ನೆಲಮಂಗಲ : ಪ್ರೀತಿಯಿಂದ ಸಾಕಿದ್ದ ನಾಯಿ ಸಾವಿಗೀಡಾದ ಬೇಸರದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು ರಾಜಶೇಖರ್(33) ಎಂದು ಗುರುತಿಸಲಾಗಿದೆ.
ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರ ಗ್ರಾಮದ ರಾಜಶೇಖರ್ ಎಂಬಾತ 9 ವರ್ಷದ ಹಿಂದೆ ಜರ್ಮನ್ಶೆಫರ್ಡ್ ತಳಿಯ ನಾಯಿಯನ್ನು ಖರೀದಿಸಿ ತಂದಿದ್ದನು. ಅದಕ್ಕೆ ‘ಬೌನ್ಸಿ’ ಎಂದು ನಾಮಕರಣ ಮಾಡಿದ್ದನು. ಅತ್ಯಂತ ಪ್ರೀತಿಯಿಂದ ನಾಯಿಯನ್ನು ಸಾಕಿದ್ದನು .
ಇದನ್ನೂ ಓದಿ : ಹೊಸ ವರ್ಷಕ್ಕೆ 1.22 ಲಕ್ಷ ಕಾಂಡೋಮ್ ಮಾರಾಟ : ಚಾಕ್ಲೇಟ್ ಪ್ಲೇವರ್ಗೆ ಹೆಚ್ಚು ಬೇಡಿಕೆ ಎಂದ ಬ್ಲಿಂಕ್ಇಟ್ !
ಆದರೆ ನಿನ್ನೆ (ಡಿಸೆಂಬರ್.31) ಬೌನ್ಸಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಮೃತ ಪಟ್ಟ ಹಿನ್ನಲೆಯಲ್ಲಿ ತೀವ್ರ ದುಖಃದಲ್ಲಿದ್ದ ರಾಜಶೇಖರ್ ತನ್ನ ಜಮೀನಿನಲ್ಲೆ ನಾಯಿಯ ಅಂತ್ಯಸಂಸ್ಕಾರ ಮಾಡಿ ಮುಗಿಸಿ ಮನೆಗೆ ಬಂದಿದ್ದನು. ಆದರೆ ಬುಧವಾರ ಬೆಳಿಗ್ಗೆ ತನ್ನ ಮನೆಯಲ್ಲಿಯೆ ನಾಯಿಗೆ ಬಳಸುತ್ತಿದ್ದ ಚೈನ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.


