Wednesday, September 17, 2025
HomeUncategorizedಆರ್‌ಬಿಐನಿಂದ ರೆಪೋ ದರ ಹೆಚ್ಚಳ

ಆರ್‌ಬಿಐನಿಂದ ರೆಪೋ ದರ ಹೆಚ್ಚಳ

ಭಾರತದ ಜಿಡಿಪಿ 2022 -23 ನೇ ಸಾಲಿನಲ್ಲಿ 7.5 % ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಈ ಮೊದಲು ಪ್ರಸಕ್ತ ಸಾಲಿನಲ್ಲಿ ಶೇ 8 ರಷ್ಟು GDP ಸಾಧಿಸಬಹುದು ಎಂದು ವಿಶ್ವಬ್ಯಾಂಕ್ ಅಂದಾಜಿಸಿತ್ತು.

ದೇಶದಲ್ಲಿ ಹಣದುಬ್ಬರ ಹೆಚ್ಚಾಗಿರುವುದು, ಪೂರೈಕೆ ಜಾಲದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿರುವುದು ಮತ್ತು ಜಾಗತಿಕ ಬೆಳವಣಿಗೆಗಳು ಭಾರತದ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಇನ್ನು ಆರ್​ಬಿಐ ಕೂಡ ಜಿಡಿಪಿ ಗುರಿಯನ್ನು 7.8 ರಿಂದ 7.2ಕ್ಕೆ ಇಳಿಸಿತ್ತು. ಹಣದುಬ್ಬರದ ಹೊಡೆತದಿಂದ ಪಾರಾಗಲು ರಿಪೋ ದರವನ್ನು ಹೆಚ್ಚಿಸಿತ್ತು.

ಇಂದು ಆರ್ ಬಿಐ ಗವರ್ನರ್ ಸುದ್ದಿಗೋಷ್ಠಿ ನಡೆಸಿದ್ದು, ರೆಪೋ ದರ ಹೆಚ್ಚಿಸಲಾಗಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿದೆ. ಇದರಿಂದ ಬ್ಯಾಂಕ್ ಸಾಲ ಪಡೆದವರಿಗೆ ಬಡ್ಡಿ ದರಗಳು ಹೆಚ್ಚಾಗಲಿದೆ.

RELATED ARTICLES
- Advertisment -
Google search engine

Most Popular

Recent Comments