ನವದೆಹಲಿ: ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ದೇಶದ ತೃತೀಯ ನಾಗರಿಕ ಗೌರವವಾದ ಪದ್ಮಭೂಷಣ ಗೌರವ ಸಂದಿದೆ. 76 ನೇ ಗಣರಾಜ್ಯೋತ್ಸವದ ಮುನ್ನದಿನ ನಟ ಅನಂತ್ ನಾಗ್ಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನ ಘೋಷಿಸಿತ್ತು. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇದನ್ನೂ ಓದಿ :ಆಪರೇಷನ್ ಸಿಂಧೂರ್ ಸಕ್ಸಸ್; IPL ಫೈನಲ್ ಪಂದ್ಯಕ್ಕೆ ಸೇನಾ ಮುಖ್ಯಸ್ಥರಿಗೆ BCCI ಆಹ್ವಾನ
1948ರ ಸೆಪ್ಟಂಬರ್ 4ರಂದು ಅನಂತ್ ನಾಗ್ ಅವರು ಉತ್ತರ ಕನ್ನಡದ ಶಿರಳ್ಳಿ ಎಂಬಲ್ಲಿ ಜನಿಸಿದರು. 1973ರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ಅನಂತ್ ನಾಗ್, ಆನಂತರದಲ್ಲಿ ಶ್ಯಾಮ್ ಬೆನಗಲ್ ಅವರ ಅಂಕುರ್, ಬಯಲುದಾರಿ, ನಾ ನಿನ್ನ ಬಿಡಲಾರೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಆರಂಭಿಕ ಚಿತ್ರ ಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಿದ ಅನಂತ್ ನಾಗ್ ಅವರು ಆನಂತರ ಹಿಂದಿರುಗಿ ನೋಡಲಿಲ್ಲ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅನಂತ್ ನಾಗ್.
ಇದನ್ನೂ ಓದಿ:ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನೇಮಕ: ಈಶ್ವರ್ ಖಂಡ್ರೆ
ಇಂಥ ಪ್ರತಿಭಾನ್ವಿತ ಹಿರಿಯ ನಟರಿಗೆ ಇದೇ ಮೊದಲ ಬಾರಿಗೆ ಪದ್ಮ ಗೌರವ ಸಿಕ್ಕಿದೆ. ಕಲಾಸೇವೆಯಲ್ಲಿ ದಶಕಗಳ ಸೇವೆ ಸಲ್ಲಿಸಿದ್ದರೂ ಅವರಿಗೆ ಯಾವುದೇ ಪದ್ಮ ಪುರಸ್ಕಾರ ದೊರಕಿರಲಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗಷ್ಟೇ ಅಲ್ಲದೆ ಅನೇಕ ಕನ್ನಡಿಗರನ್ನು ಕಾಡಿತ್ತು. ಈಗ ಅವರಿಗೆ ಪದ್ಮಭೂಷಣ ಸಿಗುವ ಮೂಲಕ ದಶಕಗಳ ಆ ಕೂಗಿಗೆ ಮುಕ್ತಿ ಸಿಕ್ಕಂತಾಗಿದೆ.