ಭೀಕರ ರಸ್ತೆ ಅಪಘಾತ; ಖ್ಯಾತ ನಟ ಶೈನ್​ ಚಾಕೋಗೆ ಗಂಭೀರ ಗಾಯ, ತಂದೆ ನಿಧನ

ಖ್ಯಾತ ಬಹುಭಾಷ ನಟ ಶೈನ್​ ಟಾಮ್​ ಚಾಕೋ ಪ್ರಾಯಣಿಸುತ್ತಿದ್ದ ಕಾರು ಅಪಘಾತವಾಗಿದ್ದು. ದುರ್ಘಟನೆಯಲ್ಲಿ ನಟನ ಶೈನ್​ ಚಾಕೋ ಅವರ ತಂದೆ ಸಿ.ಪಿ ಚಾಕೋ ನಿಧನರಾಗಿದ್ದಾರೆ. ಇನ್ನು ನಟ ಮತ್ತು ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡಿನ ಪಾಲಕೋಡ್ ಬಳಿಯ ಪರಯೂರ್ನಲ್ಲಿ ಶುಕ್ರವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು. ಶೈನ್ ಅವರ ಕಾರು ಟ್ರಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಶೈನ್​ ತಂದೆ ಸಿ.ಪಿ ಚಾಕೋ ಸ್ಥಳದಲ್ಲೇ ಸಾವನ್ನಪ್ಪಿದ್ದು. ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಗೂ ಗಾಯಗಳಾಗಿವೆ. ಕೂಡಲೇ ಅವರನ್ನು ಧರ್ಮಪುರಿ ಬಳಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ :KSCA ಸಿಬ್ಬಂದಿಗಳಿಗೆ ಬಿಗ್​ ರಿಲೀಫ್​; ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್​

ಶೈನ್ ಟಾಮ್ ಚಾಕೊ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಅಪಘಾತದಲ್ಲಿ ಜಖಂ ಆಗಿರುವ ಕಾರಿನ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಸದ್ಯದ ಪರಿಸ್ಥಿತಿ ಬಗ್ಗೆ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಅಪಘಾತದಲ್ಲಿ ನಿಧನರಾದ ಸಿಪಿ ಚಾಕೊ ಅವರಿಗೆ 70 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ :ಒತ್ತಡ ಹೇರಿ ಕಾರ್ಯಕ್ರಮ ಆಯೋಜನೆ; ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ್​ ರಾಜು ತಲೆದಂಡ

ತಂದೆಯನ್ನು ವೈದ್ಯಕೀಯ ತಪಾಸಣೆಗಾಗಿ ತ್ರಿಷುರ್​ನಿಂದ ಬೆಂಗಳೂರಿಗೆ ಶೈನ್ ಟಾಮ್ ಚಾಕೊ ಕರೆದುಕೊಂಡು ಬರುತ್ತಿದ್ದರು. ಅವರ ಕಾರು 80ರಿಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಎದುರಿಗೆ ಚಲಿಸುತ್ತಿದ್ದ ಟ್ರಕ್ ಸಡನ್​ ಆಗಿ ಲೇನ್ ಬದಲಾಯಿಸಿದ್ದರಿಂದ ಅಪಘಾತ ಸಂಭವಿಸಿತು ಎನ್ನಲಾಗಿದೆ. ಈ ಅಪಘಾತದಲ್ಲಿ ಶೈನ್ ಟಾಮ್ ಚಾಕೊ ಅವರ ಎಡಗೈ ಮೂಳೆ ಮುರಿದಿದೆ. ಇದನ್ನೂ ಓದಿ :ಪೊಲೀಸ್ ಅಧಿಕಾರಿಗಳ ತಲೆದಂಡ; ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್​ ನಿಂಬಾಳ್ಕರ್​ ಎತ್ತಂಗಡಿ

ನಟ ಶೈನ್​ ಚಾಕೋ ಮೇಲೆ ಇತ್ತೀಚೆಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಡ್ರಗ್ಸ್​ ಕೇಸ್​ನಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಅಲ್ಲದೇ ಕೆಲವು ನಟಿಯರು ಕೂಡ ಶೈನ್ ಟಾಮ್ ಚಾಕೊ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು.

RELATED ARTICLES

Related Articles

TRENDING ARTICLES