ಬೆಂಗಳೂರು: ತಾಯಿ ಬೈದಳೆಂದು ಮಗನೊಬ್ಬ ಹೆತ್ತ ತಾಯಿಯನ್ನೇ ರಾಡ್‌ನಿಂದ ಹೊಡೆದು ಕೊಂದಿರುವ ಘಟನೆ ಕೆ.ಆರ್ಪುರಂನಲ್ಲಿ ನಡೆದಿದೆ.
ನೇತ್ರಾ ಮೃತ ದುರ್ದೈವಿ, ಮಗ ಪವನ್ ಕೊಲೆ ಮಾಡಿರೋ ಆರೋಪಿ. ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿರುವ ಮಗ ಪವನ್. ಇಂದು ಬೆಳಗ್ಗೆ 7.15ರ ಸುಮಾರಿಗೆ ಈತ ಕೊಲೆ ಮಾಡಿದ್ದೇನೆ.
ಘಟನೆಯ ವಿವರ:
ಬೆಳಗ್ಗೆ ಕಾಲೇಜಿಗೆ ಹೋಗಲು ರೆಡಿಯಾಗಿದ್ದ ಪವನ್. ತಾಯಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಆದರೆ ತಾಯಿ ಆಗ ಬೇರೆ ಕೆಲಸದಲ್ಲಿ ನಿರತಳಾಗಿದ್ದು ಕೋಪದಲ್ಲಿ ಬೈದಿದ್ದ ತಾಯಿ ನೇತ್ರಾ. ನೀನು ನನ್ನ ಮಗನೇ ಅಲ್ಲ, ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಳಂತೆ ತಾಯಿ. ಅಷ್ಟಕ್ಕೇ ಕೋಪಗೊಂಡ ಮಗ. ರಾಡ್‌ನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ.
ಈ ದಾಳಿ ನಿರೀಕ್ಷಸದ ತಾಯಿ ನೇತ್ರಾ. ರಾಡ್‌ನಿಂದ ಬಲವಾಗಿ ಹೊಡೆದಿದ್ದಕ್ಕೆ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾಳೆ.
ಇದನ್ನೂ ಓದಿ: CBI, IT, EDಗಳು ಈಗ ಸ್ವಾಯತ್ತ ಸಂಸ್ಥೆಗಳಾಗಿ ಉಳಿದಿಲ್ಲ: ಸಿಎಂ ಸಿದ್ದರಾಮಯ್ಯ


