Thursday, August 28, 2025
HomeUncategorizedಇಂಡಿಯಾ ಬುಕ್ ಆಫ್ ರೇಕಾರ್ಡ್ ಸೇರಿದ ವಿಶ್ವಮಾನವನ ಚಿತ್ರ

ಇಂಡಿಯಾ ಬುಕ್ ಆಫ್ ರೇಕಾರ್ಡ್ ಸೇರಿದ ವಿಶ್ವಮಾನವನ ಚಿತ್ರ

ದಾವಣಗೆರೆ : ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು, ಈ ಹಿನ್ನಲೆ ಅವರ ಹೆಸರನ್ನು ಕನ್ನಡ ಜನತೆ ಸದಾ ಸ್ಮರಿಸುತ್ತದೆ.. ಆದರೆ ಈಗ ಅವರ ಹೆಸರೇ ಇಂಡಿಯಾ ಬುಕ್ ಆಫ್ ರೇಕಾರ್ಡ್ ಗೆ ಸೇರಿದೆ..

ಹೌದು.. ವಿಶ್ವಮಾನವ ಸಂದೇಶ ಸಾರಿದ ಯುಗದ ಕವಿ ಜಗದ ಕವಿ, ರಸ ಋಶಿ.. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು, ಸೇರಿದಂತೆ ನಾಟಕಗಳ ಮೂಲಕ ವೈಚಾರಿಕ ಸ್ಪರ್ಶ ನೀಡಿದವರು.. ಶ್ರೀ ರಾಮಾಯಣಂ ದರ್ಶನಂ ಮೇರು ಕೃತಿಯಿಂದ ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಕುವೆಂಪುರವರು, ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಈ ಹೆಗ್ಗಳಿಕೆಯನ್ನು ಅವರ ಹೆಸರನ್ನು ಕನ್ನಡನಾಡು ಸದಾ ಸ್ಮರಿಸುತ್ತದೆ.. ಆದರೆ ಈಗ ಅವರ ಹೆಸರಿನಲ್ಲೆ ಒಂದು ವಿಶೇಷ ದಾಖಲೆ ನಿರ್ಮಾಣವಾಗಿದೆ.

2500 ಕುವೆಂಪು ಹೆಸರುಗಳ ಮೂಲಕ ಕುವೆಂಪು ಅವರದ್ದೆ ಭಾವಚಿತ್ರ

ದಾವಣಗೆರೆ ನಗರದ ಮುರುಘಾ ರಾಜೇಂದ್ರ ಶಾಲೆಯ ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ಅವರ ಕೈ ಚಳಕದಲ್ಲಿ ಬರೋಬ್ಬರಿ 2500 ಕುವೆಂಪು ಹೆಸರುಗಳ ಮೂಲಕ ಕುವೆಂಪು ಅವರದ್ದೆ ಭಾವಚಿತ್ರ ನಿರ್ಮಾಣವಾಗಿದ್ದು, ಇದು ಇಂಡಿಯಾ ಬುಕ್ ಆಫ್ ರೇಕಾರ್ಡ್ ಪ್ರಶಸ್ತಿಗೆ ಭಾಜವಾಗಿದೆ. ಸ್ವತಃ ಚಿತ್ರಕಲಾ ಶಿಕ್ಷಕರಾಗಿರುವ ಶಾಂತಯ್ಯ ಪರಡಿಮಠ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಸಾಹಿತ್ಯ ಓದಿ ಬೆಳೆದವರು, ಈ ಹಿನ್ನಲೆ ಅವರ ಮೇಲಿನ ಅಭಿಮಾನದಿಂದ 2500 ಕುವೆಂಪು ಹೆಸರುಗಳನ್ನು ಬಳಸಿ ಕುವೆಂಪು ಅವರದ್ದೆ ನೆರಳು ಬೆಳಕಿನ ರೂಪದ ಚಿತ್ರ ಬಿಡಿಸಿದ್ದಾರೆ.. 26 ಇಂಚು ಅಗಲ, 40 ಇಂಚು ಉದ್ದದಲ್ಲಿ ಆರು ಗಂಟೆಯಲ್ಲೇ ಅಕ್ಷರಗಳ ಮೂಲಕ ಈ ಚಿತ್ರವನ್ನು ಶಾಂತಯ್ಯ ಬಿಡಿಸಿದ್ದಾರೆ..

ಇಂಡಿಯಾ ಬುಕ್ ಆಫ್ ರೇಕಾರ್ಡ್ ಪ್ರಶಸ್ತಿ

ಈ ಚಿತ್ರವು ಈಗ ಇಂಡಿಯಾ ಬುಕ್ ಆಫ್ ರೇಕಾರ್ಡ್ ಪ್ರಶಸ್ತಿ ಗಳಿಸಿದ್ದು, ಲಾಕ್ ಡೌನ್ ಬಳಿಕ ಪ್ರಶಸ್ತಿ ಕೈ ಸೇರಿದೆ.. ಇನ್ನೂ ಈ ಮೊದಲು ಶಾಂತಯ್ಯ, ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾಗ 250 ಹೆಸರುಗಳ ಮೂಲಕ ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ಈ ರೀತಿಯ ಭಾವಚಿತ್ರ ಬಿಡಿಸಲು ಮುಂದಾಗಿದ್ದರು, ಬಳಿಕ ಬಸವೇಶ್ವರ ಶಿವಾಜಿ, ರಾಧಾಕೃಷ್ಣನ್ ಅವರ ಹೆಸರು ಬಳಸಿ ಚಿತ್ರ ಬಿಡಿಸಿದ್ದರು.. ಇನ್ನೂ ಇವರ ಸಾಧನೆಗೆ ಇವರ ಪತ್ನಿ ಗಂಗಾ ಪರಡಿಮಠ ಅವರು ಖುಷಿ ವ್ಯಕ್ತಪಡಿಸಿದ್ದಾರೆ..

ಒಟ್ಟಾರೆ ವಿಶ್ವಮಾನವ ಸಂದೇಶ ಸಾರಿ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು ಅವರ ಹೆಸರಿನಲ್ಲೇ ಇಂಡಿಯಾ ಬುಕ್ ಆಫ್ ರೇಕಾರ್ಡ್ ದೊರಕಿದ್ದು, ನಿಜಕ್ಕೂ ಕನ್ನಡಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ.. ಶಾಂತಯ್ಯ ಪರಡಿಮಠ ಅವರ ಈ ಸಾಧನೆಗೆ ಪವರ್ ಟಿವಿಯಿಂದ ಸಲಾಂ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments