Sunday, August 24, 2025
Google search engine
HomeUncategorizedರಘು ಆಚಾರ್​ಗೆ ಮತ್ತಷ್ಟು ಬಲ : 'ಕೈ' ಬಿಟ್ಟು 'ದಳ' ಹಿಡಿದ ಮುಸ್ಲಿಂ ಮುಖಂಡರು

ರಘು ಆಚಾರ್​ಗೆ ಮತ್ತಷ್ಟು ಬಲ : ‘ಕೈ’ ಬಿಟ್ಟು ‘ದಳ’ ಹಿಡಿದ ಮುಸ್ಲಿಂ ಮುಖಂಡರು

ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗದಲ್ಲಿ ಪಕ್ಷಾಂತರ ಪರ್ವ ಜೋರಾಗಿ ಮುಂದುವರೆದಿದೆ. ದಿನೇ ದಿನೆ ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ಜಿ. ರಘು ಆಚಾರ್ ವರ್ಚಸ್ಸು ಹೆಚ್ಚಾಗುತ್ತಿದೆ.

ಹೌದು, ನಿನ್ನೆಯಷ್ಟೇ ಕಾಂಗ್ರೆಸ್ ಪಕ್ಷದ ನಡೆಗೆ ಬೇಸತ್ತು ಪಕ್ಷ ತೊರೆದಿದ್ದ ಅಲ್ಪಸಂಖ್ಯಾತ ಸಮುದಾಯದ ಮುಖಂಡರರುಗಳು ಇಂದು ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಾಮೂಹಿಕವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ‌.

ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ಜಿ. ರಘು ಆಚಾರ್ ಬೆಂಬಲಿಸಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಸೈಯದ್ ವಲಿಯುಲ್ಲಾ ಶಾಖಾದ್ರಿ ಡಿ‌.ಎಸ್(ನೇತಾ), ಮಹಮದ್ ಖಲೀಲುಲ್ಲಾ, ಕಾರ್ಯದರ್ಶಿ ಮಹಮದ್ ಮೋಸಿನ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಭಾಷಾ(ಆರ್.ಕೆ ರಿಯಾಜ್) ಹಾಗೂ ವಸೀಂ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಜೆಡಿಎಸ್ ಕೂಡಿಕೊಂಡಿದ್ದಾರೆ.

ಇದನ್ನೂ ಓದಿ : ಕುಮಾರಣ್ಣ ಬಂದ 24 ಗಂಟೆಯಲ್ಲೇ ‘ಸಂಪೂರ್ಣ ಸಾಲಮನ್ನಾ’ : ಸಮೃದ್ಧಿ ಮಂಜುನಾಥ್

ಜೆಡಿಎಸ್​ಗೆ ಮತ್ತಷ್ಟು ಬಲ

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಶರವಣ, ಜಿ.ರಘು ಆಚಾರ್, ಜಿಲ್ಲಾಧ್ಯಕ್ಷ ಜಯಣ್ಣ, ಮಾಜಿ ಅಧ್ಯಕ್ಷ ಡಿ‌.ಯಶೋಧರ, ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ಮತ್ತಿತರಿದ್ದರು. ನೂತನವಾಗಿ ಪಕ್ಷ ಸೇರಿದ ಮುಖಂಡರಿಗೆ ಜೆಡಿಎಸ್ ಬಾವುಟ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಈ ವೇಳೆ ಮಾತನಾಡಿರುವ ಅವರು, ಹಿರೇಗುಂಟನೂರು ಹೋಬಳಿಯ ಸಿಂಗಾಪುರದ ಅಡಿಕೆ ವರ್ತಕರಾದ ಪುನೀತ್ ಕೆ.ಆರ್ ಅವರು ಸಹ ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪುನೀತ್ ಕೆ.ಆರ್ ಅವರ ಸೇರ್ಪಡೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments