ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ಅವರು ಯಡಿಯೂರಪ್ಪರ ಮಗ ಅಂತ ಬಿ.ವೈ. ವಿಜಯೇಂದ್ರಗೆ ಸ್ಥಾನ ಕೊಟ್ಟಿದಾರೆ ಅಂತಾರೆ. ಇವರಿಗೆ ಈ ಹೇಳಿಕೆ ಕೊಡಲು ಯಾವ ನೈತಿಕತೆಯೂ ಇಲ್ಲ. ಇವರೇ ಇವರಪ್ಪನ ಹೆಸರು ಹೇಳಿಕೊಂಡು ಸಚಿವರಾಗಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಮಗ ಇರಬಹುದು, ಅವರಿಗೆ ಸ್ವಂತ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.
ಮಾಜಿ ಶಾಸಕ ಸಿ.ಟಿ. ರವಿ ಅಸಮಧಾನ ವಿಚಾರವಾಗಿ ಮಾತನಾಡಿದ ಅವರು, ಸಿ.ಟಿ. ರವಿಯವರು ಪಕ್ಷದ ನಾಯಕರು, ಅವರಿಗೂ ಅಧ್ಯಕ್ಷ ಆಗುವ ಸಾಮರ್ಥ್ಯ ಇದೆ. ಈಗ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಒಪ್ಪಿಕೊಂಡು ಸಹಕರಿಸಲಿ. ಒಟ್ಟಾಗಿ ಪಕ್ಷ ಸಂಘಟನೆಗೆ ಸಿ.ಟಿ. ರವಿ ಸಹಕರಿಸಲಿ ಎಂದು ತಿಳಿಸಿದ್ದಾರೆ.
BSYಗೆ ಆದ ಅನ್ಯಾಯ ಸರಿ ಆಯಿತಾ?
ಆಗಿದ್ದು ಆಯ್ತು.. ನಿನ್ನೆ ಇಂದ ಎಲ್ಲಾ ಸಾಮರಸ್ಯ. ಈಗ ಎಲ್ಲಾ ಒಟ್ಟಾಗಿ ಹೋಗ್ತೇವೆ ಎಂದರು. ಯಡಿಯೂರಪ್ಪರಿಗೆ ಆದ ಅನ್ಯಾಯ ಸರಿ ಆಯಿತಾ? ಎಂಬ ಪ್ರಶ್ನೆಗೆ ರೇಣುಕಾಚಾರ್ಯ ತಡಬಡಾಯಿಸಿದರು. ನಿಮಗೆ ನೀಡಿದ್ದ ಶಿಸ್ತು ಸಮಿತಿ ನೊಟೀಸ್ ಡಸ್ಟ್ ಬಿನ್ ಗೆ ಸೇರಿತಾ? ಎಂಬ ಪ್ರಶ್ನೆಗೂ ರೇಣುಕಾಚಾರ್ಯ ಉತ್ತರಿಸದಾಗದೆ ಸುಮ್ಮನಾಗಿದ್ದಾರೆ.


