Wednesday, August 27, 2025
HomeUncategorizedಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಹತ್ಯೆ

ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಹತ್ಯೆ

ಬೆಂಗಳೂರು : ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್‌ನನ್ನು ಬುಧವಾರ ಪಾಕಿಸ್ತಾನದ ಸಿಯಾಲ್ ಕೋಟ್‌ನಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸದಸ್ಯನಾಗಿದ್ದು, 2016ರ ಜನವರಿ 2 ರಂದು ಪ್ರಾರಂಭವಾದ ಪಠಾಣ್ ಕೋಟ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದ. ಆತ ಸಿಯಾಲ್‌ಕೋಟ್‌ನಲ್ಲಿ ದಾಳಿಯನ್ನು ನಡೆಸಲು ಸಂಘಟಿಸಿ, ಅದನ್ನು ಕಾರ್ಯಗತಗೊಳಿಸಲು ನಾಲ್ವರು ಭಯೋತ್ಪಾದಕರನ್ನು ಪಠಾಣ್ ಕೋಟ್‌ಗೆ ಕಳುಹಿಸಿದ್ದ.

ಕಾನೂನುಬಾಹಿರ ಕಾಯಿದೆಯ ಅಡಿಯಲ್ಲಿ ಭಯೋತ್ಪಾದನೆಯ ಆರೋಪದ ಮೇಲೆ ನವೆಂಬರ್ 1994 ರಲ್ಲಿ ಆತನನ್ನು ಭಾರತದಲ್ಲಿ ಬಂಧಿಸಲಾಗಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿ, ಜೈಲಿಗೆ ಹಾಕಲಾಗಿತ್ತು. ಭಾರತದಲ್ಲಿ ಶಿಕ್ಷೆ ಅನುಭವಿಸಿದ ನಂತರ ಆತನನ್ನು 2010 ರಲ್ಲಿ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments