Site icon PowerTV

ಸೋಷಿಯಲ್​ ಮಿಡಿಯೋದಲ್ಲಿ ಮತ್ತೆ ಬೆತ್ತಲಾದ ಪಾಕ್​ ಪ್ರಧಾನಿ; ಚೀನಾ ಪೋಟೊ ಕೊಟ್ಟು, ಮುನೀರ್​ಗೆ ಸನ್ಮಾನ

ಇಸ್ಲಾಮಾಬಾದ್‌: ಸದಾ ಒಂದಲ್ಲ ಒಂದು ಸುಳ್ಳು ಹೇಳುತ್ತಾ ಜಗತ್ತಿನ ಮುಂದೆ ಬೆತ್ತಲಾಗುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಜಗತ್ತಿನ ಮುಂದೆ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್​ ಷರೀಫ್​ ತನ್ನ ಸೇನಾ ಮುಖ್ಯಸ್ಥನಿಗೆ ಅಸಿಮ್​ ಮುನೀರ್​ಗೆ ಪೋಟೊವೊಂದನ್ನು ಗಿಫ್ಟ್​ ನೀಡಿ ನಗೆಪಾಟಲಿಗೆ ಈಡಾಗಿದ್ದಾರೆ.

ಇದನ್ನೂ ಓದಿ :ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ; ಪತ್ನಿ ಶೀಲ ಶಂಕಿಸಿ ಗಂಡನೇ ಹತ್ಯೆ ಮಾಡಿರುವ ಆರೋಪ

‘ಆಪರೇಷನ್​ ಸಿಂಧೂರ್’​ ನಂತರ ಸೋತರು ಮೀಸೆ ಮಣ್ಣಾಗಿಲ್ಲ ಎಂದು ವರ್ತಿಸುತ್ತಿರುವ ಪಾಕಿಸ್ತಾನದ, ಭಾರತದ ವಿರುದ್ದ ಗೆಲುವು ಸಾಧಿಸಿದ್ದೇವೆ ಎಂದು ಸಂಭ್ರಮಿಸುತ್ತಿದೆ. ಶೆಹಬಾಜ್​ ಷರೀಫ್​ ಸರ್ಕಾರದ ಲಾಡಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಆಸೀಮ್​ ಮುನೀರ್​, ಪಾಕಿಸ್ತಾನ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾನೆ, ಇದರ ನಡುವೆ ಫೀಲ್ಡ್​​ ಮಾರ್ಷಲ್​ ಎಂಬ ಬಿರುದನ್ನು ತನಗೆ ತಾನೇ ಕೊಟ್ಟುಕೊಂಡಿದ್ದಾನೆ.

ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಅಸಿಮ್‌ ಮುನೀರ್‌ ಪಾಕಿಸ್ತಾನದ ರಾಜಕಾರಣಿಗಳಿಗಾಗಿ ಔತಣಕೂಟವನ್ನು ಆಯೋಜಿಸಿದ್ದನು. ಈ ವೇಳೆ ಶಹಬಾಜ್‌ ಷರೀಫ್‌ ದೀರ್ಘ ವ್ಯಾಪ್ತಿಯ ರಾಕೆಟ್ ಲಾಂಚರ್‌ನಿಂದ ಕ್ಷಿಪಣಿ ಚಿಮ್ಮುತ್ತಿರುವ ಫೋಟೋವನ್ನು ಗಿಫ್ಟ್‌ ನೀಡಿದ್ದರು. ಇದನ್ನೂ ಓದಿ: BJP ಶಾಸಕರ ಅಮಾನತು ವಾಪಸ್​: ಸ್ಪೀಕರ್​ ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಟೀಕೆ

ಶಹಬಾಜ್‌ ಷರೀಫ್‌ ಗಿಫ್ಟ್‌ ನೀಡುತ್ತಿರುವ ಫೋಟೋವನ್ನು ಪಾಕಿಸ್ತಾನ ISPR ಹಂಚಿಕೊಂಡಿತ್ತು. ಈ ಫೋಟೋ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಈ ಫೋಟೋದ ಸತ್ಯಾಸತ್ಯತೆ ಪರಿಶೀಲನೆ ಇಳಿದಾಗ ಚೀನಾ ಸೇನೆಯ ಫೋಟೋ ಎನ್ನುವುದು ದೃಢಪಟ್ಟಿದೆ. 2019ರಲ್ಲಿ ಚೀನಾ ಪರೀಕ್ಷೆ ಮಾಡಿದ್ದ ಫೋಟೋವನ್ನು ಎಡಿಟ್‌ ಮಾಡಿ ಗಿಫ್ಟ್‌ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನೆಟ್ಟಿಗರು ಪಾಕಿಸ್ತಾನವನ್ನು ಫುಲ್‌ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. ಇದನ್ನೂ ಓದಿ :‘ಪರಿಹಾರ ಕೊಡ್ತಾರಂತೆ.., ನಾನೇ 10 ಲಕ್ಷ ಕೊಡ್ತೀನಿ ನನ್ನ ಮಗಳನ್ನ ತಂದುಕೊಡಿ’: ಬಾಲಕಿ ತಂದೆ ಆಕ್ರೋಶ

ವಿಜಯೋತ್ಸವ ಆಚರಿಸಲು ಪಾಕಿಸ್ತಾನಕ್ಕೆ ಯಾವುದೇ ಫೋಟೋ ಸಿಕ್ಕಿಲ್ಲ. ಈ ಕಾರಣಕ್ಕೆ ಚೀನಾ ಸೇನೆಯ ಫೋಟೋವನ್ನು ಎಡಿಟ್‌ ಮಾಡಿ ಗಿಫ್ಟ್‌ ನೀಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಈ ಫೋಟೋ ಸಾಕಷ್ಟು ವೈರಲ್‌ ಆಗಿದೆ.

Exit mobile version