Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Thursday, October 17, 2019

ಕಾರ್ನಾಡ್​ ಅಗಲಿಕೆಗೆ ಮೋದಿ ಸಂತಾಪ

0

ಬೆಂಗಳೂರು: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್​ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಕಾರ್ನಾಡ್​ ಅಗಲಿಕೆಗೆ ಸಂತಾಪ ಸೂಚಿಸಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ. “ಮಾಧ್ಯಮಗಳಲ್ಲಿ ತಮ್ಮ ಬಹುಮಖ ನಟನೆಯಿಂದ ಗಿರೀಶ್ ಕಾರ್ನಾಡ್​ ಎಲ್ಲರ ನೆನಪುಗಳಲ್ಲಿ ಉಳಿಯಲಿದ್ದಾರೆ. ತಮ್ಮ ನೆಚ್ಚಿನ ವಿಚಾರಗಳ ಬಗ್ಗೆ ಅವರು ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾರೆ. ಮುಂದಿನ ವರ್ಷಗಳಲ್ಲಿ ಅವರ ಕೃತಿ, ರಚನೆಗಳು ಇನ್ನಷ್ಟು ಜನಪ್ರಿಯವಾಗಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಅಂತ ಟ್ವೀಟ್ ಮಾಡಿದ್ದಾರೆ.

 

‘ಕೇಸರಿ’ ಕಲಿಗಳ ಗೆಲುವಿನ ನಾಗಲೋಟ ; ನಡೆಯಲಿಲ್ಲ ‘ದೋಸ್ತಿ’ ಆಟ..!

0

ಅಂತು ಇಂತೂ 17ನೇ ಲೋಕಸಭಾ ಎಲೆಕ್ಷನ್ ಮುಗಿದೇ ಬಿಟ್ಟಿದೆ. ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ರೆಡಿಯಾಗಿದೆ. ಮತದಾರರು ಮತ್ತೊಮ್ಮೆ ಮೋದಿ ಪಡೆಗೆ ಆಶೀರ್ವದಿಸಿದ್ದಾರೆ.
ಕರ್ನಾಟಕದಲ್ಲಿಯೂ ನಿರೀಕ್ಷೆಗೂ ಮೀರಿ ಬಿಜೆಪಿಗೆ ಯಶಸ್ಸು ಸಿಕ್ಕಿದೆ. ‘ಕೇಸರಿ’ ಕಲಿಗಳ ಗೆಲುವಿನ ನಾಗಲೋಟದ ಮುಂದೆ ‘ದೋಸ್ತಿ’ ಆಟ ನಡೆದಿಲ್ಲ.
ರಾಜ್ಯದ 28 ಕ್ಷೇತ್ರಗಳಲ್ಲಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಹಾಸನದಲ್ಲಿ ಜೆಡಿಎಸ್​​ನ ಪ್ರಜ್ವಲ್​ ರೇವಣ್ಣ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್​ನ ಡಿ.ಕೆ ಸುರೇಶ್​​​ ಗೆದ್ದಿದ್ದು ಬಿಟ್ಟರೆ ಬೇರೆ ಯಾವ ಕ್ಷೇತ್ರದಲ್ಲೂ ಮತದಾರರು ಮೈತ್ರಿಯ ಕೈಯನ್ನು ಹಿಡಿದಿಲ್ಲ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಪಡೆದಿದ್ದಾರೆ. 

ಬೆಂಗಳೂರು ದಕ್ಷಿಣ 

ತೇಜಸ್ವಿಸೂರ್ಯ (ಬಿಜೆಪಿ) -ಗೆಲುವು

ಬಿ.ಕೆ ಹರಿಪ್ರಸಾದ್​ (ಕಾಂಗ್ರೆಸ್​)- ಸೋಲು

ಅಂತರ : 3,31,192

==

ಬೆಂಗಳೂರು ಉತ್ತರ 

ಸದಾನಂದ ಗೌಡ (ಬಿಜೆಪಿ) -ಗೆಲುವು

ಕೃಷ್ಣ ಬೈರೇಗೌಡ (ಕಾಂಗ್ರೆಸ್) – ಸೋಲು

ಅಂತರ : 1,47,518

====

ಬೆಂಗಳೂರು ಕೇಂದ್ರ

ಪಿ.ಸಿ ಮೋಹನ್​ (ಬಿಜೆಪಿ)  – ಗೆಲುವು 

ರಿಜ್ವಾನ್​ ಅರ್ಷದ್​ (ಕಾಂಗ್ರೆಸ್​) – ಸೋಲು 

ಅಂತರ : 10,760

==

ಬೆಂಗಳೂರು ಗ್ರಾಮಾಂತರ 

ಅಶ್ವಥ್​ ನಾರಾಯಣ (ಬಿಜೆಪಿ)-ಸೋಲು

ಡಿ.ಕೆ ಸುರೇಶ್​ (ಕಾಂಗ್ರೆಸ್​) -ಗೆಲುವು

ಅಂತರ : 2,06,870

==

ಹಾಸನ

ಎ.ಮಂಜು (ಬಿಜೆಪಿ) – ಸೋಲು

ಪ್ರಜ್ವಲ್​ ರೇವಣ್ಣ (ಜೆಡಿಎಸ್​) -ಗೆಲುವು

ಅಂತರ : 1,41,324

==

ಕೋಲಾರ 

ಎಸ್​.ಮುನಿಸ್ವಾಮಿ ( ಬಿಜೆಪಿ) -ಗೆಲುವು

ಕೆ.ಹೆಚ್ ಮುನಿಯಪ್ಪ (ಕಾಂಗ್ರೆಸ್) – ಸೋಲು

ಅಂತರ : 2,10,021

==

ಮಂಡ್ಯ 

ನಿಖಿಲ್​ ಕುಮಾರಸ್ವಾಮಿ (ಜೆಡಿಎಸ್) -ಸೋಲು

ಸುಮಲತಾ ಅಂಬರೀಶ್ ( ಪಕ್ಷೇತರ) – ಗೆಲುವು

ಅಂತರ : 1,25,622

==

ಚಿತ್ರದುರ್ಗ 

ಎ.ನಾರಾಯಣಸ್ವಾಮಿ (ಬಿಜೆಪಿ) -ಗೆಲುವು

ಬಿ.ಎನ್ ಚಂದ್ರಪ್ಪ (ಕಾಂಗ್ರೆಸ್​) -ಸೋಲು

ಅಂತರ : 80,178

==

ಚಿಕ್ಕಬಳ್ಳಾಪುರ

ಬಿ.ಎನ್​  ಬಚ್ಚೇಗೌಡ (ಬಿಜೆಪಿ)- ಗೆಲುವು

ಎಮ್​ ವೀರಪ್ಪ ಮೊಯ್ಲಿ (ಕಾಂಗ್ರೆಸ್) – ಸೋಲು

ಅಂತರ : 1,81,079

==

ಮೈಸೂರು-ಕೊಡಗು

ಪ್ರತಾಪ್​ ಸಿಂಹ (ಬಿಜೆಪಿ) -ಗೆಲುವು

ಸಿ.ಎಸ್​ ವಿಜಯಶಂಕರ್ (ಕಾಂಗ್ರೆಸ್) -ಸೋಲು

ಅಂತರ : 1,36,194

==

ಚಾಮರಾಜನಗರ 

ವಿ. ಶ್ರೀನಿವಾಸಪ್ರಸಾದ್​ (ಬಿಜೆಪಿ) -ಗೆಲುವು

ಆರ್.ಧ್ರುವನಾರಾಯಣ್ (ಕಾಂಗ್ರೆಸ್) – ಸೋಲು

ಅಂತರ : 1,817

==

ತುಮಕೂರು 

ಜಿ.ಎಸ್​ ಬಸವರಾಜ್​ (ಬಿಜೆಪಿ) – ಗೆಲುವು

ಹೆಚ್.ಡಿ ದೇವೇಗೌಡ (ಜೆಡಿಎಸ್​) -ಸೋಲು

ಅಂತರ : 13,339

==

ಉಡುಪಿ-ಚಿಕ್ಕಮಗಳೂರು 

ಶೋಭ ಕರಂದ್ಲಾಜೆ (ಬಿಜೆಪಿ) – ಬಿಜೆಪಿ

ಪ್ರಮೋದ್​ ಮಧ್ವರಾಜ್ (ಜೆಡಿಎಸ್​) – ಸೋಲು

ಅಂತರ : 3,49,599

==

ದಕ್ಷಿಣ ಕನ್ನಡ 

ನಳಿನ್ ಕುಮಾರ್ ಕಟೀಲ್ ( ಬಿಜೆಪಿ) – ಗೆಲುವು

ಮಿಥುನ್​ ರೈ (ಕಾಂಗ್ರೆಸ್) – ಸೋಲು

ಅಂತರ : 2,74,621

==

ದಾವಣಗೆರೆ 

ಜಿ.ಎಂ ಸಿದ್ದೇಶ್ವರ (ಬಿಜೆಪಿ) -ಗೆಲುವು

ಮಂಜಪ್ಪ (ಕಾಂಗ್ರೆಸ್​) -ಸೋಲು

ಅಂತರ : 1,69,702

==

ಶಿವಮೊಗ್ಗ

ಬಿ.ವೈ ರಾಘವೇಂದ್ರ (ಬಿಜೆಪಿ) -ಗೆಲುವು

ಮಧು ಬಂಗಾರಪ್ಪ ( ಜೆಡಿಎಸ್) – ಸೋಲು

ಅಂತರ : 2,23,360

==

ಬೀದರ್​

ಭಗವಂತ್​​​​ ಖೂಬಾ (ಬಿಜೆಪಿ) – ಗೆಲುವು

ಈಶ್ವರ್​ ಖಂಡ್ರೆ ( ಕಾಂಗ್ರೆಸ್)- ಸೋಲು

ಅಂತರ : 1,948

==

ಕಲಬುರಗಿ 

ಉಮೇಶ್ ಜಾಧವ್ (ಬಿಜೆಪಿ) -ಗೆಲುವು

ಮಲ್ಲಿಕಾರ್ಜುನ್​ ಖರ್ಗೆ (ಕಾಂಗ್ರೆಸ್) -ಕಾಂಗ್ರೆಸ್​ 

ಅಂತರ : 95,452

==

ರಾಯಚೂರು 

ಅಮರೇಶ್ ನಾಯಕ್ (ಬಿಜೆಪಿ) – ಗೆಲುವು 

ಬಿ.ವಿ ನಾಯಕ್ (ಕಾಂಗ್ರೆಸ್) – ಸೋಲು

ಅಂತರ : 1,17,716

==

ವಿಜಯಪುರ 

ರಮೇಶ್​ ಜಿಗಜಿಣಗಿ (ಬಿಜೆಪಿ) – ಗೆಲುವು

ಸುನಿತಾ ಚೌಹಾಣ್​ (ಜೆಡಿಎಸ್) – ಸೋಲು

ಅಂತರ : 2,58,038

==

ಹಾವೇರಿ 

ಶಿವಕುಮಾರ ಉದಾಸಿ  (ಬಿಜೆಪಿ) – ಗೆಲುವು

ಡಿ.ಆರ್ ಪಾಟೀಲ್ ( ಕಾಂಗ್ರೆಸ್) – ಸೋಲು

ಅಂತರ : 1,40,882

==

ಕೊಪ್ಪಳ

ಕರಡಿ ಸಂಗಣ್ಣ (ಬಿಜೆಪಿ) -ಗೆಲುವು

ರಾಜಶೇಖರ್​ ಹಿಟ್ನಾಳ್ (ಕಾಂಗ್ರೆಸ್) -ಸೋಲು 

ಅಂತರ : 38,397

==

ಚಿಕ್ಕೋಡಿ 

ಅಣ್ಣಾ ಸಾಹೇಬ್​ ಜೊಲ್ಲೆ (ಬಿಜೆಪಿ)- ಗೆಲುವು

ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) -ಸೋಲು

ಅಂತರ : 1,16,361

==

ಬೆಳಗಾವಿ 

ಸುರೇಶ್ ಅಂಗಡಿ (ಬಿಜೆಪಿ) – ಗೆಲುವು

ವಿರೂಪಾಕ್ಷಿ ಸಾಧುಣ್ಣನವರ್ (ಕಾಂಗ್ರೆಸ್) – ಸೋಲು

ಅಂತರ : 3,91,304

==

ಧಾರವಾಡ 

ಪ್ರಹ್ಲಾದ್​ ಜೋಷಿ (ಬಿಜೆಪಿ) – ಗೆಲುವು 

ವಿನಯ್ ಕುಲಕರ್ಣಿ (ಕಾಂಗ್ರೆಸ್) – ಸೋಲು

ಅಂತರ : 2,05,072

==

ಬಳ್ಳಾರಿ

ದೇವೇಂದ್ರಪ್ಪ (ಬಿಜೆಪಿ) -ಗೆಲುವು

ವಿ.ಎಸ್ ಉಗ್ರಪ್ಪ (ಕಾಂಗ್ರೆಸ್) -ಸೋಲು

ಅಂತರ : 55,707

==

ಉತ್ತರ ಕನ್ನಡ

ಅನಂತ್​ಕುಮಾರ್ ಹೆಗಡೆ (ಬಿಜೆಪಿ)  – ಗೆಲುವು 

ಆನಂದ್​​ ಆಸ್ನೋಟಿಕರ್​ (ಜೆಡಿಎಸ್​) -ಸೋಲು

ಅಂತರ : 4,79,649

==

ಬಾಗಲಕೋಟೆ 

ಗದ್ದಿಗೌಡರ್ (ಬಿಜೆಪಿ) -ಗೆಲುವು 

ವೀಣಾ ಕಾಶಪ್ಪನವರ್ (ಕಾಂಗ್ರೆಸ್) – ಸೋಲು

ಅಂತರ : 1,68,187

 

 

ಎಕ್ಸಿಟ್​ ಪೋಲ್​ ಬಗ್ಗೆ ರಾಜಕೀಯ ಮುಖಂಡರು ಏನಂತಾರೆ..?

0

ಬೆಂಗಳೂರು: ಮತಗಟ್ಟೆ ಸಮೀಕ್ಷೆ ಹೊರಬೀಳುತ್ತಿದ್ದಂತೆಯೇ ಹಲವು ರಾಜಕೀಯ ಮುಖಂಡರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಪಾಲಿಗೆ ಖುಷಿ ಕೊಟ್ಟಿವೆ. ಈ ಸಂಬಂಧ ರಿಯ್ಯಾಕ್ಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, “ರಾಜ್ಯದಲ್ಲಿ ಬಿಜೆಪಿಗೆ 22 ಸೀಟ್ ಫಿಕ್ಸ್ ಅಂತಾ ಹೇಳಿದ್ರು. ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎಗೆ 300 ಸ್ಥಾನ ಬರುತ್ತೆ ಅಂತಾ ಹೇಳಿದ್ರು. ಈಗ ಎಲ್ಲ ಸಮೀಕ್ಷೆಗಳೂ ಅದನ್ನೇ ಹೇಳುತ್ತಿವೆ. ಮೇ.23ರಂದು ಎಲ್ಲರಿಗೂ ವಾಸ್ತವದ ಚಿತ್ರಣ ಗೊತ್ತಾಗಲಿದೆ” ಎಂದಿದ್ದಾರೆ.

ಎಕ್ಸಿಟ್ ಪೋಲ್ ಸಮೀಕ್ಷೆ ಬಗ್ಗೆ ‘ಕೈ’ ನಾಯಕರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಸಮೀಕ್ಷೆಯನ್ನ ರಾಜಕೀಯ ನಾಯಕರು ನಡೆಸೋಕೆ ಬರುತ್ತಾ? ಪರಮೇಶ್ವರ್​ ಹೇಳಿಕೆಯಲ್ಲಿ ಹತಾಶೆ ಭಾವನೆ ಇದೆ. ರಾಜ್ಯದಲ್ಲಿ ತೀವ್ರ ಬರ, ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. 2-3 ವಾರದಲ್ಲಿ ಮಳೆಯಾಗದೇ ಇದ್ದರೆ ಪರಿಸ್ಥಿತಿ ಕಠಿಣ. ಹೀಗಾಗಿ ಬಿಜೆಪಿ ಕಚೇರಿಯಲ್ಲಿ ಹೋಮ ನಡೆಸಲಾಗುತ್ತಿದೆ” ಎಂದಿದ್ದಾರೆ.

ಎಕ್ಸಿಟ್ ಪೋಲ್ ಈಸ್ ನಾಟ್ ಎ ಎಕ್ಸಾಕ್ಟ್​ ಪೋಲ್: ಎಕ್ಸಿಟ್​ ಪೋಲ್​ನಲ್ಲಿ NDAಗೆ ಸ್ಪಷ್ಟ ಬಹುಮತ ಬಂದಿರುವ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್​ ಪ್ರತಿಕ್ರಿಯೆ ನೀಡಿದ್ದು, ಎಕ್ಸಿಟ್​ ಪೋಲ್​ ಈಸ್​ ನಾಟ್​ ಎಕ್ಸಾಕ್ಟ್​ ಪೋಲ್​. ಮೂಡ್ ಸೆಟ್ ಮಾಡಿ ಇವಿಎಂಗಳನ್ನ ತಿರುಚುವ ಹುನ್ನಾರ ಮಾಡಲಾಗ್ತಿದೆ. ಚಂದ್ರಬಾಬು ನಾಯ್ಡು ಇದನ್ನ ಪದೇ ಪದೆ ಹೇಳ್ತಾನೇ ಇದ್ದಾರೆ. ಮೇ 23ರ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ” ಎಂದಿದ್ದಾರೆ.

ಬಿಜೆಪಿ ಅಧ್ಯಕ್ಷರು ಸಮೀಕ್ಷೆ ಮಾಡಿಸಿದಂತಿದೆ: ಎಕ್ಸಿಟ್ ಪೋಲ್​ನಲ್ಲಿ NDAಗೆ ಸ್ಪಷ್ಟ ಬಹುಮತ ವಿಚಾರವಾಗಿ ಬೆಂಗಳೂರಿನಲ್ಲಿ ಡಿಸಿಎಂ ಪರಮೇಶ್ವರ್​​ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ಎಕ್ಸಿಟ್​ ಪೋಲ್​ನಲ್ಲಿ ವಿಶ್ವಾಸ ಇಲ್ಲ. ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ರಾಜ್ಯದಲ್ಲಿ ಮೈತ್ರಿ ಪಕ್ಷಗಳು 20 ಕ್ಷೇತ್ರದಲ್ಲಿ ಗೆಲ್ಲುತ್ತೆ. ಬಿಜೆಪಿ 18 ಸೀಟು ಬರುತ್ತೆ ಆದ್ರೆ ನಂಬಲು ಸಾಧ್ಯನಾ? ಸಮೀಕ್ಷೆಯನ್ನು ಬಿಜೆಪಿ ಅಧ್ಯಕ್ಷರು ಮಾಡಿಸಿದ ಹಾಗೇ ಇದೆ. ಫಲಿತಾಂಶದ ಬಳಿಕ ಎಲ್ಲಾ ಚಿತ್ರಣ ಗೊತ್ತಾಗುತ್ತೆ” ಎಂದಿದ್ದಾರೆ.

ಇಂಥಾ ಸರ್ವೇ ಬಗ್ಗೆ ವಿಶ್ವಾಸ ಇಲ್ಲ: ಒಂದೆಡೆ ಬಿಜೆಪಿ ಸಮೀಕ್ಷೆಗಳಿಂದ ಫುಲ್ ಖಷ್ ಆಗಿದ್ರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಥ ಸರ್ವೆಗಳ ಮೇಲೆ ನಮಗೆ ನಂಬಿಕೆಯೇ ಇಲ್ಲ ಅಂತಾ ಟ್ವೀಟ್‌ ಮಾಡಿದ್ದಾರೆ. “ಇಂಥ ಎಕ್ಸಿಟ್‌ ಪೋಲ್‌ಗಳನ್ನ ನಾನು ನಂಬುವುದಿಲ್ಲ. ಬಿಜೆಪಿ ವಿರುದ್ಧದ ಯುದ್ಧದಲ್ಲಿ ಎಲ್ಲ ವಿರೋಧ ಪಕ್ಷಗಳೂ ಒಂದಾಗಬೇಕು. ಸಹಸ್ರಾರು ಇವಿಎಂಗಳನ್ನ ಕಂಟ್ರೋಲ್ ಪಡೆಯಲು ಇಂಥ ತಯಾರಿ ನಡೆಸಲಾಗಿದೆ” ಅಂತಾ ಮಮತಾ ಬ್ಯಾನರ್ಜಿ ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ.

ಸಮೀಕ್ಷೆ ಉಲ್ಟಾ ಆದ ಉದಾಹರಣೆಯೂ ಇದೆ: ಚುನಾವಣೋತ್ತರ ಸಮೀಕ್ಷೆಗಳು ನಿಖರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ಬಾರಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆದ ಉದಾಹರಣೆಗಳೂ ಕೂಡ ಇದೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಗಳು ವಿವಿಧ ಮೂಲಗಳ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಪ್ರಸ್ತುತ ಬಹಿರಂಗವಾಗಿರುವ ಬಹುತೇಕ ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳ ಕುರಿತು ಅಂಕಿ-ಅಂಶಗಳನ್ನು ನೀಡಿವೆ. ಆದ್ರೆ ಇದನ್ನ ನಂಬಲು ಸಾಧ್ಯವಿಲ್ಲ” ಅಂತ ಅಮರೀಂದರ್ ಸಿಂಗ್ ಹೇಳಿದ್ದಾರೆ.

23, 24ರಂದು ಮಂಡ್ಯದಲ್ಲಿ ನಿಷೇಧಾಜ್ಞೆ..!

0

ಮಂಡ್ಯ: ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಹಿನ್ನಲೆಯಲ್ಲಿ ಮಂಡ್ಯದಾದ್ಯಂತ  ಮೇ 23, 24ರಂದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಘರ್ಷಣೆ ಸಂಭವಿಸುವ ಬಗ್ಗೆ ಮಾಹಿತಿ ಅಭ್ಯವಾಗಿರುವ ಹಿನ್ನೆಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮೇ 23ರ ಬೆಳಗ್ಗೆ 6 ರಿಂದ ಮೇ 24ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಡಿಸಿ ಪಿ.ಸಿ.ಜಾಫರ್  ಜಾರಿಗೊಳಿಸಿದ್ದಾರೆ. ಈ ಸಂದರ್ಭ ಸಭೆ ಸೇರುವುದು, ವಿಜಯೋತ್ಸವ ಆಚರಣೆ ನಿಷೇಧಿಸಲಾಗಿದ್ದು, ಜಿಲ್ಲಾಡಳಿತ ಮದ್ಯ ಮಾರಾಟಕ್ಕೂ ಎರಡು ದಿನ ಬ್ರೇಕ್ ಹಾಕಿದೆ.

ಕುಂದಾಪುರದ ನಿರ್ದೇಶಕರಿಂದ ‘ಹನುಮಂತ’ನ ಹೊಸ ಸಿನಿಮಾ..!

0

ಉಡುಪಿ: ಲಕ್, ಚಾನ್ಸ್ ಅಂದ್ರೆನೇ ಹಾಗೆ ಅದು ಸಿಕ್ರೆ ಬಂಪರ್ ಖಂಡಿತಾ. ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡಬಹುದು. ಈ ಲಕ್​ ಜೊತೆ ಒಂದಿಷ್ಟು ಪ್ರತಿಭೆ ಸೇರಿದ್ರೆ ಹಳ್ಳಿ ಪ್ರತಿಭೆ ದಿಲ್ಲಿಯಲ್ಲಿ ಮಿಂಚಬಹುದು. ಇದಕ್ಕೆ ಕರುನಾಡಿನ ಹಾರ್ಟು ಕದ್ದ ಹನುಮಂತ ಅವರೇ ಸಾಕ್ಷಿ. ಹನುಮ ಸಿಲ್ವರ್ ಸ್ಕ್ರೀನ್​ಗೆ ಅಪ್ಪಳಿಸಲು ಸಿದ್ಧವಾಗಿದ್ದಾರೆ.

ದೇಸಿ ಸ್ಟೈಲ್ ಹಾಡು ಹೇಳಿ ಜನರನ್ನು ಮೋಡಿ ಮಾಡಿರೋ ಹನುಮಂತ ಮತ್ತೆ ಸುದ್ದಿಯಾಗ್ತಿದ್ದಾರೆ. ನಮ್ ಹನುಮಣ್ಣನ ಜೀವನಗಾಥೆ ಸಿನೆಮಾ ಆಗ್ತಾ ಇದೆ. ಸಿಟಿಯನ್ನೇ ನೋಡದ ಹನುಮಂತ, ಕರುನಾಡ ಕಣ್ಮಣಿ ಆಗಿದ್ದನ್ನ ಬೆಳ್ಳಿ ತೆರೆ ಮೇಲೆ ನೋಡಿ ಸೀಟಿ ಹೊಡಿಯೋಕೆ ನಾವು ರೆಡಿಯಾಗಬೇಕಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಸಂದೇಶ್ ಶೆಟ್ಟಿ ಆಜ್ರಿ ಹನುಮಂತನ ಚಿತ್ರಕ್ಕೆ ನಿರ್ದೇಶಕ. ಈ ಹಿಂದೆ ‘ಕತ್ತಲೆ ಕೋಣೆ’ ಎಂಬ ಹಾರರ್ ಕಂ ಸಸ್ಪೆನ್ಸ್ ಮೂವಿಯನ್ನು ಸಂದೇಶ್ ಶೆಟ್ಟಿ ನಿರ್ದೇಶಿಸಿದ್ದರು. ಸಾಮಾಜಿಕ ಪಿಡುಗಿನ ಕುರಿತಾದ ಸಂದೇಶ್ ಶೆಟ್ಟಿ ಚಿತ್ರ ನಿರೀಕ್ಷೆಯಷ್ಟು ಯಶಸ್ಸು ಕಾಣಲಿಲ್ಲ. ಇದೀಗ ಹನುಮನ ಚರಿತ್ರೆ ಬರೆಯೋಕೆ ಶುರು ಮಾಡಿದ್ದಾರೆ. ಸ್ವತಃ ಹನುಮಂತಣ್ಣನ ಜೊತೆ ಸಂದೇಶ್ ಶೆಟ್ಟಿಯದ್ದು ಒಂದು ಸಿಟ್ಟಿಂಗ್ ಆಗಿದೆ. ಕಥೆ ಕೇಳಿರುವ ಹನುಮಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನಂತೆ.

ಒಂದೂವರೆ ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಆಗ್ತಾ ಇದೆ. ತಸ್ಮಯ್ ಪ್ರೊಡಕ್ಷನ್ ನಂಬರ್ 2 ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಇಸ್ರೇಲ್‌ನಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಮತ್ತು ಪವಿತ್ರ ದಂಪತಿ ಈ ಚಿತ್ರಕ್ಕೆ ದುಡ್ಡು ಹಾಕ್ತಾ ಇದ್ದಾರೆ. ಈ ಮಳೆಗಾಲ ಮುಗಿದ ಕೂಡಲೇ ಶೂಟಿಂಗ್ ಶುರುವಾಗಲಿದ್ದು, ಹನುಮಂತ ಅವರ ಹುಟ್ಟಿನಿಂದ ಸರಿಗಮಪ ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗೋ ತನಕದ – ಆ ನಂತರದ ಕಥೆ ಚಿತ್ರಕಥೆಯಾಗ್ತಾ ಇದೆ. ಹನುಮಂತ ಅವರ ಊರು ಹಾವೇರಿಯ ಸುತ್ತಮುತ್ತಲೇ ಶೂಟಿಂಗ್ ನಡೆಯುತ್ತೆ. ಚಿತ್ರಕ್ಕೆ 8 ಟೈಟಲ್ ಗಳನ್ನು ಬರೆದಿರುವ ನಿರ್ದೇಶಕ ಸಂದೇಶ್ ಶೆಟ್ಟಿ ಒಂದನ್ನು ಫೈನಲ್ ಮಾಡಲಿದ್ದಾರೆ. ಹನುಮಂತನ ಪಾತ್ರಕ್ಕೆ ಯುವಕನಿಗಾಗಿ ಹುಡುಕಾಡುತ್ತಿರುವ ನಿದೇಶಕರು, ಹಾವೇರಿ- ಕೊಪ್ಪಳದ ಯುವಕನೊಬ್ಬನಿಗೆ ಅವಕಾಶ ಕೊಡಲಾಗುವುದು ಎಂದು ಹೇಳಿದ್ದಾರೆ. ಹಾವೇರಿಗೆ ಹೋಗಿ ಒಂದು ವಾರ ಹನುಮಂತ ಅವರ ಜೊತೆ ಇರಲಿರುವ ನಿರ್ದೇಶಕ ಸಂದೇಶ್ ಶೆಟ್ಟಿ, ಹನುಮಂತ ಅವರ ಜೀವನ, ಮ್ಯಾನರೀಸಂ- ಹಳ್ಳಿಯ ವಾತಾವರಣವನ್ನು ಅಧ್ಯಯನ ಮಾಡಲಿದ್ದಾರೆ.

ಈಗಾಗಲೇ ಗಾಯಕ ಮೆಹಬೂಬ್ ಸಾಬ್‌ಗೆ ಮೊದಲ ಬಾರಿಗೆ ಸಿನೆಮಾದಲ್ಲಿ ಅವಕಾಶ ನೀಡಿದ ಯುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿಯಲ್ಲಿ ಈಗ ಮತ್ತೊಬ್ಬ ಸಿಂಗರ್​ಗೆ ಅವಕಾಶ ನೀಡಲಿದ್ದಾರೆ. ಸೀದಾ ಸಾದಾ ಹೈಳಿ ಹೈದನಾಗಿ, ಸಂಗೀತದ ಮೂಲಕ ಮನೆಮಾತಾಗಿರುವ ಹನುಮಂತ ಅವರ ಜೀವನಚರಿತ್ರೆ ಸಿನೆಮಾ ಆಗ್ತಾ ಇರೋದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ.

ಅಶ್ವಥ್ ಆಚಾರ್ಯ, ಉಡುಪಿ

ನಡೆದುಕೊಂಡೇ ಬಂದು ಮತ ಚಲಾಯಿಸಿದ ರಾಹುಲ್ ಗಾಂಧಿ..!

0

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಔರಂಗಜೇಬ್​ ನಗರದ ಎನ್​.ಪಿ. ಸೀನಿಯರ್​ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ದೇಶಾದ್ಯಂತ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯುತ್ತಿದ್ದು, ರಾಹುಲ್ ಗಾಂಧಿ ಅವರು ಬೆಳಗ್ಗೆ ಮನೆಯಿಂದಲೇ ನಡೆದುಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.

ದಿನವೂ ಹೈ ಸೆಕ್ಯುರಿಟಿ ವಾಹನದಲ್ಲಿ ಓಡಾಡುವ ರಾಹುಲ್​ ಗಾಂಧಿ ಇಂದು ಭಿನ್ನವಾಗಿ ಕೇಂದ್ರ ದೆಹಲಿಯಲ್ಲಿರುವ ತಮ್ಮ ಮನೆಯಿಂದ ಮತಗಟ್ಟೆಯ ತನಕ ನಡೆದುಕೊಂಡು ಬಂದು ಮತ ಚಲಾಯಿಸಿದ್ರು. ನಂತರ ಮಾತನಾಡಿ, “ಇದೊಂದು ಗುಡ್​ ಫೈಟ್. ನರೇಂದ್ರ ಮೋದಿಯವರು ತಿರಸ್ಕಾರ ಮತ್ತು ನಾನು ಪ್ರೀತಿಯನ್ನು ಉಪಯೋಗಿಸಿಕೊಂಡಿದ್ದೇನೆ. ಪ್ರೀತಿಯೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಜನರು ನಮ್ಮ ಮಾಲೀಕರು. ಜನರ ನಿರ್ಧಾರವನ್ನು ನಾವು ಸ್ವೀಕರಿಸುತ್ತೇವೆ” ಅಂತ ಹೇಳಿದ್ದಾರೆ.

”ಈ ಚುನಾವಣೆಯಲ್ಲಿ ನಾಲ್ಕು ಪ್ರಮುಖ ವಿಚಾರಗಳಿವೆ. ಇವು ನಮ್ಮ ವಿಚಾರಗಳಲ್ಲ. ಜನರ ವಿಚಾರಗಳು. ಇವುಗಳಲ್ಲಿ ನಿರುದ್ಯೋಗ ಪ್ರಮುಖವಾದದ್ದು. ನಂತರ ಕೃಷಿಕರ ಸಮಸ್ಯೆ, ನೋಟು ಅಮಾನ್ಯ, ಗಬ್ಬರ್​ ಸಿಂಗ್ ಟ್ಯಾಕ್ಸ್​, ಭ್ರಷ್ಟಾಚಾರ ಮತ್ತು ರಫೇಲ್ ವಿವಾದ” ಅಂತ ಹೇಳಿದ್ರು. ನವದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಅಜಯ್​ ಮಾಕೆನ್ ಅವರೂ ರಾಹುಲ್ ಗಾಂಧಿ ಜೊತೆಗಿದ್ದರು.

ಇಂದು ದೇಶಾದ್ಯಂತ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯಲಿದ್ದು, 6 ರಾಜ್ಯ, ಒಂದು ಕೇಂದ್ರಾಡಳಿತ ಕ್ಷೇತ್ರದಲ್ಲಿ ಜನ ಹಕ್ಕು ಚಲಾಯಿಸಲಿದ್ದಾರೆ. ದೇಶದ 59 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳದ ತಲಾ 8 ಕ್ಷೇತ್ರ, ದೆಹಲಿಯ 7 ಮತ್ತು ಜಾರ್ಖಂಡ್​ನ 4 ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ.

ಡಿಕೆಶಿಯನ್ನು ಮಾರಿ ಕೋಣಕ್ಕೆ ಹೋಲಿಸಿದ ರೇಣುಕಾಚಾರ್ಯ..!

0

ಹುಬ್ಬಳ್ಳಿ : ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಶಾಸಕ ರೇಣುಕಾಚಾರ್ಯ ಅವರು ಮಾರಿ ಕೋಣಕ್ಕೆ ಹೋಲಿಸಿದ್ದಾರೆ.
ಕುಂದಗೀಳದಲ್ಲಿ ಪ್ರಚಾರದ ವೇಳೆ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ”ಮಾರಿ ಹಬ್ಬಕ್ಕೆ ಬಲಿ ಕೊಡುವ ಮುಂಚೆ ಕೋಣಕ್ಕೆ ಎಣ್ಣೆ ಹಚ್ಚಿ ತಿಕ್ತಾರೆ. ಅದೇ ರೀತಿ ಕಾಂಗ್ರೆಸ್​ ಡಿಕೆಶಿ ಅವರನ್ನ ಸರಿಯಾಗಿ ಬಳಸಿಕೊಳ್ತಿದೆ. ಮಾರಿ ಕೋಣವನ್ನುಕಡಿಯಬೇಕೆಂದು ಇಲ್ಲಿಗೆ ಕಾಂಗ್ರೆಸ್​ನವರು ಕರೆತಂದಿದ್ದಾರೆ” ಎಂದು ವಾಕ್​ಪ್ರಹಾರ ನಡೆಸಿದರು.
ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ”ಕುಂದಗೋಳ ಕ್ಷೇತ್ರಕ್ಕೆ ಒಳ್ಳೆಯದಾಗೋದಾದ್ರೆ ನನ್ನ ಬಲಿ ಕೊಡ್ಲಿ. ಕೋಣ ಬಲಿಕೊಡೋದು ಊರಿಗೆ ಒಳ್ಳೆಯದಾಗಲಿ ಅಂತ. ನಗುವುದು ಸಹಜ ಧರ್ಮ,ನಗಿಸುವದು ಪರಧರ್ಮ” ಎಂದು ತಿರುಗೇಟು ನೀಡಿದ್ರು.

37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ : ಚಲುವರಾಯಸ್ವಾಮಿ

0

37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ ಅಂತ ಮಾಜಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ”ಸಿಎಂ ಒಂದು ರಾಷ್ಟ್ರೀಯ ಪಕ್ಷಕ್ಕೆ ಸೂಚನೆ ನೀಡಿದ್ದಾರೆ. ಆದ್ರೆ ಅವರ ನಡವಳಿಕೆ ಮಾತ್ರ ಬದಲಾವಣೆ ಮಾಡಿಕೊಳ್ಳಲ್ಲ. 37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ. ಯಾವುದೇ ಮೈತ್ರಿ ಸರ್ಕಾರದಲ್ಲಿ ಈ ರೀತಿಯ ನಡವಳಿಕೆ ನಾವು ನೋಡಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಒಬ್ಬ ಒಳ್ಳೆ ನಾಯಕ ಸಿಎಂ ಆಗಬೇಕು. ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹಲವು ಶಾಸಕರು ಬಯಸಿದ್ದಾರೆ. ಅವಱ್ಯಾರು ನಾಳೆ ಬೆಳಗ್ಗೆ ಕುಮಾರಸ್ವಾಮಿ ಅವ್ರನ್ನ ಬದಲಾಯಿಸಿ ಎಂದಿಲ್ಲ. ಜಿಲ್ಲೆಯಲ್ಲಿ ಸಿಎಂ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ” ಎಂದು ಹರಿಹಾಯ್ದಿದ್ದಾರೆ.

ಬ್ಯಾಗ್ ತೂಕ ಇಳಿಸಲು ಸರ್ಕಾರ ನಿರ್ಧಾರ : ಖಾಸಗಿ ಶಾಲೆಗಳ ನಕಾರ..!

0

ಬೆಂಗಳೂರು : ಶಾಲಾ ಮಕ್ಕಳ ಬ್ಯಾಗ್​ಗಳ ತೂಕಕ್ಕೆ ಸರ್ಕಾರ ಮಿತಿ ಹೇರಿದೆ. ಸರ್ಕಾರಿ ಶಾಲೆಗಳಲ್ಲದೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ಅನ್ವಯವಾಗುವಂತೆ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಆದರೆ, ಸರ್ಕಾರದ ಕ್ರಮಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಖಾಸಗಿ ಶಾಲಾ-ಸಂಘ ಸಂಸ್ಥೆಗಳು ‘ಅವೈಜ್ಞಾನಿಕ ಚಿಂತನೆಯಿಂದ ಸರ್ಕಾರ ಆದೇಶ ಮಾಡಿದ್ದು, ಪುನರ್​ ಪರಿಶೀಲನೆ ಮಾಡುವಂತೆ ಒತ್ತಾಯಿಸಿವೆ.
ತರಗತಿ ಅನುಗುಣವಾಗಿ ಸರ್ಕಾರವು ಮಕ್ಕಳಿಗೆ ಬ್ಯಾಗ್​ ಭಾರವನ್ನು ನಿಗಧಿಪಡಿಸಿದ್ದು, ಅದರ ಅನ್ವಯ, 1-2ನೇ ತರಗತಿ ಮಕ್ಕಳ ಬ್ಯಾಗ್​ ಭಾರ 1.5 ಕೆಜೆಯಿಂದ 2 ಕೆಜಿ, 3-5 ನೇತರಗತಿ ಮಕ್ಕಳ ಬ್ಯಾಗ್ ತೂಕ 2-3 ಕೆಜಿ, 6-8ನೇ ತರಗತಿ ಮಕ್ಕಳ ಬ್ಯಾಗ್​ ತೂಕ 3-4 ಕೆಜಿ, 9-10ನೇ ತರಗತಿ ಮಕ್ಕಳ ಬ್ಯಾಗ್​ ಭಾರ 4-5 ಕೆಜಿ ಮಾತ್ರ ಇರತಕ್ಕದ್ದು ಅಂತ ಸರ್ಕಾರ ಆದೇಶ ಹೊರಡಿಸಿದೆ.
ಅಷ್ಟೇಅಲ್ಲದೆ 1-2ನೇ ತರಗತಿ ಮಕ್ಕಳ ಕೈಯಲ್ಲಿ ಮನೆಗೆಲಸ ಮಾಡಿಸುವಂತಿಲ್ಲ. ಮಕ್ಕಳು ನೀರಿನ ಬಾಟಲಿಯನ್ನು ತರೋದು ಬೇಡ, ಬದಲಾಗಿ ಶಾಲೆಯಲ್ಲೇ ಶುದ್ಧ ಕುಡಿಯೋ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ತಿಂಗಳ 3ನೇ ಶನಿವಾರವನ್ನು ಬ್ಯಾಗ್​ ರಹಿತ ದಿನವನ್ನಾಗಿ ಆಚರಿಸಬೇಕು ಅನ್ನೋದು ಸೇರಿದಂತೆ ನಿಯಮಗಳನ್ನು ಕೂಡ ಜಾರಿಗೆ ತಂದಿದೆ.

ಯಕ್ಷಗಾನದಲ್ಲೂ ನಿಖಿಲ್​ ಎಲ್ಲಿದ್ದಿಯಪ್ಪಾ..!

0

ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ‘ಲೋಕ’ ಅಖಾಡಕ್ಕೆ ಇಳಿಯುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು ‘ ನಿಖಿಲ್​ ಎಲ್ಲಿದ್ದಿಯಪ್ಪಾ’ ಅನ್ನೋ ಡೈಲಾಗ್​. ನಿಖಿಲ್ ಅವರ ಚೊಚ್ಚಲ ಸಿನಿಮಾ ‘ಜಾಗ್ವಾರ್’ ಆಡಿಯೋ ಲಾಂಚ್ ಟೈಮ್​ನಲ್ಲಿ ಸಿಎಂ ಕುಮಾರಸ್ವಾಮಿ ಅವರು, ‘ನಿಖಿಲ್​ ಎಲ್ಲಿದ್ದಿಯಪ್ಪಾ’ ಅಂತ ಕರೆದಿದ್ದು ಎಲೆಕ್ಷನ್ ಟೈಮ್​ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲೆಕ್ಷನ್ ಮುಗಿದರೂ ಇದು ಅದೇ ಟ್ರೆಂಡ್​ನಲ್ಲಿದೆ.
ರಾಜ್ಯದಲ್ಲಿ ಲೋಕ ಸಭಾ ಚುನಾವಣೆ ಕಾವು ಮುಗಿದಿದ್ರು ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಮಾತು ಮಾತ್ರ ಜನ ಮರೆತಿಲ್ಲ. ಕುಂದಾಪುರ ಕೋಣೆಯಲ್ಲಿ ನಡೆದ ಶ್ರೀ ಕ್ಷೇತ್ರ ಕಮಲಶಿಲೆ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಕೌರವ ಎಲ್ಲಿದ್ದಿಯಪ್ಪಾ ಮಾತು ಕೇಳಿ ಬಂದಿದೆ. ಈ ಮೂಲಕ ಗಂಭೀರ ಪ್ರಸಂಗದಲ್ಲೂ ಹಾಸ್ಯದ ಹೊನಲು ಹರಿದಿದೆ.
ತೆಂಕು ಮತ್ತು ಬಡಗು ತಿಟ್ಟಿನ ಕೂಡಾಟದಲ್ಲಿ ಮೂಡಿ ಬಂದ ಯಕ್ಷಗಾನದಲ್ಲಿ ಭೀಮನ ಪಾತ್ರಧಾರಿ ಶಶಿಕಿರಣ್ ಕಾವು ಕೌರವನನ್ನು ಕರೆಯು ಸಂದರ್ಭ ಬಳಸಿಕೊಂಡ ಈ ಮಾತು ಸದ್ಯ ವೈರಲ್ ಆಗಿದೆ.ಸದ್ಯ ಚುನಾವಣೆ ಮುಗಿದರು ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಡೈಲಾಗ್ ಮಾತ್ರ ತರಹೇವಾರಿ ಟ್ರೋಲ್ ಆಗುತ್ತಲೇ ಇದೆ.

Popular posts