ರಾಜಭವನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ!

ಬೆಂಗಳೂರು: ಸೋಮವಾರ ರಾತ್ರಿ 11.30ರ ಸುಮಾರಿಗೆ ರಾಜಭವನಕ್ಕೆ ಬಾಂಬ್ ​ಬೆದರಿಕೆ ಕರೆಯೂ ಬಂದಿದ್ದು, ಪೊಲೀಸರು ತಕ್ಷಣ ರಾಜಭವನದಲ್ಲಿ ಪರಿಶೀಲನೆ ನಡೆಸಿದ್ದಾರೆ, ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಗೊತ್ತಾಗಿದೆ. ಬಾಂಬ್ ಬೆದರಿಕೆ ಕರೆಯ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಆ್ಯಂಬುಲೆನ್ಸ್​ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕದಿರಲು ಮಾಸ್ಟರ್​ ಪ್ಲ್ಯಾನ್​​!

ಇತ್ತೀಚಿಗೆ ಬೆಂಗಳೂರಿನಲ್ಲಿ ಬಾಂಬ್​ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಸರಿಯಾಗಿ 12 ದಿವಸದ ಹಿಂದೆ ಡಿಸೆಂಬರ್​​ 1 ರಂದು ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್​ ಬೆದರಿಕೆ ಕರೆ ಬಂದಿತ್ತು. ಇದು ಶಾಲಾ ಆಡಳಿತ ಮಂಡಳಿಗೆ ಶಾಕ್​ ನೀಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ತಂಡ ಎಲ್ಲ ಶಾಲೆಗಳನ್ನು ಪರಿಶೀಲಿಸಿದ್ದರು. ಆಗ ಇದೊಂದು ಹುಸಿ ಬಾಂಬ್​ ಬೆದರಿಕೆ ಕರೆ ಎಂದು ತಿಳಿಯಿತು.

ಇನ್ನು ವಿಷಯ ಗೊತ್ತಾಗುತ್ತಿದ್ದಂತೆ ಶಾಲೆಗಳಿಗೆ ತೆರಳಿದ ಪೋಷಕರು ಮಕ್ಕಳನ್ನು ಮನೆಗಳಿಗೆ ಕರೆದುಕೊಂಡು ಬಂದಿದ್ದರು. ಅಂದು ಒಂದು ದಿನ ಶಾಲೆಗಳಿಗೆ ರಜೆ ನೀಡಲಾಗಿತ್ತು.

RELATED ARTICLES

Related Articles

TRENDING ARTICLES