ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಒಣ ಮೆಣಸಿನಕಾಯಿ ಬೆಳೆಗಾರರು ದರ ಕುಸಿತದಿಂದ ಕಂಗಾಲು ಆಗಿದ್ದಾರೆ. ಮೆಣಸಿನಕಾಯಿ ಬೆಳೆದಿರುವ ರೈತರು ಹಾಗೂ ದಾಸ್ತಾನು ಮಾಡಿಕೊಂಡಿರುವ ಶೀತಲಗೃಹಗಳ ಮಾಲೀಕರು, ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಜಿಲ್ಲೆಯ ಸುಮಾರು ಒಂದು ಲಕ್ಷ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿದ್ದು ಏಷ್ಯಾದಲ್ಲಿಯೇ ದೊಡ್ಡ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಆವಕವಾಗಿದ್ದ ಇತ್ತ ಒಂದು ಕಡೆ ಬೆಲೆ ಕುಸಿತವಾಗಿದ್ದರೆ ಮತ್ತೊಂದೆಡೆ ಕೇಳುವವರು ಇಲ್ಲದಂತಾಗಿದೆ.
ಹೌದು.. ರೈತರಿಗೆ ಸದಾ ಒಂದಿಲ್ಲೊಂದು ಕಷ್ಟ ಗಳು ಇದ್ದೆ ಇರುತ್ತವೆ ಎಂಬುದಕ್ಕೆ ಸಧ್ಯ ಹುಬ್ಬಳ್ಳಿಯ ಎಪಿಎಮ್ ಸಿ ಮಾರುಕಟ್ಟೆ ಯಲ್ಲಿ ಕಂಡು ಬರುತ್ತಿರುವ ದೃಶ್ಯ ಗಳೇ ಸಾಕ್ಷಿ.ಒಂದು ಕಡೆ ಮಳೆ ಇದ್ದರೆ ಬೆಳೆ ಇರೊದಿಲ್ಲ ಬೆಳೆ ಇದ್ದರೆ ಮಳೆ ಕೊರತೆ ಎಲ್ಲವೂ ಇದ್ದರೆ ಮತ್ತೊಂದು ಸಮಸ್ಯೆ ಸದಾ ಒಂದಿಲ್ಲೊಂದು ರೀತಿಯ ಸಮಸ್ಯೆ ಗಳು ರೈತರಿಗೆ ಇದ್ದೆ ಇರುತ್ತವೆ ಎಂಬೊದಕ್ಕೆ ಸಧ್ಯ ಒಣ ಮೆಣಸಿನಕಾಯಿ ಬೆಳೆದಿರುವ ರೈತರ ಪರಿಸ್ಥಿತಿಯಾಗಿದೆ.ಕಳೆದ ಬಾರಿ ಇದ್ದ ಬೆಲೆ ಈ ಒಂದು ಬಾರಿ ಕುಸಿದಿದೆ. ಪ್ರತಿ ಎಕರೆಗೆ 18ರಿಂದ 20 ಕ್ವಿಂಟಲ್ ಇಳುವರಿ ಬಂದಿದ್ದು ಕಪ್ಪುಚುಕ್ಕೆ ರೋಗದಿಂದ ಶೇ 30ರಷ್ಟು ಬೆಳೆ ಹಾನಿಯ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಬಂದಿದೆ ಆದರೆ ಬೆಲೆ ಪಾತಾಳ ಕ್ಕೆ ಕುಸಿದಿದ್ದು ಇದರಿಂದಾಗಿ ರೈತರು ಆತಂಕಗೊಂಡಿದ್ದು ಮೆಣಸಿನಕಾಯಿ ತೆಗೆದುಕೊಂಡು ಬಂದು ಕೊಳ್ಳುವವರು ಇಲ್ಲದೆ ಕಡಿಮೆ ದರದಿಂದಾಗಿ ಆತಂಕಗೊಂಡಿದ್ದಾರೆ.
ಇದನ್ನೂ ಓದಿ :ಪತಿಯ ಕಿಡ್ನಿಯನ್ನು ಮಾರಿ ಪ್ರಿಯಕರನ ಜೊತೆ ಪರಾರಿಯಾದ ಐನಾತಿ ಮಹಿಳೆ

ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹ 5 ಸಾವಿರದಿಂದ ₹7 ಸಾವಿರದವರೆಗೆ ಬೆಲೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹20 ಸಾವಿರದಿಂದ ₹25 ಸಾವಿರದ ವರೆಗೆ ಬೆಲೆ ಇತ್ತು. ಸೂಕ್ತ ಬೆಲೆ ದೊರೆಯದ ಕಾರಣ 2023-24ನೇ ಸಾಲಿನಡಿ ಬೆಳೆದಿದ್ದ ಸುಮಾರು 15 ಲಕ್ಷ ಚೀಲದಷ್ಟು ಮೆಣಸಿನಕಾಯಿಯನ್ನು ರೈತರು ಶೀತಲಗೃಹಗಳಲ್ಲಿ ದಾಸ್ತಾನು ಇಟ್ಟಿದ್ದಾರೆ. ದಾಸ್ತಾನು ವೇಳೆ ಕ್ವಿಂಟಲ್ಗೆ ₹20 ಸಾವಿರದಿಂದ ₹25 ಸಾವಿರದವರೆಗೆ ಬೆಲೆ ಇತ್ತು. ಇದನ್ನು ನಂಬಿಕೊಂಡು ರೈತರು ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದಾರೆ.
ಈಗ ಹಳೆಯ ಮೆಣಸಿನಕಾಯಿ ಬೆಲೆಯು ಕ್ವಿಂಟಲ್ಗೆ ₹5000 ರಿಂದ ₹7 ಸಾವಿರ ಇದೆ. ಹಾಗಾಗಿ, ರೈತರು ದಾಸ್ತಾನಿಟ್ಟಿದ್ದ ಸರಕು ಏನಾಗಿದೆ ಎಂದೂ ವಿಚಾರಿಸುತ್ತಿಲ್ಲ. ಇದು ಮೆಣಸಿನಕಾಯಿ ಬೆಳೆ ಬೆಳೆದ ರೈತರನ್ನು ಆತಂಕಕ್ಕೆ ದೂಡಿದೆ. ಇನ್ನೂ ಈ ಒಂದು ವಿಚಾರ ಕುರಿತು ಸಾಂಬಾರು ಮಂಡಳಿಯ ಜಿಲ್ಲಾ ನಿರ್ದೇಶಕರು ಮಾತನಾಡಿ ಬೆಲೆ ಕುಸಿತವಾಗಿದ್ದು ಈ ಒಂದು ಬಾರಿ ಹೆಚ್ಚಿನ ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಬಂದಿದೆ ಹೀಗಾಗಿ ದರ ಸ್ವಲ್ಪ ಮಟ್ಟಿಗೆ ಕುಸಿತವಾಗಿದ್ದು ಆದರೂ ಪರವಾಗಿಲ್ಲ ಎಂದಿದ್ದಾರೆ.

ಇನ್ನೂ ಈ ಬಾರಿ ಇಳುವರಿ ಪ್ರಮಾಣದಲ್ಲಿ ಕುಸಿತವಾಗಿದ್ದು ಆಂಧ್ರಪ್ರದೇಶದ ಗುಂಟೂರು, ತೆಲಂಗಾಣದ ವಾರಂಗಲ್, ಭದ್ರಾಚಲಂನಲ್ಲಿಯೂ ಇಳುವರಿ ಉತ್ತಮವಾಗಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು. ಹಾವೇರಿ ಜಿಲ್ಲೆಯ ಬ್ಯಾಡಗಿ ಎಪಿಎಂಸಿಗೆ ರೈತರು ಮಾರಾಟಕ್ಕೆ ತಂದಿರುವ ಒಣ ಮೆಣಸಿನಕಾಯಿ.
ಇದನ್ನೂ ಓದಿ: ಎಲ್ಲವೂ ಚೆನ್ನಾಗಿತ್ತು, ಸ್ಮಾರ್ಟ್ಪೋನ್ ಬಂದು ನಮ್ಮ ಜೀವನವೇ ಹಾಳಾಯ್ತು !
ಈ ಬಾರಿ ಹೆಚ್ಚು ಮಳೆ ಸುರಿಯಿತು. ಇದರಿಂದ ಇಳುವರಿ ಕಡಿಮೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಒಣಮೆಣಸಿನಕಾಯಿ ದರ ಏರಿಕೆಯಾಗುವ ನಿರೀಕ್ಷೆಯಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೆಣಸಿನಕಾಯಿ ಆವಕ ಹಾಗೂ ದರದಲ್ಲಿ ಶೇ 50ರಷ್ಟು ಇಳಿಕೆಯಾಗಿದ್ದು ಬ್ಯಾಡಗಿ ಮೂಲ ತಳಿಗೆ ಹೆಚ್ಚು ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿದ್ದು ಮಾರುಕಟ್ಟೆಯಲ್ಲಿ ಬೇಡಿಕೆಯೂ ಕುಸಿದಿದೆ. ರೈತರು ಮೆಣಸಿನಕಾಯಿ ಕೃಷಿ ಮಾಡುವಾಗ ಹೇರಳವಾಗಿ ರಸಗೊಬ್ಬರ ಮತ್ತು ಕೀಟನಾಶಕ ಬಳಸುತ್ತಾರೆ. ಕೀಟನಾಶಕ ಅಂಶವು ಮೆಣಸಿನಕಾಯಿಯಲ್ಲಿ ಬೆರೆತು ಹೋಗುತ್ತದೆ. ಮೆಣಸಿನಕಾಯಿ ಸೇರಿ ಆಹಾರ ಪದಾರ್ಥಗಳಲ್ಲಿ ಇರಬೇಕಾದ ಕೀಟನಾಶಕ ಅವಶೇಷಗಳ ಪ್ರಮಾಣದ ಮಿತಿಯನ್ನು ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರವು ನಿಗದಿಪಡಿಸಿದೆ.
ನಿಗದಿತ ಮಿತಿಗಿಂತಲೂ ಅಧಿಕ ಕೀಟನಾಶಕ ಅಂಶ ಇರುವುದರಿಂದ ಸಂಬಾರ ಪದಾರ್ಥಗಳನ್ನು ತಯಾರಿಸುವ ಕಂಪನಿಗಳು ಮೆಣಸಿನಕಾಯಿ ಕೊಳ್ಳಲು ಜಿಲ್ಲೆಯತ್ತ ಬರುತ್ತಿಲ್ಲ ಇದೇ ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ ಕಳೆದ ವರ್ಷ ದಾಸ್ತಾನಿಟ್ಟಿರುವ ಮೆಣಸಿನಕಾಯಿ ಇನ್ನೂ ಮಾರಾಟವಾಗಿಲ್ಲ.ಹೆಚ್ಚಿನ ಬೆಲೆಗೆ ಖರೀದಿಸಿರುವ ಈ ಮೆಣಸಿನಕಾಯಿಯ ಮಾರಾಟದಲ್ಲಿ ತೊಡಗಿದ್ದಾರೆ. ಹಾಗಾಗಿ ಹೊಸ ಉತ್ಪನ್ನದ ಖರೀದಿಗೆ ಆಸಕ್ತಿ ತೋರುತ್ತಿಲ್ಲ’ ಏನೇ ಆಗಲಿ ಹುಬ್ಬಳ್ಳಿಯ ಎಪಿಎಮ್ ಸಿ ಮಾರುಕಟ್ಟೆ ಯಲ್ಲಿ ದಾಖಲೆಯ ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಏನೋ ಬಂದಿದ್ದು ಬೆಲೆ ಇಲ್ಲದಂತಾಗಿದೆ.


