಲಹಳ್ಳಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ.
ಮೈತ್ರಿ ಸರ್ಕಾರದ ಪತನಕ್ಕೆ ಪ್ರಮುಖ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ, ಬಿಜೆಪಿ ಸರ್ಕಾರದಲ್ಲಿ ಪ್ರಬಲ ಖಾತೆ ಪಡೆದುಕೊಂಡಿದ್ರು.. ಆದ್ರೆ, ಇದೀಗ ಸಿಡಿ ಬಿಡುಗಡೆ ಬಳಿಕ ತೀವ್ರ ಮುಜುಗರಕ್ಕೆ ಒಳಗಾಗಿರುವ ಸಚಿವರು, ಮೈಸೂರಿನಿಂದ ಒಂಟಿಯಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇದೇ ವಿಚಾರದ ರಾಷ್ಟ್ರಮಟ್ಟದ ಬಿಜೆಪಿ ವರ್ಚಸ್ಸಿಗೂ ಹೊಡೆತ ಬೀಳಲಿದೆ.
ಇನ್ನೂ ಅಧಿವೇಶನದ ಹೊತ್ತಲ್ಲೇ ಸಚಿವರ ರಾಸಲೀಲೆ ಬಹಿರಂಗವಾಗಿರೋದ್ರಿಂದ ಸರ್ಕಾರಕ್ಕೂ ಮುಜುಗರ ಎದುರಾಗಿದೆ. ನೈತಿಕತೆಯ ಪಾಠ ಹೇಳುವ ಬಿಜೆಪಿ ನಾಯಕರಿಗೂ ರಾಸಲೀಲೆ ವಿಡಿಯೋ ಸಂಕಟ ತಂದಿಟ್ಟಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಸಚಿವರ ರಾಜೀನಾಮೆ ಪಡೀತಾರ ಅಥವಾ ಸಚಿವರೇ ಸ್ವಯಂ ರಾಜೀನಾಮೆ ನೀಡ್ತಾರ ಅನ್ನೋದನ್ನ ಕಾಡು ನೋಡಬೇಕಿದೆ.


