Sunday, September 14, 2025
HomeUncategorizedನಿಯಮ ಮೀರಿ ಅಡ್ಡಪಲ್ಲಕ್ಕಿ ಉತ್ಸವ : 35 ಕ್ಕೂ ಹೆಚ್ಚು ಜನರ ಬಂಧನ!

ನಿಯಮ ಮೀರಿ ಅಡ್ಡಪಲ್ಲಕ್ಕಿ ಉತ್ಸವ : 35 ಕ್ಕೂ ಹೆಚ್ಚು ಜನರ ಬಂಧನ!

ಕೊಪ್ಪಳ: ಗ್ರಾಮದಲ್ಲಿ ನೆಡಯುತ್ತಿದ್ದ ಅಡ್ಡಪಲ್ಲಕ್ಕಿ ಉತ್ಸವವನ್ನು ತಡೆಯಲು ಬಂದಿದ್ದ ಪೋಲಿಸ್ ವ್ಯಾನ್ ಅನ್ನು ಜಖಂ ಮಾಡಿರುವ ಘಟನೆಯೊಂದು ಕೊಪ್ಪಳದಲ್ಲಿ ನೆಡದಿದೆ. ನಿನ್ನೆ ತಡ ರಾತ್ರಿ ಕೊಪ್ಪಳದ ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಕಮುನಿ ತಾತನ ಆರಾಧನಾ ಮಹೋತ್ಸವ ಹಿನ್ನಲೆಯಲ್ಲಿ ಅಡ್ಡಪಲ್ಲಕ್ಕಿ ಉತ್ಸವವನ್ನು ಸರಳವಾಗಿ ಆಚರಿಸಲು ಕುಷ್ಟಗಿ ತಾಲ್ಲೂಕು ಆಡಳಿತ ನಿರ್ಧರಿಸಲಾಗಿತ್ತು. ಜೊತೆಗೆ ದಶಕಗಳಿಂದ ಆಚರಿಸುತ್ತ ಬಂದಿರುವ ಅಡ್ಡಪಲ್ಲಕ್ಕಿ ಉತ್ಸವ ನಿಲ್ಲಬಾರದು ಎನ್ನುವ ಕಾರಣಕ್ಕೆ ದೇವಸ್ಥಾನ ಆಡಳಿತ ಮಂಡಳಿಯವರೆ ಅಡ್ಡಪಲ್ಲಕ್ಕಿಯನ್ನು ಗದ್ದುಗೆಯಿಂದ ಮೇಲೆಬ್ಬಿಸಿ ದೇವಸ್ಥಾನದ ಒಳಗಡೆಯಿಂದಲೇ ನಾಲ್ಕು ಸುತ್ತು ಪ್ರದಕ್ಷಿಣೆ ಹಾಕಿ ಪುನಃ ಗದ್ದುಗೆಗೆ ಕೂರಿಸಲು ಮೊನ್ನೆ ದಿನ ನೆಡೆದ ಸಭೆಯಲ್ಲಿ ತಿರ್ಮಾನಿಸಲಾಗಿತ್ತು.

ಆದ್ರೆ ನಿನ್ನೆ ತಡರಾತ್ರಿ ನೆಡದಿದ್ದೆ ಬೇರೆ ಗದ್ದುಗೆಯಿಂದ ಅಡ್ಡಪಲ್ಲಕ್ಕಿಯನ್ನು ಯಾರ ಮಾತು ಕೇಳದೆ ಬೀಗ ಹಾಕಿದ್ದ ಶೆಟರ್ ಧ್ವಂಸಗೊಳಿಸಿ ಹೊರತರಲಾಗಿದೆ. ಇನ್ನೂ ಅಡ್ಡ ಪಲ್ಲಕ್ಕಿ ಹೊರಬರುತ್ತಿದ್ದಂತೆ ಹೊರಗಡೆ ನಿಂತಿದ್ದ ಸಾವಿರಾರು ಜನರ ಹರ್ಷದ್ಘಾರ ಮುಗಿಲು ಮುಟ್ಟಿದೆ. ನಂತರ ಪಲ್ಲಕಿಯನ್ನು ಒತ್ತು ಊರು ತುಂಬಾ ಮೆರವಣಿಗೆ ಮಾಡಿದ್ದಾರೆ. ಇಷ್ಟಕ್ಕೂ ಘಟನೆ ಉದ್ರಿಕ್ತ ಸ್ಥಿತಿ ತಲುಪಲು ಕಾರಣ ಏನೆಂದು ನೋಡುವುದಾದರೆ. ಕೊರೋನಾ ಹಿನ್ನೆಲೆ ಶ್ರೀ ಅವಧೂತ ಶುಕಮುನಿ ತಾತನ ಐತಿಹಾಸಿಕ ಆರಾಧನಾ ಮಹೋತ್ಸವವನ್ನು ನಿಷೇಧಿಸಲಾಗಿತ್ತು. ಅದರೆ, ಸಂಪ್ರದಾಯನ್ನು ಕೈಬಿಡಬಾರದು ಎನ್ನುವ ಕಾರಣದಿಂದ ಸರಳವಾಗಿ ಆಚರಿಸಲು ನಿರ್ಧರಿಸಲಾಗಿತ್ತು.

ಈ ವೇಳೆ ಕೆಲವರು ದಾಂಧಲೆ ನಡೆಸಿದ್ದರಿಂದ ಪರಿಸ್ಥಿತಿ ಅರಿತ ತಹಶೀಲ್ದಾರ್​ ಎಂ.ಸಿದ್ದೇಶ ಹಾಗೂ ಸಿಪಿಐ ಚಂದ್ರಶೇಖರ ಜಿ. ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಇದಾದ ಬಳಿಕ ಅಡ್ಡಪಲ್ಲಕ್ಕಿ ವಶಕ್ಕೆ ತೆಗೆದುಕೊಳ್ಳಲು ಬಂದಾಗ ಅಡ್ಡಪಲ್ಲಕ್ಕಿಯನ್ನು ಸಿಪಿಐ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಈ ಸಂದರ್ಭದಲ್ಲಿ ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಈಗಾಗಲೇ 35ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಇನ್ನುಳಿದವರನ್ನು ಸಿಸಿ ಟಿವಿ  ಫೂಟೇಜ್ ಬಳಸಿಕೊಂಡು ಹುಡುಕುವ ಪ್ರಯತ್ನದಲ್ಲಿದ್ದಾರೆ. ಒಟ್ಟಾರೆ ನಿನ್ನೆ ದೋಟಿಹಾಳ ಗ್ರಾಮದಲ್ಲಿ ನೆಡೆದ ಪ್ರಕರಣ ಗ್ರಾಮಸ್ಥರಿಗೆ ಪವಾಡ ಸದೃಶ್ಯ ಎನಿಸಿದರೆ ಪೊಲೀಸ್ ಅಧಿಕಾರಿಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

-ಶುಕ್ರಾಜ್ ಕುಮಾರ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments