ನಿನ್ನೆ ಜಾಮೀನು ಪಡೆದು ಜೈಲಿಂದ ಹೊರಬಂದ ಹ್ಯಾಕರ್ ಶ್ರೀಕೃಷ್ಣ ಅವತಾರ ನೋಡಿದ್ರೆ ಅಯ್ಯೋ ಪಾಪ ಅನ್ನಿಸುವಂತಿತ್ತು ಯಾಕಂದ್ರೆ ಕಾಲಿಗೆ ಚಪ್ಪಲಿ ಇಲ್ಲದೆ, ಆಟೋದಲ್ಲಿ ಹೋದ ದೃಶ್ಯ ಹಾಕಿತ್ತು..ಹಾಗಂತ ನೀವೇನಾದ್ರು ಅಯ್ಯೋ ಪಾಪ ಅನ್ಕೊಂಡಿದ್ರೆ ನೀವು ಹ್ಯಾಕರ್ ಲೈಫ್ ಸ್ಟೈಲ್ ಬಗ್ಗೆ ತಿಳಿದಿಕೊಳ್ಳಲೇಬೇಕು.
ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಐಷರಾಮಿ ಜೀವನ ಚರಿತ್ರೆಯನ್ನ ಸಿಸಿಬಿ ತನಿಖೆಯಲ್ಲಿ ಬಯಲು ಮಾಡಿದೆ ಚಪ್ಪಲಿ ಸಹ ಇಲ್ಲದೇ ನಿನ್ನೆ ಜೈಲಿನಿಂದ ಹೊರಬಂದ ಹ್ಯಾಕರ್ ಶ್ರೀಕಿ ಕಾರು ಸಹ ಇಲ್ಲದೇ ಆಟೋ ಮೂಲಕ ನಿನ್ನೆ ಮನೆಗೆ ತೆರಳಿದ್ದಾನೆ ಆದ್ರೆ ಶ್ರೀಕಿ ಜೀವನ ಅಷ್ಟೋಂದು ಸಾಧಾರಣವಾದದ್ದಲ್ಲ, ಇವನು ಸ್ಟಾರ್ ಹೋಟೆಲ್ನಲ್ಲಿ ಇರ್ತಾನೆ, ನಿತ್ಯ ಭರ್ಜರಿ ಪಾರ್ಟಿ ಮಾಡ್ತಾನಂತೆ, ವಿದೇಶಕ್ಕೆ ಹೋಗ್ಬೇಕು ಅಂದ್ರೆ ಶ್ರೀಕಿಗೆ ಖಾಸಗಿ ಜೆಟ್ ರೆಡಿ ಇರುತ್ತೆ, ಐಷಾರಾಮಿ ಕ್ರೂಸ್ಗಳಲ್ಲಿ ಮೋಜು-ಮಸ್ತಿ ಮಾಡ್ತಾನೆ ಈ ಐನಾತಿ ಶ್ರೀಕಿ ಹ್ಯಾಕರ್ ಶ್ರೀಕ್ರಿಗೆ ನಿತ್ಯವೂ ಡ್ರಗ್ಸ್, ಮದ್ಯ, ಬೇಕೆ ಬೇಕು..!
ಆಶ್ಚರ್ಯ ಅಂದ್ರೆ , ಲಕ್ಷ ಲಕ್ಷ ಬಿಲ್ ಕಟ್ಟಿದ್ರೂ ಶ್ರೀಕಿ ಬಳಿ ಬ್ಯಾಂಕ್ ಅಕೌಂಟ್ ಇಲ್ಲ, ಹೋಟೆಲ್ಗೆ ಲಕ್ಷ ಲಕ್ಷ ಬಿಲ್ ಕಟ್ಟೋನ ಬಳಿ ಮೊಬೈಲ್ ಇಲ್ಲ, ಪ್ರತೀ ಬಾರಿ ಬೇರೆಯವರ ಮೊಬೈಲ್, ಲ್ಯಾಪ್ಟಾಪ್ ಬಳಸ್ತಾನೆ.ಡಾರ್ಕ್ವೆಬ್ ಮೂಲಕ ಕೆಲಸ ನಿರ್ವಹಿಸೋ ಹ್ಯಾಕರ್ ಶ್ರೀಕಿ ಸಿಸ್ಟಮ್ನಲ್ಲಾಗಲಿ, ಮೊಬೈಲ್ನಲ್ಲಾಗಲಿ ಡೇಟಾ ಸೇವ್ ಮಾಡಲ್ಲ ಯೂಸರ್ ಐಡಿ, ಪಾಸ್ವರ್ಡ್ ಎಲ್ಲವೂ ಅವನ ತಲೆಯಲ್ಲೇ ಇರುತ್ತೆ ಅಂತ ಖತರ್ನಾಕ್.
ಪೊಲೀಸರು ಈತನನ್ನ ಹುಷಾರಾಗಿ ವಿಚಾರಣೆ ಮಾಡ್ಬೇಕು ಯಾಕಂದ್ರೆ ಡ್ರಗ್ಸ್ ಸೇವಿಸಿ ಹ್ಯಾಕರ್ ಶ್ರೀಕಿ ದೇಹ ಸಂಪೂರ್ಣ ವೀಕ್ ಆಗಿದೆ, ಶ್ರೀಕಿಯ ಮೇಲೆ ಒತ್ತಡ ಹೇರುವಂತ್ತಿಲ್ಲ ಮತ್ತೊಂದ್ಕಡೆ ಪೊಲೀಸರು ಏನಾದ್ರು ಹೆಚ್ಚು ಪ್ರಶ್ನೆ ಕೇಳಿದ್ರೆ ಸಾಕ್ಷಿ ಮುಂದಿಡಿ ಅಂತಾನೆ ಶ್ರೀಕಿ ಸಾಕ್ಷಿ ಮುಂದಿಟ್ಟು ಪ್ರಶ್ನಿಸಿ ಸುಮ್ಮನೆ ಏನೂ ಕೇಳ್ಬೇಡಿ ಅಂತಾನೆ, ಸೈಬರ್ ಲೋಕದ ಅಪರಾಧಕ್ಕೆ ಸಾಕ್ಷಿ ಸಿಗದಂತೆ ಮಾಡಿರುವ ಶ್ರೀಕಿ ವಿರುದ್ಧ ಆರೋಪಗಳಿವೆ, ಹೇಳಿಕೆಗಳಿವೆ ಆದ್ರೆ ಸಾಕ್ಷಿಗಳೇ ಸರಿಯಾಗಿಲ್ಲ. ಹೀಗಾಗಿ ಶ್ರೀಕಿ ವಿಚಾರಣೆ ಮಾಡೋದು ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು .


