Monday, August 25, 2025
Google search engine
HomeUncategorizedಈ ಸಲ ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ : ಸಂಸದೆ ಸುಮಲತಾ

ಈ ಸಲ ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ : ಸಂಸದೆ ಸುಮಲತಾ

ಮಂಡ್ಯ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಜೆಡಿಎಸ್‌‌ಗೆ ಮಂಡ್ಯ ಕ್ಷೇತ್ರ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಂತೆ-ಕಂತೆ ಮೊದಲಿನಿಂದಲೂ ಇದೆ. ಅಧಿಕೃತ ನಿರ್ಧಾರ ಬರೋವರೆಗೂ ಕಾಯೋಣ. ನನಗೆ ವಿಶ್ವಾಸ ಇದೆ, ಮಂಡ್ಯ ಬಿಜೆಪಿಗೆ ಸಿಗಲಿದೆ. ನಾನು ನನ್ನ ಟಿಕೆಟ್‌ಗಾಗಿ ಹೋರಾಟ ಮಾಡ್ತಿಲ್ಲ. ನನ್ನ ಹೋರಾಟ ಈ ಕ್ಷೇತ್ರಕ್ಕಾಗಿ. ಇಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ ಮುಂದುವರೆಯಲಿದೆ. ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗ್ತಿತ್ತು. ಜೆಡಿಎಸ್‌ ನಾಯಕರು ಏನಾದರೂ ಹೇಳಬಹುದು ಆದರೆ ಅಧಿಕೃತವಾಗಬೇಕು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತ ಅಲ್ಲ. ನನ್ನ ಸ್ಪರ್ಧೆ ಖಚಿತ ಎಂದು ಸುಮಲತಾ ಅಂಬರೀಶ್ ಅವರು ಮಾತಾನಾಡಿದರು.

ಕಳೆದ 5 ವರ್ಷಗಳ ದಿಶಾ ಸಭೆಗಳಲ್ಲಿ ಹಲವು ವಿಷಯ ಚರ್ಚೆಯಾಗಿದೆ. ಚರ್ಚೆಯಾದ ವಿಷಯ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಅನ್ನೋ ಬಗ್ಗೆ ವಿವರ ಕೇಳಬೇಕು. ಭ್ರೂಣ ಹತ್ಯೆ ಬಗ್ಗೆ ನಾನು 4 ವರ್ಷಗಳ ಹಿಂದೆಯೆ ಪ್ರಸ್ತಾಪ ಮಾಡಿದ್ದೆ. ಆದರೆ, ಅದರ ವಿರುದ್ಧ ಸರಿಯಾದ ಕ್ರಮ ಆಗಲಿಲ್ಲ. ಈ ಘಟನೆ ತಡೆಯಲು ಜಿಲ್ಲಾಡಳಿತ ವಿಫಲವಾಗಿದ್ದು ಬೇಸರವಾಗಿದೆ ಎಂದರು.

ಇದೇ ವೇಳೆ ಬೇಬಿಬೆಟ್ಟ ಟ್ರಯಲ್ ಬ್ಲಾಸ್ಟ್ ವಿಚಾರದಲ್ಲಿ ಕೋರ್ಟ್ ಆದೇಶವಿದೆ. ಆದರೆ, ವಾಸ್ತವ ಮಾಹಿತಿಯನ್ನು ಅಧಿಕಾರಗಳಿಗೆ ತಿಳಿಸಿದ್ದೇನೆ. ಟ್ರಯಲ್ ಬ್ಲಾಸ್ಟ್‌ಗೆ ರೈತರ ವಿರೋಧವಿದೆ. ರೈತರ ಮನವಿಯಲ್ಲಿ ನ್ಯಾಯ ಇದೆ. ನಾನು ಅವರೊಂದಿಗಿದ್ದೇನೆ. ಇದೇ ರೀತಿ ನಡೆಸಿದರೆ ಅನುಕೂಲಕಕ್ಕಿಂತ ಅನಾನುಕೂಲ ಜಾಸ್ತಿ. ಬ್ಲಾಸ್ಟ್‌ಗೆ ಸ್ಟೇ ಆರ್ಡರ್ ತರಲು ರೈತ ಸಂಘ ಮುಂದಾಗಿದೆ. ಜಿಲ್ಲಾಡಳಿತಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶ ಇಲ್ಲ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments