‘ಟ್ರಂಪ್​ ಚುನಾವಣೆ ಗೆದ್ದಿದ್ದೇ ನನ್ನಿಂದ’; ಟ್ರಂಪ್​ ವಿರುದ್ದ ತಿರುಗಿ ಬಿದ್ದ ಎಲಾನ್ ಮಸ್ಕ್​..!

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉದ್ಯಮಿ ಎಲಾನ್ ಮಸ್ಕ್ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿದೆ. ಟ್ರಂಪ್​ ಮಸೂದೆ ಕುರಿತು ಅಸಮಧಾನ ವ್ಯಕ್ತಪಡಿಸಿದ ಎಲಾನ್​ ಮಸ್ಕ್​ ಇದೀಗ ಹೊಸ ಬಾಂಬ್​ ಸಿಡಿಸಿದ್ದಾರೆ. “2024ರ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಟ್ರಂಪ್ ಸರ್ಕಾರ ಮರಳಿ ಅಧಿಕಾರಕ್ಕೇರಿದ್ದು ತನ್ನಿಂದ. ನಾನು ಪ್ರಯತ್ನಿಸದೇ ಇದ್ದರೆ ಟ್ರಂಪ್ ಸೋಲುತ್ತಿದ್ದರು” ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ :ಕೌಟುಂಬಿಕ ಕಲಹದ ಶಂಕೆ; ಇಬ್ಬರು ಮಕ್ಕಳನ್ನ ಕೆರೆಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಎಲಾನ್​ ಮಸ್ಕ್‌ ಅವರು ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚಿಗೆ ಸಂಬಂಧಿಸಿದ ಮಸೂದೆಯನ್ನು ಖಂಡಿಸಿ ಎಕ್ಸ್‌ನಲ್ಲಿ ನಿರಂತರ ಪೋಸ್ಟ್‌ ಮಾಡುತ್ತಿದ್ದರು. ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಟ್ರಂಪ್‌ ಇದೀಗ ಸ್ಪೇಸ್​ ಎಕ್ಷ್​ ಆದಾಯಕ್ಕೆ ಕೊಕ್ಕೆ ಹಾಕುವುದಾಗಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಎಲಾನ್​ ಮಸ್ಕ್​​ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು 2024ರಲ್ಲಿ ಡೊನಾಲ್ಡ್​ ಟ್ರಂಪ್ ಅಧಿಕಾರಕ್ಕೆ ಏರಿದ್ದು ನನ್ನಿಂದಲೇ ಎಂದು ಹೇಳಿದ್ದಾರೆ. ಇದನ್ನೂ ಓದಿ :3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಪೊಲೀಸ್​ ಎನ್​ಕೌಂಟರ್​ನಲ್ಲಿ ಸಾವು

“ಡೋನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದಿದ್ದೇ ನನ್ನಿಂದ. ನಾನಿಲ್ಲದಿದ್ದರೆ ಡೋನಾಲ್ಡ್ ಟ್ರಂಪ್ ಹೇಳ ಹೆಸರಿಲ್ಲದಂತೆ ನಿರ್ಗಮಿಸುತ್ತಿದ್ದರು. ಮರಳಿ ಅಧ್ಯಕ್ಷ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸದನವನ್ನು ಡೆಮಾಕ್ರಟಿಕ್ ಪಾರ್ಟಿ ಸದನ ನಿಯಂತ್ರಿಸುತ್ತಿದ್ದದರೆ. ರಿಪಬ್ಲಿಕನ್ ಪಾರ್ಟಿ ಸದಸ್ಯರು ಸೆನೆಟ್‌ನಲ್ಲಿ 51 -49ರಷ್ಟಿದ್ದರು. ಟ್ರಂಪ್‌ಗೆ ಅದಿಕಾರ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES