ಬೆಂಗಳೂರು : ಇಂದು ರಾಜ್ಯ ಬಜೆಟ್, ಸಿಎಂ ಸಿದ್ದರಾಮಯ್ಯ 14 ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕಾಂಗ್ರೆಸ್ ನ ಗ್ಯಾರೆಂಟಿ ಯೋಜನೆಗಳಿಗೆ ಹಣದ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಹಲವು ಇಲಾಖೆಗಳಿಂದ ಆದಾಯ ಕ್ರೂಢೀಕರಿಸಲು ಸಿದ್ದತೆ ನಡೆಸಿದೆ.
ಇದನ್ನೂ ಓದಿ: ಇಂದು ರಾಜ್ಯ ಬಜೆಟ್: 14 ನೇ ಬಾರಿಗೆ ಸಿಎಂ ಸಿದ್ದು ಬಜೆಟ್ ಮಂಡನೆ
5 ಇಲಾಖೆಗಳಿಗೆ ಟಾರ್ಗೆಟ್: ಪ್ರಮುಖವಾಗಿ 5 ಇಲಾಖೆಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಿದ್ದು ಸಿಎಂ ಸಿದ್ದರಾಮಯ್ಯ ಅಬಕಾರಿ ಇಲಾಖೆಯಿಂದ ಹೆಚ್ಚಿನ ಶೇಖರಣೆಗೆ ಒತ್ತುನೀಡಿ ಕನಿಷ್ಟ 40 ಸಾವಿರ ಕೋಟಿ ಸಂಗ್ರಹಿಸಲು ಟಾರ್ಗೆಟ್ ನೀಡಿದ್ದಾರೆ ಎನ್ನಲಾಗಿದೆ.
ವಾಣಿಜ್ಯ ಇಲಾಖೆ ಅಧಿಕಾರಿಗಳಿಗೆ ಟಾಸ್ಕ್: 1 ಲಕ್ಷ ಕೋಟಿ ವಾಣಿಜ್ಯ ತೆರಿಗೆ ಸಂಗ್ರಹ, ನಗರ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ, ಆಸ್ತಿ ನೋಂದಣಿ, ಮುದ್ರಾಂಕ ಶುಲ್ಕವನ್ನ 10-15% ಹೆಚ್ಚಳ ಮಾಡಿ 25 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ, ಗಣಿಗಾರಿಕೆ ಇಲಾಖೆಯಿಂದ ರಾಯಲ್ಟಿ ಸಂಗ್ರಹಕ್ಕೆ ಬಜೆಟ್ನಲ್ಲಿ ಆದ್ಯತೆ ನೀಡಿ ಸುಮಾರು 11 ಸಾವಿರ ಕೋಟಿ ತೆರಿಗೆ ಸಂಗ್ರಹಕ್ಕೆ ಒತ್ತು, ಮೋಟಾರು ವಾಹನ ತೆರಿಗೆ ಹೆಚ್ಚಿಸಿ 12 ಸಾವಿರ ಕೋಟಿ ಆದಾಯ ಸಂಗ್ರಹ ನಿರೀಕ್ಷೆಮಾಡಿ ರಾಜ್ಯದ ಜನತೆಗೆ ಹೆಚ್ಚಿನ ಹೊರೆಯಾಗುವ ಸಧ್ಯತೆ ಇದೆ ಎನ್ನಲಾಗಿದೆ.


