ಬೆಳಗಾವಿ : ಪಬ್-ಜಿ ಗೇಮ್ ಆಡ್ಬೇಡ ಅಂತ ಬುದ್ಧಿವಾದ ಹೇಳಿದ್ದಕ್ಕೇ ಕೋಪಗೊಂಡ ಮಗ ತನ್ನ ತಂದೆಯನ್ನೇ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.
ಶಂಕ್ರಪ್ಪ ಕುಂಬಾರ (60) ಮಗನಿಂದಲೇ ಕೊಲೆಗೀಡಾದ ದುರ್ದೈವಿ. ರಘುವೀರ್ (25) ತಂದೆಯನ್ನೇ ಕೊಂದ ಪಾಪಿ ಮಗ. ಪೊಲೀಸ್ ಇಲಾಖೆಯಲ್ಲಿ ಎಸ್ಐಯಾಗಿ ಸೇವೆ ಸಲ್ಲಿಸ್ತಿದ್ದ ಶಂಕ್ರಪ್ಪನವರು ಮೂರು ತಿಂಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ರಘುವೀರ ನಿತ್ಯ ಮೊಬೈಲ್ನಲ್ಲಿ ಪಬ್ ಜಿ ಆಡುತ್ತಿದ್ದ. ಇದನ್ನು ಗಮನಿಸಿದ ಶಂಕ್ರಪ್ಪನವರು ಬುದ್ಧಿ ಹೇಳ್ತಿದ್ರು. ಇದರಿಂದ ಕೋಪಗೊಂಡ ರಘುವೀರ್ ಒಂದ್ಸಲ ಅಕ್ಕ-ಪಕ್ಕದ ಮನೆಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದನಂತೆ..! ಆಗ ಆತನನ್ನು ಕಾಕತಿ ಪೊಲೀಸ್ರು ಸ್ಟೇಷನ್ಗೆ ಕರ್ಕೊಂಡು ಹೋಗಿ ತಂದೆ ಸಮ್ಮುಖದಲ್ಲೇ ಬುದ್ಧಿ ಮಾತು ಹೇಳಿದ್ರಂತೆ.
ಇಷ್ಟಾದ್ರೂ ಆತ ಮೊಬೈಲ್ ಬಿಟ್ಟಿರ್ಲಿಲ್ಲ. ನಿನ್ನೆ ರಾತ್ರಿ ಶಂಕ್ರಪ್ಪ ಬೈದಾಗ ಸಿಟ್ಟಾದ ರಘುವೀರ ತಾಯಿಯನ್ನು ಕೋಣೆಯೊಂದ್ರಲ್ಲಿ ಕೂಡಿ ಹಾಕಿ ಇಳಿಗೆಮಣೆಯಿಂದ ಶಂಕ್ರಪ್ಪರವರ ಕೈಕಾಲು, ಕುತ್ತಿಗೆಯನ್ನು ಕತ್ತರಿಸಿ ಹತ್ಯೆಗೈದಿದ್ದಾನೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ ಜಿ ಆಡ್ಬೇಡ ಅಂದಿದ್ದಕ್ಕೆ ತಂದೆಯನ್ನೇ ಕೊಂದ ಮಗ..!
RELATED ARTICLES