ರಾಯಚೂರು : ಪೋಲಿಸರು ಕೆಲವೊಮ್ಮೆ ಮಾಡುವ ತಪ್ಪಿನಿಂದ ಜನರ ನಡುವೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಅದೇ ರೀತಿ ರಾಯಚೂರಿನಲ್ಲಿ ಪೋಲಿಸರು ಲಾರಿ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು 500 ರೂ ದಂಡ ಕಟ್ಟಿ ಎಂದು ಮೆಸಜ್ ಕಳುಹಿಸಿ ಚಾಲಾಕನ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ರಾಯಚೂರು ಮೂಲದ ಭತ್ತ ಕಟಾವು ಮಷಿನ್ ಹೊತ್ತೊಯ್ಯುತ್ತಿದ್ದ ಲಾರಿಗೆ ಈ ಮೆಸೆಜ್ ಬಂದಿದ್ದು.
ಶರಣಗೌಡ ಪಿ ಮಾಲಿಪಾಟೀಲ್ ಎಂಬ ಲಾರಿ ಮಾಲೀಕನಿಗೆ ದಂಡ ಕಟ್ಟುವಂತೆ ಮಾಹಿತಿ ನೀಡಲಾಗಿದೆ.
ಚಾಲಕನ ಮೊಬೈಲ್ಗೆ ಇದರ ಕುರಿತಂತೆ ಸಂದೇಶ ಬಂದಿದ್ದು. ಈ ಸಂದೇಶದಲ್ಲಿ ವಾಹನ ಸಂಖ್ಯೆ : KA 64, 5999. ದಿ.07.11.24 ರಂದು ಕಲ್ಪತರು ಹುಣುಸೂರು, ಕೋರ್ಟ ರೋಡಿನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ್ದೀರಿ. ಹಾಗಾಗಿ 500 ದಂಡ ಕಟ್ಟಿ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಿ ಎಂದು ಸಂದೇಶ ರವಾನೆ ಮಾಡಲಾಗಿದೆ.


