ಬೆಂಗಳೂರು : ಇತ್ತೀಚೆಗೆ ಬಿಎಂಟಿಸಿ ಡ್ರೈವರ್ಗಳ ಮೇಲೆ ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದೀಗ ಮತ್ತೆ ಬೆಂಗಳೂರಿನಲ್ಲಿ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಕೃತ್ಯ ನಡೆದಿದ್ದು. ಕಳೆದ ಮೂರು ತಿಂಗಳಲ್ಲಿ ಬಿಎಂಟಿಸಿ ಚಾಲಕರ ಮೇಲೆ ನಡೆದ 6ನೇ ಹಲ್ಲೆ ಪ್ರಕರಣವಾಗಿದೆ.
ನಿನ್ನೆ ರಾತ್ರಿ ಸುಮಾರು 8 ಗಂಟೆ ಮೈಸೂರು ರಸ್ತೆಯ ಹಳೆಗುಡ್ಡದಹಳ್ಳಿ ಬಳಿ ಘಟನೆ ನಡೆದಿದ್ದು. ವಿಜಯನಗರ ಟು ಜಯನಗರ ಸಂಚಾರ ಮಾಡುತ್ತಿದ್ದ ಬಸ್ನಲ್ಲಿ ಘಟನೆ ನಡೆದಿದೆ.
ಬೈಕ್ ಸವಾರನೊಬ್ಬ ಸಿನಿಮಾ ರೀತಿಯಲ್ಲಿ ಬಸ್ ಹತ್ತಿ ಡ್ರೈವರ್ ಮುಖಕ್ಕೆ ಪಂಚ್ ಕೊಟ್ಟಿದ್ದು. ಬಸ್ ಡ್ರೈವರ್ ಮುರ್ತುಜಾ ಸಾಬ್ ಹಲ್ಲೆಗೊಳಗಾಗಿದ್ದು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ಬೈಕ್ ಸವಾರನ ಬೈಕ್ ಸಂಖ್ಯೆ- KA-02JS1916, ಚಾಲಕನ ದೂರಿನ ಮೇರೆಗೆ ಪ್ರಕರನ ದಾಖಲು ಮಾಡಿಕೊಂಡಿರುವ ಬ್ಯಾಟರಾಯನಪುರ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.


