ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿಂದಲೂ ನಾನಾ ರೀತಿಯ ಮಹತ್ತರ ಬದಲಾವಣೆಗಳಿಗೆ ಮುನ್ನುಡಿ ಬರೆಯುತ್ತಿರೋ ಬಂಗಾಳದ ಹುಲಿ ಸೌರವ್ ಗಂಗೂಲಿ ಇದೀಗ ಮತ್ತೊಂದು ಮಹತ್ವದ ಟೂರ್ನಿ ಆರಂಭಿಸಲು ಹೊರಟಿದ್ದಾರೆ. ಬಿಗ್ಬಾಸ್ ಆದ ಆರಂಭದಲ್ಲಿಯೇ ಮೊದಲ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಿದ್ದ, ನೋ ಬಾಲ್ ವೀಕ್ಷಣೆಗೆ ಪ್ರತ್ಯೇಕ ಅಂಪೇರ್ ಸೇರಿದಂತೆ ನಾನಾ ರೀತಿಯ ಪ್ರಯೋಗಗಳನ್ನು ಮಾಡಿರುವ ಹೊಸತನದ ಹರಿಕಾರ ಗಂಗೂಲಿ ನಾಲ್ಕು ದೇಶಗಳ ಸರಣಿ ( 4 ನೇಷನ್ ಟೂರ್ನಮೆಂಟ್) ಆಯೋಜಿಸಲು ತೀರ್ಮಾನಿಸಿದ್ದಾರೆ.
ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಮತ್ತೊಂದು ಪ್ರಬಲ ತಂಡಗಳ ಸರಣಿಯನ್ನು ನಡೆಸಲು ದಾದಾ ಉದ್ದೇಶಿಸಿದ್ದು ಅದಕ್ಕೆ ಕಾಲ ಕೂಡ ಸನ್ನಿಹಿತವಾಗಿದೆ. ನಿನ್ನೆಯಷ್ಟೇ ಕೋಲ್ಕತ್ತಾದಿಂದ ಇಂಗ್ಲೆಂಡ್ಗೆ ಪ್ರಯಾಳ ಬೆಳೆಸಿರೋ ಅವರು, “ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ‘ ಜೊತೆ ಮಾತುಕತೆ ನಡೆಸಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ)ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಗಂಗೂಲಿ ನಾಲ್ಕು ದೇಶಗಳ ಸರಣಿ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆಂದು ತಿಳಿದುಬಂದಿದೆ.
”ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಇಂಥಾ ಇನ್ಹೋವೇಟಿವ್ ಪ್ಲ್ಯಾನ್ಗಳು ಮೂಡಿ ಬರ್ತಿವೆ. ಈಗ ಸೂಪರ್ ಸೀರಿಸ್ ಆಯೋಜನೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ” ಅಂತ ಕ್ರಿಕೆಟ್ ಆಸ್ಟ್ರೇಲಿಯಾ ಚೀಫ್ ಎಕ್ಸ್ಕ್ಯೂಟಿವ್ ಕೆವಿನ್ ರಾಬರ್ಟ್ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
4 ರಾಷ್ಟ್ರಗಳ ಕ್ರಿಕೆಟ್ ಸರಣಿಗೆ ಮುನ್ನುಡಿ ಬರೆಯಲು ಇಂಗ್ಲೆಂಡ್ಗೆ ದಾದಾ..!
RELATED ARTICLES
Recent Comments
on ಕ್ಷಮಿಸಿ ಪಾಕ್ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ಆಗಲ್ಲ: ಪಾಕ್ನ ಟ್ರೋಲ್ ಮಾಡಿದ ಬ್ಲಿಂಕ್ಇಟ್
on ಗ್ರಾಮಿಣ ಬಾಗದ ಕಾಲೇಜನ್ನು ಬೆಳಗಾವಿಗೆ ಸ್ಥಳಾಂತರ ವಿರುದ್ದ ಸತ್ಯಾಗ್ರಹ ಮಾಡುತ್ತೆನೆ ಅದಕ್ಕಾಗಿ ಜೈಲಿಗೆ ಹೋಗಲು ಸಿದ್ದ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


