ಬೆಂಗಳೂರು : ನಾನು ಯಾವ ಗುತ್ತಿಗೆದಾರನಿಗೂ ಉತ್ತರ ಕೊಡಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕಂಟ್ರಾಕ್ಟರ್ಗಳ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ಬಿಲ್ ವಿಚಾರವೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ನನಗೂ ಪ್ರಜ್ಞೆ ಇದೆ, ನನಗೂ ರಾಜಕಾರಣ ಗೊತ್ತಿದೆ. ಯಾವ ಕಂಟ್ರಾಕ್ಟರ್ ಹಿಂದೆ ಯಾರಿದ್ದಾರೆ, ನನಗೂ ಗೊತ್ತಿದೆ. ಯಾವ ಬ್ಲಾಕ್ ಮೇಲ್ ಕೂಡ ನನ್ನ ಮುಂದೆ ನಡೆಯಲ್ಲ. ವಿಪಕ್ಷದಲ್ಲಿದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರ್ತಿರಲಿಲ್ವಾ? ಎಂದು ಗುಡುಗಿದ್ದಾರೆ.
ಥ್ರೆಟ್ ಮಾಡಿದ್ರೆ ಕೇಳ್ತೀನಾ?
ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ. ಇಲ್ಲ ಅಂದ್ರೆ ಹಣ ಇಲ್ಲ ಎಂದು ಪರೋಕ್ಷವಾಗಿ ಕೆಲಸಗಳನ್ನು ಪುನರಾರಂಭಿಸಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನನಗೆ ಥ್ರೆಟ್ ಮಾಡಿದ್ರೆ ಕೇಳ್ತೀನಾ? ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ. ಲೆಟರ್ ಕೊಟ್ಟಿದ್ದು ಸತ್ಯ. ಅಶ್ವತ್ಥನಾರಾಯಣ, ಬೊಮ್ಮಾಯಿ ಸೇರಿದಂತೆ ಎಲ್ಲರೂ ತನಿಖೆ ಮಾಡಿ ಅಂತ ಸದನದಲ್ಲಿ ಅಂದಿದ್ದು ಸತ್ಯ ಎಂದು ತಿಳಿಸಿದ್ದಾರೆ.


