12 ಯುವತಿಯರನ್ನು ಮದ್ವೆಯಾದ ಕಿಲಾಡಿ ಯುವಕ

ಬೆಂಗಳೂರು : ಕೆಲವರು ಒಂದು ಮದ್ವೆ ಆಗೋಕೆ ಹುಡುಗಿ ಹುಡುಕಲು ಪೇಚಾಡುತ್ತಾರೆ. ಅಂಥದರಲ್ಲಿ ಇಲ್ಲೊಬ್ಬ ಯುವಕ ಬರೋಬ್ಬರಿ 12 ಯವತಿಯರನ್ನು ಮದ್ವೆ ಆಗಿದ್ದಾನೆ.

ಉತ್ತರ ಪ್ರದೇಶದ ಬದೌನ್​ನಲ್ಲಿ ವ್ಯಕ್ತಿಯೊಬ್ಬ ಒಮ್ಮೆ ತಾನು ಹಿಂದೂ ಅಂತ, ಮತ್ತೆ ಕೆಲವೊಮ್ಮೆ ತಾನು ಮುಸ್ಲಿಂ ಸಮುದಾಯದವನು ಅಂತ ಹೇಳಿಕೊಂಡು 12 ಯುವತಿಯರನ್ನು ವಂಚಿಸಿ ಮದುವೆ ಆಗಿದ್ದಾನೆ.

ನಾನು ವೈದ್ಯ, ನನ್ನ ಬಳಿ ಅಷ್ಟು ಆಸ್ತಿ ಇದೆ ಅಂತ ಬಣ್ಣ ಬಣ್ಣದ ಮಾತುಗಳನ್ನಾಡಿ ಶ್ರೀಮಂತರ ಮನೆಯ ಹುಡುಗಿಯರನ್ನು ಬಲೆಗೆ ಬೀಳಿಸುತ್ತಿದ್ದ. ಬಳಿಕ, ಈ ಆಸಾಮಿ ಹಣ, ಒಡವೆ ದೋಚಿ ಅಲ್ಲಿಂದ ಪರಾರಿಯಾಗುತ್ತಿದ್ದನು. ಹೀಗೆ, 12 ಯುವತಿಯರಿಗೆ ವಂಚನೆ ಮಾಡಿದ್ದ ಈತನ ಅಸಲಿ ಮುಖವಾಡ ದತ್ತಗಂಜ್​ನಲ್ಲಿ ಬಹಿರಂಗವಾಗಿದೆ.

ದತ್ತಗಂಜ್​ನಲ್ಲಿ ಯುವತಿಯೊಬ್ಬಳು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ತನ್ನ ಗಂಡ ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಿಸಿದ್ದಾಳೆ. ಈಕೆಯ ದೂರಿನ ಮೇರೆಗೆ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.​

RELATED ARTICLES

Related Articles

TRENDING ARTICLES