Wednesday, September 17, 2025
HomeUncategorizedಖಾರ-ಮಂಡಕ್ಕಿ ತಿನ್ನುತ್ತಾ ಗ್ರಹಣ ವೀಕ್ಷಣೆ ಮಾಡಿದ ಶಿವಮೊಗ್ಗದ ಜನರು.

ಖಾರ-ಮಂಡಕ್ಕಿ ತಿನ್ನುತ್ತಾ ಗ್ರಹಣ ವೀಕ್ಷಣೆ ಮಾಡಿದ ಶಿವಮೊಗ್ಗದ ಜನರು.

ಶಿವಮೊಗ್ಗ :  ಇನ್ನು ಆಷಾಢ ಅಮಾವಾಸ್ಯೆಯಂದು ಇಂದು ಕಂಕಣ ಸೂರ್ಯಗ್ರಹಣ ಸಂಭವಿಸಿದೆ. ಹಿಂದಿನಿಂದಲೂ ಆಚರಿಸಿಕೊಂಡು ಬಂದ ನಂಬಿಕೆಯಂತೆ, ಕಷ್ಟಗಳು ದೂರವಾಗಲು ಹಾಗೂ ಗ್ರಹಣ ದೋಷ ಪರಿಹಾರಕ್ಕಾಗಿ ದಾನ ಕರ್ಮಗಳನ್ನು ಜನರು ಮಾಡುತ್ತಿದ್ದಾರೆ.

ಗ್ರಹಣವು ಬೆಳಗ್ಗೆ 10.06 ರಿಂದ ಗ್ರಹಣ ಸ್ಪರ್ಶವಾಗಿದ್ದು, ಗ್ರಹಣದ ಮಧ್ಯಕಾಲ 11.46, ಮಧ್ಯಾಹ್ನ 1.27 ಕ್ಕೆ ಗ್ರಹಣ ಮೋಕ್ಷವಾಗಲಿದೆ. ಈ ಗ್ರಹಣ ಮೋಕ್ಷವಾದ ನಂತರ ಶುದ್ಧವಾಗಿ, ಪೂಜೆಯನ್ನು ಮಾಡಿ ಧಾನ್ಯಗಳನ್ನು ದಾನ ಮಾಡಲಾಗುತ್ತಿದೆ.   ಇದು ಒಂದೆಡೆಯಾದರೆ, ಮತ್ತೊಂದೆಡೆ, ಸೌರಮಂಡಲದಲ್ಲಿ, ಮೂಡುವ ವಿಸ್ಮಯ ಸಂಭವಿಸುತ್ತಿದ್ದು, 2020 ನೇ ಸಾಲಿನ ಮೊದಲ ಸೂರ್ಯ ಗ್ರಹಣ ಇದಾಗಿದೆ.  ಆಫ್ರಿಕಾ, ಸೇರಿದಂತೆ, ಭಾರತ, ಪಾಕಿಸ್ತಾನ, ಚೀನಾ ಸೇರಿದಂತೆ, ಹಲವೆಡೆ ಸೂರ್ಯಗ್ರಹಣ ಗೋಚರವಾಗುತ್ತಿದೆ. 

ಇದು ರಾಜ್ಯ ಸೇರಿದಂತೆ, ದೇಶದ್ಯಂತ ಸೂರ್ಯಗ್ರಹಣ ಗೋಚರಿಸಲಿದೆ.  ಗ್ರಹಣ ಕಾಲದಲ್ಲಿ ಬಳೆಯ ಆಕೃತಿಯಲ್ಲಿ ಗ್ರಹಣ ಗೋಚರವಾಗಲಿದ್ದು, ಕರ್ನಾಟಕ ಸೇರಿದಂತೆ, ಉಳಿದ ಭಾಗಗಳಲ್ಲಿ, ಖಗ್ರಾಸ ಅಂದರೆ, ಪಾರ್ಶ್ವ ಸೂರ್ಯಗ್ರಹಣ ಗೋಚರಿಸಲಿದೆ.  ಸುಮಾರು 6 ಗಂಟೆಗಳ ಕಾಲ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಇದನ್ನು ನೋಡುವ ಅವಕಾಶ ನಮಗೊದಗಿದೆ. ಖಗ್ರಾಸ ಸೂರ್ಯಗ್ರಹಣವಾಗಿರುವುದರಿಂದ ಬರಿಗಣ್ಣಿನಿಂದ ನೋಡಬಾರದಾಗಿದ್ದು, ಸುರಕ್ಷಾ ಕನ್ನಡಕ ಧರಿಸಿ ಜನರು ವೀಕ್ಷಿಸುತ್ತಿದ್ದಾರೆ.  ಈಗಾಗಲೇ, ದೇವಾಲಯಗಳಲ್ಲಿ ಪೂಜೆ ಬಂದ್ ಆಗಿದ್ದು, ಗ್ರಹಣದ ಹಿನ್ನೆಲೆಯಲ್ಲಿ, ಪ್ರತಿಷ್ಠಿತ ದೇವಾಲಯಗಳು ಸೇರಿದಂತೆ, ಎಲ್ಲಾ ದೇವಾಲಯಗಳಲ್ಲಿ, ಪೂಜಾ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ.  ಅದರಂತೆ, ಮೂಢನಂಬಿಕೆಗಳನ್ನು ಯಾರು ಕೂಡ ನಂಬಬೇಡಿ ಅಂತಾ ನಗರದಲ್ಲಿ ಜನರು,ಖಾರ-ಮಂಡಕ್ಕಿ ಸೇವಿಸಿ, ಸುರಕ್ಷಾ ಕನ್ನಡಕ ಬಳಸಿ ಗ್ರಹಣ ವೀಕ್ಷಣೆ ಮಾಡಿದ್ರು.  ಗ್ರಹಣ ವೀಕ್ಷಣೆಗೆ ಬಂದವರಿಗೆ ಖಾರ-ಮಂಡಕ್ಕಿ ವಿತರಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments