ಮಂಡ್ಯ: ಕಾವೇರಿ ಮೈದುಂಬಿ ಹರಿದರೆ ಗಗನಚುಕ್ಕಿ ತನ್ನ ಸೌಂದರ್ಯವನ್ನು ಮರಳಿ ಪಡೆಯುತ್ತದೆ. ಆಕಾಶದಿಂದ ಧುಮ್ಮಿಕ್ಕುವ ಹಾಗೇ ಕಾಣುವ ಗಗನಚುಕ್ಕಿ ಜಲಪಾತವನ್ನು ಒಮ್ಮೆ ನೀವು ದ್ರೋಣ್ ಕ್ಯಾಮರಾದಲ್ಲಿ ನೋಡಿದರೆ ಮತ್ತಷ್ಟು ಮನಸ್ಸಿಗೆ ಮುದ ನೀಡಲಿದೆ.
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಆಕಾಶದಿಂದ ಧುಮ್ಮಿಕ್ಕಿ ಹರಿವು ಕಾವೇರಿಯ ಜಲ ವೈಭವವನ್ನು ನೀವೂ ಒಮ್ಮೆ ನೋಡಿ.
ಹಸಿರ ವನದ ನಡುವೆ ಹಾಲಿನ ನೊರೆಯಂತೆ ಶ್ವೇತ ವರ್ಣದಲ್ಲಿ ಕಾವೇರಿ ಕಂಗೊಳಿಸುತ್ತಿದ್ದಾಳೆ.ಕೆಆರ್‌ಎಸ್ ಹಾಗೂ ಕಬಿನಿಯಿಂದ 1.30 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗಗನಚುಕ್ಕಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮಳೆಗಾಲದಲ್ಲಿ ಜಲಪಾತ ವೈಭವ ನೋಡಲು ಕಣ್ಣಿಗೆ ಆನಂದವೋ ಆನಂದ.