Sunday, August 24, 2025
Google search engine
HomeUncategorizedಲಿವಿಂಗ್ ನಲ್ಲಿ ಇರ್ತಾರೆ, ಜಗಳ ಮಾಡ್ತಾರೆ, ಕೊಲೆಯಾಗ್ತಾರೆ! : ಬೆಂಗಳೂರಿನಲ್ಲಿ ದಾಖಲಾಗ್ತಿವೆ ಹೆಚ್ಚು ಕೇಸ್

ಲಿವಿಂಗ್ ನಲ್ಲಿ ಇರ್ತಾರೆ, ಜಗಳ ಮಾಡ್ತಾರೆ, ಕೊಲೆಯಾಗ್ತಾರೆ! : ಬೆಂಗಳೂರಿನಲ್ಲಿ ದಾಖಲಾಗ್ತಿವೆ ಹೆಚ್ಚು ಕೇಸ್

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಲೀವಿಂಗ್ ಟುಗೆದರ್ ಕ್ರೈಂ ಕೇಸ್ ಗಳ ಸಂಖ್ಯೆ ಹೆಚ್ಚಾಗ್ತಿದೆ. ಮುಂಬೈ, ದೆಹಲಿಯಲ್ಲಿ ಅಷ್ಟೇ ಅಲ್ಲ ಬೆಂಗಳೂರಿನಲ್ಲಿಯೂ ಹೆಚ್ಚು ಕೇಸ್ ಗಳು ದಾಖಲಾಗ್ತಿದೆ.

ಹೌದು, ನಗರದಲ್ಲಿ ಸಾಲು ಸಾಲು ಲಿವಿಂಗ್ ಆಪ್ಟರ್ ಮರ್ಡರ್ ಕೇಸ್ ಗಳು ಬೆಳಕಿಗೆ ಬಂದಿವೆ. ಲಿವಿಂಗ್ ನಲ್ಲಿ ಇರ್ತಾರೆ, ಜಗಳ ಮಾಡ್ತಾರೆ, ಕೊಲೆಯಾಗ್ತಾರೆ! ಹಾಗಿದ್ರೆ, ನಗರದಲ್ಲಿ ಲಿವಿಂಗ್ ಟುಗೆದರ್ ಕೊಲೆ ಕೇಸ್ ಗಳು ಎಷ್ಟಿವೆ? ಇಲ್ಲಿದೆ ನೊಡಿ ಡೀಟೈಲ್ಸ್.

ಕಳೆದ ಎಂಟು ತಿಂಗಳಲ್ಲಿ 7 ಲಿವಿಂಗ್ ಕೊಲೆ ಕೇಸ್ ಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಏಳು ಪ್ರಕರಣದಲ್ಲಿ ನಡೆದ ಬಹುತೇಕ ಕೊಲೆಗಳು ಮಾರಕಾಸ್ತ್ರಗಳಿಂದ ಎನ್ನುವುದು ಬೆಚ್ಚಿ ಬೀಳಿಸಿದೆ.

ಪ್ರಕರಣ ನಂ.1 : ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿ

ಕೊಲೆ ವಿಧಾನ : ಚಾಕುವಿನಿಂದ ಇರಿದು ಕೊಲೆ.

ಕಾರಣ : ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಜಗಳ ಪ್ರೇಯಸಿಯ ಕೊಲೆ.

ಕೌಸರ್ ಎಂಬ ಯುವತಿಯನ್ನ ಆರೋಪಿ ನದೀಪ್ ಪಾಷ ಕೊಲೆ ಮಾಡಿದ್ದ. ನಾಲ್ಕು ವರ್ಷಗಳಿಂದ ನಗರದಲ್ಲಿ ಲಿವಿಂಗ್ ನಲ್ಲಿದ್ದ ಜೋಡಿ. ಯುವತಿಯ ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಕೊಲೆ. ಬೆಳ್ಳಿ ಚೈನ್ ತಂದುಕೊಟ್ಟಿದ್ದಕ್ಕೆ ಜಗಳ ತೆಗೆದಿದ್ದ ಕೌಸರ್. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿ ಕೌಸರ್ ಕೊಲೆ. ಅಶೋಕನಗರ ಠಾಣೆ ಪೊಲೀಸರಿಂದ ಆರೋಪಿ ಬಂಧನವಾಗಿತ್ತು.

ಪ್ರಕರಣ ನಂ.2 : ಅಮೃತಹಳ್ಳಿ ಠಾಣಾ ವ್ಯಾಪ್ತಿ

ಕೊಲೆ ವಿಧಾನ : ಚಾಕುವಿನಿಂದ ಇರಿದು ಕೊಲೆ.

ಕಾರಣ : ಲಿವಿಂಗ್ ಟುಗೆದರ್ ನಲ್ಲಿದ್ದ ಯುವತಿಯಿಂದ ಬೇರೊಬ್ಬನ ಜೊತೆ ಸ್ನೇಹ.

ಪ್ರಿಯತಮೆ ಜೊತೆ ಸ್ನೇಹದಿಂದಿದ್ದ ವ್ಯಕ್ತಿಯ ಕೊಂದಿದ್ದ ಪ್ರಿಯತಮ. ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸುಲೇಮಾನ್ ಎಂಬಾತನನ್ನ ಕೊಂದಿದ್ದ ವಿಕ್ಟರ್ ಎಂಬ ಆರೋಪಿ. ಯುವತಿಯೊಬ್ಬಳ ಜೊತೆ ಕೆಲ ವರ್ಷಗಳಿಂದ ಲಿವಿಂಗ್ ನಲ್ಲಿದ್ದ ಆರೋಪಿ ವಿಕ್ಟರ್. ಆದ್ರೆ, ಸುಲೇಮಾನ್ ಜೊತೆ ಸಲುಗೆಯಲ್ಲಿದ್ದ ವಿಕ್ಟರ್ ಪ್ರಿಯತಮೆ. ಈ ವಿಚಾರ ಗೊತ್ತಾಗಿ ಸುಲೇಮಾನ್ ಕೊಲೆ‌ ಮಾಡಿದ್ದ ವಿಕ್ಟರ್. ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ.

ಪ್ರಕರಣ ನಂ.3 : ಜ್ಞಾನ ಭಾರತಿ ಠಾಣಾ ವ್ಯಾಪ್ತಿ

ಕೊಲೆ ವಿಧಾನ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ.

ಕಾರಣ : ಮಹಿಳೆಗೆ ಕರೆ ಮಾಡಿ ಕೊಲೆಯಾಗಿದ್ದ ಲಿವಿಂಗ್ ನಲ್ಲಿದ್ದ ಹಳೇ ಪ್ರಿಯತಮ.

ಅರುಣ್ ಕುಮಾರ್ ಮತ್ತು ಸಹಚರರಿಂದ ಶ್ರೀಕಾಂತ್ ಎಂಬಾತನ ಕೊಲೆ. ಈ ಮುಂಚೆ ಶ್ರೀಕಾಂತ್ ಜೊತೆ ಲಿವಿಂಗ್ ನಲ್ಲಿದ್ದ ಮಹಿಳೆ. ನಂತರ ಶ್ರೀಕಾಂತ್ ಜೊತೆ ಜಗಳವಾಡಿ ಆರೋಪಿ ಅರುಣ್ ಜೊತೆ ಲಿವಿಂಗ್ ಶುರು ಮಾಡಿದ್ದಳು. ಈ ವೇಳೆ ಮಹಿಳೆಗೆ ಪದೇ ಪದೇ ಕರೆ ಮಾಡಿದ್ದ ಶ್ರೀಕಾಂತ್. ಈ ವಿಚಾರ ಗೊತ್ತಾಗಿ ಶ್ರೀಕಾಂತ್ ನನ್ನ ಕೊಲೆ ಮಾಡಿಸಿದ್ದ ಅರುಣ್. ಸಿಸಿಬಿ ಪೊಲೀಸರಿಂದ ಆರೋಪಿಗಳ ಬಂಧನವಾಗಿತ್ತು.

ಇದನ್ನೂ ಓದಿ : ಪ್ರೇಯಸಿ ಮೇಲೆ ಪ್ರಿಯಕರ ಹಾಗೂ ಸ್ನೇಹಿತನಿಂದ ಅತ್ಯಾಚಾರ!

ಪ್ರಕರಣ ನಂ.4 : ಪರಪ್ಪನ ಅಗ್ರಗಾರ ಠಾಣಾ ವ್ಯಾಪ್ತಿ

ಕೊಲೆ ವಿಧಾನ : ಕತ್ತು ಹಿಸುಕಿ ಕೊಲೆ.

ಕಾರಣ : ಮದುವೆಯಾಗು ಎಂದಿದ್ದಕ್ಕೆ ಪ್ರಿಯತಮೆಯನ್ನೇ ಕೊಲೆ ಮಾಡಿದ್ದ ಆರೋಪಿ.

ಪ್ರಿಯತಮೆ ಸುನಿತಾ ಎಂಬಾಕೆಯನ್ನ ಕೊಂದಿದ್ದ ಆರೋಪಿ ಪ್ರಶಾಂತ್. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಕೆಲ ವರ್ಷಗಳಿಂದ ಲಿವಿಂಗ್ ನಲ್ಲಿದ್ದ ಸುನಿತಾ ಮತ್ತು ಪ್ರಶಾಂತ್. ಲಿವಿಂಗ್ ಸಾಕಾಗಿ ಬೇಗ ಮದುವೆಯಾಗು ಎಂದು ಒತ್ತಾಯಿಸಿದ್ದ ಸುನಿತಾ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿ ಕೊಲೆ. ಸುನಿತಾ ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದ ಆರೋಪಿ ಪ್ರಶಾಂತ್.

ಪ್ರಕರಣ ನಂ.5 : ರಾಮಮೂರ್ತಿ ನಗರ ಠಾಣಾ ವ್ಯಾಪ್ತಿ

ಕೊಲೆ ವಿಧಾನ : ತಲೆಗೆ ರಾಡ್ ನಿಂದ ಹೊಡೆದು ಕೊಲೆ.

ನೇಪಾಳ ಮೂಲದ ಕೃಷ್ಣಕುಮಾರಿ ಎಂಬಾಕೆಯನ್ನು ಕೊಂದಿದ್ದ ಪ್ರಿಯತಮ ಸಂತೋಷ್. ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಇಬ್ಬರೂ ಕೆಲ ವರ್ಷಗಳಿಂದ ಲಿವಿಂಗ್ ನಲ್ಲಿದ್ರು. ಆದ್ರೆ, ಪ್ರಿಯತಮೆ ಕೃಷ್ಣಕುಮಾರಿ ವಿರುದ್ಧ ಅನುಮಾನ ಪಡ್ತಿದ್ದ ಆರೋಪಿ ಸಂತೋಷ್. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ರಾಡ್ ನಿಂದ ಕೃಷ್ಣಕುಮಾರಿ ತಲೆಗೆ ಹೊಡೆದು ಕೊಲೆ‌ ಮಾಡಿದ್ದ ಆರೋಪಿ ಸಂತೋಷ್.

ಪ್ರಕರಣ ನಂ.6 : ಜೀವನ್ ಭೀಮನಗರ ಠಾಣಾ ವ್ಯಾಪ್ತಿ

ಕೊಲೆ ವಿಧಾನ : ಉಸಿರುಗಟ್ಟಿಸಿ ಪ್ರಿಯತಮೆಯ ಕೊಲೆ.

ಆಕಾಂಕ್ಷ ಕೊಲೆಯಾದ ಯುವತಿ. ಅರ್ಪಿತ್ ಪ್ರಿಯತಮೆಯನ್ನು ಉಸಿರುಗಟ್ಟಿಸಿ ಕೊಲೆ. ಜೀವನ್ ಭೀಮನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಪ್ರಕರಣ ನಂ.7 : ಬಸವೇಶ್ವರ ನಗರ ಠಾಣಾ ವ್ಯಾಪ್ತಿ

ಕೊಲ ವಿಧಾನ : ಮರ್ಮಾಂಗಕ್ಕೆ ಇರಿದು ಪತ್ನಿಯ ಕೊಲೆ.

ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ಕೊಲೆ ನಡೆದಿತ್ತು. ನಾಗರತ್ನಳ ಮರ್ಮಾಂಗಕ್ಕೆ ಇರಿದು ಕೊಲೆ ಮಾಡಿದ್ದ ಪತಿ. ಆರೋಪಿ ಅಯ್ಯಪ್ಪನನ್ನು ಬಂಧಿಸಿದ ಬಸವೇಶ್ವರನಗರ ಪೊಲೀಸರು.

ಹೀಗೆ ನಗರದಲ್ಲಿ ಲಿವಿಂಗ್ ಇದ್ದು, ಇಬ್ಬರ ನಡುವೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಮುಂಬೈ, ದೆಹಲಿಯಲ್ಲಿ ಅಷ್ಟೇ ಅಲ್ಲದೆ ಬೆಂಗಳೂರು ನಗರದಲ್ಲಿಯೂ ಈ ರೀತಿಯ ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದು ರಾಜಧಾನಿ ಮಂದಿಯಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments