Wednesday, August 27, 2025
HomeUncategorizedಜೈಲಿಗೆ ಶರಣಾಗಲು ಕಾಲಾವಕಾಶ ಕೋರಿದ್ದ ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳ ಅರ್ಜಿ ವಜಾ!

ಜೈಲಿಗೆ ಶರಣಾಗಲು ಕಾಲಾವಕಾಶ ಕೋರಿದ್ದ ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳ ಅರ್ಜಿ ವಜಾ!

ದೆಹಲಿ: ಜೈಲಿಗೆ ಶರಣಾಗಲು ಮತ್ತಷ್ಟು ದಿನ ಕಾಲಾವಕಾಶವನ್ನು ನೀಡುವಂತೆ ಕೋರಿ ಬಿಲ್ಕಿಸ್ ಬಾನು ಹತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ನ್ಯಾಯಾಲು ತಿರಸ್ಕರಿಸಿದೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು ಬಿಲ್ಕಿಸ್ ಬಾನು ಪ್ರಕರಣದ 11 ದೋಷಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಅರ್ಜಿಗಳಿಗೆ ಅರ್ಹತೆಯ ಕೊರತೆಯಿದೆ ಮತ್ತು ಜನವರಿ 21(ಭಾನುವಾರದೊಳಗೆ) ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸಿದೆ. ಅನಾರೋಗ್ಯ, ಚಳಿಗಾಲದ ಬೆಳೆಗಳ ಕೊಯ್ಲು ಮತ್ತು ಮಗನ ಮದುವೆ ಕಾರಣ ನೀಡಿ ಅಪರಾಧಿಗಳು ಸಮಯವನ್ನು ವಿಸ್ತರಿಸಲು ಕೋರಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 998 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

2002ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ 11 ದೋಷಿಗಳನ್ನು  ಗುಜರಾತ್ ಸರ್ಕಾರ ಎರಡು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಿತ್ತು. ಅವರ ಮುಂಚಿನ ಬಿಡುಗಡೆಯ ವಿರುದ್ಧದ ಮೇಲ್ಮನವಿಗಳನ್ನು ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments