Saturday, August 23, 2025
Google search engine
HomeUncategorizedಜನ ಸಾಯ್ತಿದ್ದಾರೆ, ಕಾಂಗ್ರೆಸ್​ ಅವರು ಪಂಚೆ ಎತ್ಕೊಂಡು ಸಮಾವೇಶಕ್ಕೆ ಹೋಗಿದ್ದಾರೆ: ಆರ್.ಅಶೋಕ್​

ಜನ ಸಾಯ್ತಿದ್ದಾರೆ, ಕಾಂಗ್ರೆಸ್​ ಅವರು ಪಂಚೆ ಎತ್ಕೊಂಡು ಸಮಾವೇಶಕ್ಕೆ ಹೋಗಿದ್ದಾರೆ: ಆರ್.ಅಶೋಕ್​

ಬೆಂಗಳೂರು : ಭಾರಿ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಹಾನಿಗೆ ಒಳಗಾಗಿದ್ದು. ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿ ವಿಪಕ್ಷ ನಾಯಕ ಆರ್​.ಅಶೋಕ್​ “ಕಾಂಗ್ರೆಸ್ ಜನರ ಸಮಾಧಿ ಮೇಲೆ ಸಮಾವೇಶ ಮಾಡುತ್ತಿದೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನ ರದ್ದು ಮಾಡುತ್ತಿದ್ದರು” ಎಂದು ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಆರ್​. ಅಶೋಕ್​ “ಕಾಂಗ್ರೆಸ್ ಜನರ ಸಮಾಧಿ ಮೇಲೆ ಸಮಾವೇಶ ಮಾಡುತ್ತಿದೆ. ನಿಮಗೆ ಮಾನ ಮರ್ಯಾದೆ ಇದ್ದಿದ್ದರೆ ಸಮಾವೇಶವನ್ನ ಕೂಡಲೇ ರದ್ದು ಮಾಡಿ. ಈ ಹಿಂದೆಯೋ ಸಾಯಿ ಲೇಔಟ್​ಗೆ ಭೇಟಿ ನೀಡಿದಾಗ ಸಮಸ್ಯೆಯನ್ನ ಸರಿ ಮಾಡ್ತೀವಿ ಅಂತ ಹೇಳಿದ್ರಿ. ಆದರೆ ಡಿಕೆಶಿ ಅವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಎಲ್ಲಾ ರಾಜಕಾಲುವೆಗಳಿಗೂ ಸೆನ್ಸರ್​ ಹಾಕುತ್ತೀವಿ ಅಂದಿದ್ರಿ, ನಿಮ್ಮ ಸೆನ್ಸರ್​ ಎಲ್ಲಿ.

ಇದನ್ನೂ ಓದಿ :ರಾಜಧಾನಿ ಎಕ್ಸ್​ಪ್ರೆಸ್​ ಸೇರಿದಂತೆ 2 ರೈಲುಗಳ ಹಳಿ ತಪ್ಪಿಸಲು ವಿಫಲ ಯತ್ನ

ಕಾಂಗ್ರೆಸ್​ ಅವರಿಗೆ ಸೆನ್ಸ್​ ಇಲ್ಲ. ಡಿಕೆ ಶಿವಕುಮಾರ್ ಅವರು ಡೈಲಾಗ್​ ಕಿಂಗ್. ಅವರು ಟೀಕೆ ಸಾಯುತ್ತೆ. ಕೆಲಸ ಉಳಿಯುತ್ತೆ ಅಂತ ಹೇಳಿದ್ರು. ಆದರೆ ಹವಮಾನ ಇಲಾಖೆ ಒಂದು ತಿಂಗಳ ಹಿಂದೆ ಭಾರಿ ಮಳೆ ಬೀಳುತ್ತೆ ಅಂತ ಹೇಳಿತ್ತು. ಈಗಿದ್ದಾಗ ಕಾಂಗ್ರೆಸ್​ ಅವರು ಏನು ಮಣ್ಣು ತಿನ್ನುತಿದ್ದರಾ.

ಕಾಂಗ್ರೆಸ್​ ಅವರು ಪಂಚೆ ಎತ್ಕೊಂಡು ಸಮಾವೇಶಕ್ಕೆ ಹೋಗ್ತಾರೆ. 5 ಜನ ಸತ್ತಿದ್ದಾರೆ. ಸಾವಿನ ಮೇಲೆ ಕಾಂಗ್ರೆಸ್​ ಸಮಾವೇಶ ಮಾಡುತ್ತಿದೆ. ಬಾಂಬ್​ ಹಾಕಿದ್ದಕ್ಕೆ ಸಾಕ್ಷಿ ಕೊಡಿ ಅಂತೀರಾ. ಆದರೆ ನೀವು ಬೆಂಗಳೂರಿನಲ್ಲಿ ಎಷ್ಟು ಪಾತ್​ ಹೋಲ್​ ಇದೆ ಅಂತ ಮೊದಲು ಸಾಕ್ಷಿ ಕೊಡಿ. ಬೊಮ್ಮಾಯಿ ಮತ್ತೆ ಯಡಿಯೂರಪ್ಪ ಇದ್ದಾಗ ಪ್ರತಿ ವರ್ಷ 8 ಸಾವಿರ ಕೋಟಿ ಬೆಂಗಳೂರುಗೆ ಕೊಟ್ಟಿದ್ದಾರೆ. ಇವಾಗ 8 ಸಾವಿರ ಕೋಟಿ ಸುರಂಗಕ್ಕೆ ಹಾಕೋಕೆ ಹೋಗಿದ್ದಾರೆ. ಅದಿನ್ನೂ ಮುಗಿಯೋದಕ್ಕೆ 20-30 ವರ್ಷ ಸಮಯ ಆಗುತ್ತೆ. ಇದನ್ನೂ ಓದಿ :ಅಭಿಷೇಕ್​ ಶರ್ಮಾ ಜೊತೆ ಅನುಚಿತ ವರ್ತನೆ; IPL ಪಂದ್ಯದಿಂದ ದಿಗ್ವೇಶ್​ ರಾಥಿ ಅಮಾನತು

ಕಾಂಗ್ರೆಸ್​ ಸರ್ಕಾರ ಮನೆ ಬಾಗಿಲಿಗೆ ಬರುತ್ತೆ ಅಂತ ಹೇಳಿದ್ರಿ, ಆದರೆ ಇವಾಗ ಮನೆ ಬಾಗಿಲಿಗೆ ಹಾವು, ಚೇಳುಗಳು ಬರ್ತೀದೆ. ಇವತ್ತು ರೋಡುಗಳನ್ನು ಸ್ವೀಮಿಂಗ್​ ಪುಲ್​ ಮಾಡಿದ್ದೀರಾ. ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಈ ಕಾಂಗ್ರೆಸ್​ ಸರ್ಕಾರ ರಾಜ್ಯದಿಂದ ಹೋಗೋವರೆಗೂ ಏನು ಅಭಿವೃದ್ದಿ ಆಗಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments