ಉಡುಪಿ : ಕುಂದಾಪುರ ಕೆಎಸ್ಆರ್ಟಿಸಿ ಡಿಪೋ ದ ಸಿಬ್ಬಂದಿಗಳು, ಚಾಲಕ ಮತ್ತು ನಿರ್ವಾಹಕರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು, ಮೂವರು ಚಾಲಕರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಕುಂದಾಪುರ ಬಸ್ರೂರು ಮೂಲದ 58 ವರ್ಷದ ಚಾಲಕ, ಬಾಗಲಕೋಟೆ ಮೂಲದ 36 ವರ್ಷದ ಚಾಲಕ ಮತ್ತು 44 ವರ್ಷದ ಚಾಲಕರಲ್ಲಿ ಕೊರೋನಾ ಸೊಂಕು ಪತ್ತೆಯಾಗಿದೆ. ಗುರುವಾರದಂದು ಕೆಎಸ್ಆರ್ಟಿಸಿ ಡಿಪೋದಲ್ಲಿ ಗಂಟಲ ದ್ರವ ಪರೀಕ್ಷೆಗೆ ಪಡೆಯಲಾಗಿತ್ತು, ಇಂದು ಇದರ ವರದಿ ಬಂದಿದ್ದು ಮೂವರ ವರದಿ ಪಾಸಿಟಿವ್ ಬಂದಿದೆ. ಮೂವರು ಕೂಡ ಅಂತರ್ ಜಿಲ್ಲಾ ಸಂಚಾರಿ ಬಸ್ ಚಾಲಕರಾಗಿದ್ದು, ಸದ್ಯ 44 ವರ್ಷದ ಸೊಂಕಿತರನ್ನು ಕುಂದಾಪುರ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 58 ವರ್ಷದ ಚಾಲಕ ರಜೆಯಲ್ಲಿದ್ದು ಲಾಕ್ ಡೌನ್ ಹಿನ್ನಲೆಯಲ್ಲಿ ಕರ್ತವ್ಯ ಕ್ಕೆ ಹಾಜರಾಗಿಲ್ಲ, 36 ವರ್ಷದ ಚಾಲಕ ರಜೆಯ ಮೇಲೆ ತನ್ನ ಊರು ಬಾಗಲಕೋಟೆಗೆ ತೆರಳಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಮೂವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಹಾಕಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಡ್ರೈವರ್ ಕ್ಯಾಬಿನ್ ಪ್ರತ್ಯೇಕವಾಗಿ ಇರುವ ಹಿನ್ನಲೆಯಲ್ಲಿ ಪ್ರಯಾಣಿಕರು ಭಯ ಪಡುವ ಅಗತ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.
ಮೂವರು ಕೆಎಸ್ಆರ್ಟಿಸಿ ಬಸ್ ಚಾಲಕರಿಗೆ ಕೊರೋನಾ
RELATED ARTICLES
Recent Comments
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


