Tuesday, August 26, 2025
Google search engine
HomeUncategorized300 ರಿಂದ 400 ಡ್ರೋನ್​ ಬಳಸಿ ಪಾಕ್ ದಾಳಿ ನಡೆಸಿದೆ, ಇಬ್ಬರು ವಿದ್ಯಾರ್ಥಿಗಳ ಸಾವು: ವಿದೇಶಾಂಗ...

300 ರಿಂದ 400 ಡ್ರೋನ್​ ಬಳಸಿ ಪಾಕ್ ದಾಳಿ ನಡೆಸಿದೆ, ಇಬ್ಬರು ವಿದ್ಯಾರ್ಥಿಗಳ ಸಾವು: ವಿದೇಶಾಂಗ ಇಲಾಖೆ

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಘ್ನತೆ ಬಗ್ಗೆ ವಿದೇಶಾಂಗ ಇಲಾಖೆ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು. ಪಾಕಿಸ್ತಾನದ ನಿನ್ನೆ(ಮೇ.08) ರಾತ್ರಿ ನಡೆಸಿದ ದಾಳಿಯನ್ನು ಖಚಿತಪಡಿಸಿದ್ದಾರೆ. ಜೊತೆಗೆ ಪಾಕಿಸ್ತಾನದ ದಾಳಿಯಲ್ಲಿ ಇಬ್ಬರು ಶಾಲೆಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ನಿನ್ನೆ ರಾತ್ರಿ ಭಾರತದ ಮೇಲೆ ನಡೆಸಿದ ದಾಳಿಯ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಶ್ರಿ, ಕರ್ನಲ್​ ಸೋಫಿಯಾ ಖುರೇಶಿ ಮತ್ತು ವಿಂಗ್​ ಕಮಾಂಡರ್​ ವ್ಯೋಮಿಕಾ ಸಿಂಗ್​ ಮಾಹಿತಿ ನೀಡಿದ್ದು. ಪಾಕಿಸ್ತಾನ ‘ಮೇ 8 ಮತ್ತು 9ರ ರಾತ್ರಿ ಪಾಕಿಸ್ತಾನ ಸೇನೆಯು ಪದೇ ಪದೇ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿ ದಾಳಿ ನಡೆಸಿದೆ. ಸುಮಾರು 300–400 ಡ್ರೋನ್‌ಗಳನ್ನು ಬಳಸಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ದಾಳಿಗೂ ಯತ್ನಿಸಿದೆ. ಇದನ್ನೂ ಓದಿ :ಆಪರೇಷನ್​ ಸಿಂಧೂರ: ದೇಶದ ರಕ್ಷಣೆಗೆ ಅಚಲರಾಗಿರುವ ಯೋಧರಿಗೆ ಧನ್ಯವಾದ ತಿಳಿಸಿದ ನಟ ಯಶ್​

ಪಾಕಿಸ್ತಾನ ಭಾರತದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದ್ದು. ವಾಯು ರಕ್ಷಣಾ ವ್ಯವಸ್ಥೆಗಳನ್ನು ಪರೀಕ್ಷಿಸುವುದು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು ಇಂತಹ ದೊಡ್ಡ ಕಾರಣದೊಂದಿಗೆ ದಾಳಿ ನಡೆಸಿದೆ. ಪಾಕಿಸ್ತಾನ ದಾಳಿ ನಡೆಸಿರುವ ಡ್ರೋನ್​ಗಳ ಅವಶೇಷಗಳನ್ನ ವಿಧಿವಿಜ್ಞಾನ ಇಲಾಖೆ ಪರಿಶೀಲನೆ ನಡೆಸಿದಾಗ. ದಾಳಿ ನಡೆಸಿರುವ ಡ್ರೋನ್​ಗಳು “ಟರ್ಕಿಶ್ ಆಸಿಸ್‌ಗಾರ್ಡ್ ಸೊಂಗಾರ್ ಡ್ರೋನ್‌”ಗಳು ಎಂದು ತಿಳಿದುಬಂದಿದೆ.

ನಮ್ಮ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದ್ದು. ಲೇಹ್​ನಿಂದ ಸರ್​ ಕ್ರೀಕ್​ವರೆಗಿನ 36 ಸ್ಥಳಗಳನ್ನು ಗುರಿಯಾಗಿಸಿಕೊಂಡು 300-400 ಡ್ರೋನ್​ಗಳ ಮೂಲಕ ದಾಳಿ ನಡೆಸಿದೆ. ಆದರೆ ಪಾಕ್​ ತನ್ನ  ನಾಗರಿಕ ವಾಯುಪ್ರದೇಶವನ್ನು ಮುಚ್ಚಲಿಲ್ಲ. ಭಾರತವೂ ತಕ್ಷಣ ವಾಯು ರಕ್ಷಣ ಪ್ರತಿಕ್ರಿಯೆ ತೋರುತ್ತದೆ ಎಂದು ತಿಳಿದಿದ್ದರು ಕೂಡ ಪಾಕಿಸ್ತಾನ ನಾಗರಿಕ ವಿಮಾನಗಳನ್ನು ತಮ್ಮ ಗುರಾಣಿಯಾಗಿ ಉಪಯೋಗಿಸುತ್ತಿದೆ. ಆದರೆ ಭಾರತದ ವಾಯುಪಡೆ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ ಎಂದು ವ್ಯೋಮಿಕಾ ಸಿಂಗ್​ ಮತ್ತು ಕರ್ನಲ್​ ಸೋಫಿಯಾ ಖುರೇಶಿ ಖಚಿತಪಡಿಸಿದರು.

ಇದನ್ನೂ ಓದಿ :ಪಾಕಿಸ್ತಾನದ ಮೇಲಿನ ದಾಳಿ ದೇಶದ ಸ್ವಾಭಿಮಾನ ಮತ್ತು ನೈತಿಕತೆಯನ್ನು ಹೆಚ್ಚಿಸಿದೆ: ಆರ್​ಎಸ್​ಎಸ್​

ಧಾರ್ಮಿಕ ಸ್ಥಳಗಳ ಮೇಲೆ ಪಾಕಿಸ್ತಾನ ದಾಳಿ..!

ಪಾಕಿಸ್ತಾನಿ ಕಡೆಯವರು ಪೂಜಾ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಭಾರತೀಯ ಸೇನೆ ಪ್ರಮಾಣಕ್ಕನುಗುಣವಾಗಿ ಪ್ರತಿಕ್ರಿಯೆ ನೀಡುತ್ತಿದೆ. ಭದ್ರತಾ ಸನ್ನಿವೇಶಗಳನ್ನು ನೆನಪಿನಲ್ಲಿಟ್ಟುಕೊಂಡು ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಕ್ರಮ್​ ಮಿಶ್ರಿ ತಿಳಿಸಿದರು.

ಇಬ್ಬರು ವಿದ್ಯಾರ್ಥಿಗಳ ಸಾವು..!

ಮೇ.7ರ ಮುಂಜಾನೆ LOCಯ ಉದ್ದಕ್ಕೂ ಪಾಕಿಸ್ತಾನದ ಭಾರೀ ಶೆಲ್ಲಿಂಗ್ ನಡೆಸಿದ ಪರಿಣಾಮ. ಒಂದು ಶೆಲ್​ ಪೂಂಚ್​ ಬಳಿಯ ಕ್ರೈಸ್ಟ್​ ಶಾಲೆಯ ಹಿಂಬದಿ ಇದ್ದ ಮನೆಗೆ ಬಿದ್ದಿದ್ದು. ಈ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿ ಪೋಷಕರು ಗಾಯಗೊಂಡಿದ್ದಾರೆ ಎಂದು ವಿಕ್ರಂ ಮಿಸ್ರಿ ತಿಳಿಸಿದರು. ಇನ್ನು ದಾಳಿಯ ಸಮಯದಲ್ಲಿ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭೂಗತರಾಗಿದ್ದು. ಹೆಚ್ಚಿನ ನಷ್ಟವಾಗಿಲ್ಲ ಎಂದು ತಿಳಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments