Thursday, August 28, 2025
HomeUncategorizedಮತಾಂಧ ಟಿಪ್ಪು, ಔರಂಗಜೇಬ್ ಕಟೌಟ್ ಏಕೆ ಬೇಕಿತ್ತು? : ಅಶ್ವತ್ಥನಾರಾಯಣ

ಮತಾಂಧ ಟಿಪ್ಪು, ಔರಂಗಜೇಬ್ ಕಟೌಟ್ ಏಕೆ ಬೇಕಿತ್ತು? : ಅಶ್ವತ್ಥನಾರಾಯಣ

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನರ ರಕ್ಷಣೆ ಇರಲಿ ಪೊಲೀಸರ ರಕ್ಷಣೆ ಮಾಡಲು‌ ಸಹ ಸರ್ಕಾರ ವಿಫಲವಾಗಿದೆ. ಶಿವಮೊಗ್ಗದಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆದಿದೆ. ಇಷ್ಟಲ್ಲದೇ ಐಪಿಎಸ್ ಅಧಿಕಾರಿ ಮೇಲೆಯೂ ಕಲ್ಲು ತೂರಿದ್ದಾರೆ ಎಂದರು.

ಔರಂಗಜೇಬ್, ಟಿಪ್ಪು ಕಟೌಟ್ ಅಳವಡಿಸಿದ ಬಗ್ಗೆಯೂ ಮಾತನಾಡಿದ ಅವರು, ಔರಂಗಜೇಬ್ ನಮ್ಮ ದೇಗುಲಗಳನ್ನು ನಿರ್ನಾಮ ಮಾಡಿದವನು. ಇನ್ನು ಟಿಪ್ಪು, ಹಿಂದೂಗಳನ್ನು ಕೊಂದವನು! ಅವರಿಬ್ಬರ ಕಟೌಟ್ ಹಾಕಿ ಏನು ಸಂದೇಶ ಕೊಡ್ತಿದ್ದಾರೆ ಇವರು? ಕರ್ನಾಟಕದಲ್ಲಿ ಹಿಂದೂಗಳು ಎರಡನೇ ದರ್ಜೆ ನಾಗರಿಕರಂತೆ ಬಿಂಬಿಸಲಾಗಿದೆ. ಇದನ್ನೆಲ್ಲ ಸರ್ಕಾರ ಮುಚ್ಚಿಡಲು ಪ್ರಯತ್ನಿಸಿದೆ ಎಂದು ಆಕ್ರೋಶ ಹೊರಹಾಕಿದರು.

ಭಯೋತ್ಪಾದಕರು ಸಹೋದರರಂತೆ ಕಾಣ್ತಾರೆ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಇವು ಒಂದು ಸಣ್ಣ ಘಟನೆಯಂತೆ ಕಾಣುತ್ತದೆ. ಉಪಮುಖ್ಯಮಂತ್ರಿ ಅವರಿಗೆ ಭಯೋತ್ಪಾದಕರು ಸಹೋದರರಂತೆ ಕಾಣುತ್ತಾರೆ. ಮುಖ್ಯಮಂತ್ರಿ ಅವರು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಿದ್ದಾರೆ. ಇಂತಹ ಹಿಂದೂ ವಿರೋಧಿ ಸರ್ಕಾರದಿಂದ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments