Saturday, August 23, 2025
Google search engine
HomeUncategorizedಸಿಎಂ ಸಿಟಿ ರೌಂಡ್ಸ್​ ಕ್ಯಾನ್ಸಲ್​: ವಿಡಿಯೋ ಕಾನ್ಫರೆನ್ಸ್​ ಮೂಲಕ ಮಳೆಹಾನಿ ಪ್ರದೇಶ ವೀಕ್ಷಣೆ

ಸಿಎಂ ಸಿಟಿ ರೌಂಡ್ಸ್​ ಕ್ಯಾನ್ಸಲ್​: ವಿಡಿಯೋ ಕಾನ್ಫರೆನ್ಸ್​ ಮೂಲಕ ಮಳೆಹಾನಿ ಪ್ರದೇಶ ವೀಕ್ಷಣೆ

ಬೆಂಗಳೂರು : ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಭಾರಿ ಅನಾಹುತಗಳು ಸಂಭವಿಸಿದ್ದು. ಮಳೆ ಹಾನಿ ಪ್ರದೇಶಕ್ಕೆ ಸಿಎಂ ಮತ್ತು ಡಿಸಿಎಂ ಭೇಟಿ ನೀಡಲು ಸಿದ್ದತೆ ನಡೆಸಲಾಗಿತ್ತು. ಆದರೆ ಮಳೆ ಹಿನ್ನಲೆ ಸಿಎಂ ಸಿಟಿ ರೌಂಡ್ಸ್​ ಕ್ಯಾನ್ಸಲ್​ ಮಾಡಲಾಗಿದೆ.

ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದ್ದು. ಕಾಂಪೌಂಡ್​ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇಷ್ಟಲ್ಲಾ ಅನಾಹತಗಳ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್​ ಮಾಡಿ ಮಳೆ ಹಾನಿ ಪ್ರದೇಶಗಳನ್ನ ಪರಿಶೀಲಿಸಲು ಸಿದ್ದತೆ ನಡೆಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಈ ಪ್ರವಾಸ ರದ್ದಾಗಿದೆ.

ಇದನ್ನೂ ಓದಿ :ಹೃದಯ ವಿದ್ರಾವಕ ಘಟನೆ: ಕಾರಿ​ನಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಉಸಿರುಗಟ್ಟಿ ಸಾ*ವು

ಮಧ್ಯಹ್ನಾದ ವೇಳೆಗೆ ಬೆಂಗಳೂರಿನಲ್ಲಿ ಮತ್ತೆ ಮಳೆ ಆರಂಭವಾಗಿದ್ದು. ಇದರಿಂದಾಗಿ ಸಿಎಂ ಸಿಟಿ ರೌಂಡ್ಸ್​ ಕ್ಯಾನ್ಸಲ್​ ಆಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಕಂಟ್ರೋಲ್​ ರೂಂಗೆ ಭೇಟಿ ನೀಡಲಿದ್ದು. ಅಧಿಕಾರಿಗಳು ಜೊತೆ ಸಭೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯಗೆ, ಡಿಸಿಎಂ ಡಿಕೆ.ಶಿವಕುಮಾರ್​, ಸಚಿವ ಕೆ.ಜೆ ಜಾರ್ಜ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಸಾಥ್​ ನೀಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments