ಮುಂಬೈ : ಕತಾರ್ನಲ್ಲಿ ನಡೆಯಲಿರೋ 2022ರ ಫುಟ್ಬಾಲ್ ವರ್ಲ್ಕಪ್ಗೆ ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ಕ್ಯಾಪ್ಟನ್ಗಳಾದ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಿಗೆ ಆಹ್ವಾನವನ್ನು ನೀಡಲಾಗಿದೆ.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಫಿಫಾ ವಿಶ್ವಕಪ್ ಕಳೆದ ವರ್ಷ ರಷ್ಯಾದಲ್ಲಿ ನಡೆದಿತ್ತು. ಫ್ರಾನ್ಸ್ ಚಾಂಪಿಯನ್ ಆಗಿತ್ತು. 2022ರಲ್ಲಿ ಅರಬ್ ರಾಷ್ಟ್ರದ ಕತಾರ್ನಲ್ಲಿ ನಡೆಯಲಿದೆ. ಈ ವಿಶ್ವಕಪ್ಗೆ 1983ರಲ್ಲಿ ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ದೇವ್ ಮತ್ತು 2011ರಲ್ಲಿ ವರ್ಲ್ಡ್ಕಪ್ ತಂದುಕೊಟ್ಟ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡಗಳನ್ನು ಫಿಫಾಕ್ಕೆ ಆಹ್ವಾನಿಸಲಾಗಿದೆ. ಟೂರ್ನಿಯ ಸಿಇಒ ನಾಸೀರ್ ಅಲ್ ಖಾತರ್ ಈ ಟೀಮ್ಗಳಿಗೆ ಆಹ್ವಾನ ನೀಡಿದ್ದಾರೆ.
ಭಾರತದ ಕ್ರಿಕೆಟಿಗರನ್ನು ಆಹ್ವಾನಿಸಿದ್ದು, ಅವರ ಆಗಮನದಿಂದ ಟೂರ್ನಿಗೆ ಮೆರಗು ಹೆಚ್ಚಲಿದೆ. ವಿಶೇಷವಾಗಿ ಕಪಿಲ್ ದೇವ್ ಮತ್ತು ಧೋನಿ ಅವರಿಗೆ ಆಹ್ವಾನ ನೀಡಲಾಗಿದೆ ಅಂತ ಖಾತರ್ ತಿಳಿಸಿದ್ದಾರೆ.
2022ರ ಫಿಫಾ ವರ್ಲ್ಡ್ಕಪ್ಗೆ ಕಪಿಲ್-ಧೋನಿಗೆ ಆಹ್ವಾನ
RELATED ARTICLES