Thursday, August 21, 2025
Google search engine
HomeUncategorizedPOK ಜನರು ಸ್ವಯಂ ಪ್ರೇರಿತರಾಗಿ ಭಾರತಕ್ಕೆ ಸೇರುವ ದಿನ ದೂರವಿಲ್ಲ; ರಾಜನಾಥ್​ ಸಿಂಗ್​

POK ಜನರು ಸ್ವಯಂ ಪ್ರೇರಿತರಾಗಿ ಭಾರತಕ್ಕೆ ಸೇರುವ ದಿನ ದೂರವಿಲ್ಲ; ರಾಜನಾಥ್​ ಸಿಂಗ್​

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತದ ಭಾಗವಾಗುವ ದಿನ ದೂರ ಉಳಿದಿಲ್ಲ. ಅವರೇ ಸ್ವಇಚ್ಚೆಯಿಂದ ಭಾರತಕ್ಕೆ ಮರಳುತ್ತಾರೆ ಎಂದು ರಕ್ಷಣ ಸಚಿವ ರಾಜನಾಥ್​ ಸಿಂಗ್​ ಅವರು ಹೇಳಿದ್ದಾರ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ರಾಜನಾಥ್ ಸಿಂಗ್​ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ :ದಕ್ಷಿಣೆ ರೂಪದಲ್ಲಿ ಪಿಒಕೆ ಕೇಳಿದ್ದೇನೆ; ಸೇನಾ ಮುಖ್ಯಸ್ಥರಿಗೆ ಜಗದ್ಗುರು ರಾಮಭದ್ರಾಚಾರ್ಯರ ಮನವಿ

ಸಿಐಐ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತದ ಭಾಗವಾಗಿದ್ದು, ಅವರು ಭಾರತದೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕವಾಗಿದ್ದರೂ ಪಿಒಕೆ ಜನರು ಒಂದು ದಿನ ಸ್ವಾಭಿಮಾನ ಮತ್ತು ಸ್ವಇಚ್ಛೆಯೊಂದಿಗೆ ಭಾರತಕ್ಕೆ ಮರಳುತ್ತಾರೆಂಬ ವಿಶ್ವಾಸವಿದೆ, ಆದರೆ ಅಲ್ಲಿರುವ ಕೆಲವರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ರಾಜ್ಯ ಸರ್ಕಾರಕ್ಕೆ ಮುಖಭಂಗ: ಹುಬ್ಬಳ್ಳಿ ಗಲಭೆ ಸೇರಿ 43 ಕೇಸ್ ವಾಪಸ್ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಮುಂದುವರಿದು ಮಾತನಾಡಿದ ರಾಜನಾಥ್​ ಸಿಂಗ್​ ‘ ಭಾರತ ಪಾಕ್​ ಆಕ್ರಮಿತ ಪ್ರದೇಶದಲ್ಲಿರುವವರನ್ನು ನಮ್ಮ ಕುಟುಂಬದ ಭಾಗವೆಂದು ಪರಿಗಣಿಸುತ್ತದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ನಮ್ಮವರು, ನಮ್ಮ ಕುಟುಂಬದ ಭಾಗ ಎಂದು ನಾನು ನಂಬುತ್ತೇನೆ. ನಮ್ಮಿಂದ ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಬೇರ್ಪಟ್ಟ ನಮ್ಮ ಸಹೋದರರು ಸಹ ಒಂದು ದಿನ ಅವರ ಆತ್ಮದ ಧ್ವನಿಯನ್ನು ಕೇಳುತ್ತಾ ಭಾರತಕ್ಕೆ ಮರಳುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಸೇನಾ ರಫ್ತಿನ ಬಗ್ಗೆ ಸಿಂಗ್ ಮಾತು..!

ಇದನ್ನೂ ಓದಿ :ಸನಾತನ ಧರ್ಮವೇ ಇಸ್ಲಾಂ ಧರ್ಮಕ್ಕೆ ಅಡಿಪಾಯ , ಮುಸ್ಲಿಂರು ರಾಮನ ವಂಶಸ್ಥರು; ಜಮಾಲ್​ ಸಿದ್ದಿಕಿ, ಬಿಜೆಪಿ ನಾಯಕ

ಭಾರತದ ರಕ್ಷಣಾ ಉತ್ಪಾದನ ಸಾಮರ್ಥ್ಯದ ಬಗ್ಗೆ ಮಾತನಾಡಿದ ರಾಜನಾಥ್​ ಸಿಂಗ್​ ‘ಭಾರತದ ರಕ್ಷಣಾ ರಫ್ತು 10 ವರ್ಷಗಳ ಹಿಂದೆ 1,000 ಕೋಟಿ ರೂ.ಗಳಿಗಿಂತ ಕಡಿಮೆಯಿತ್ತು. ಆದರೆ, ಈಗ ಅದು 23,500 ಕೋಟಿ ರೂ.ಗಳ ದಾಖಲೆಯ ಸಂಖ್ಯೆಯನ್ನು ತಲುಪಿದೆ. ಇಂದು, ಭಾರತದ ಭದ್ರತೆ ಮತ್ತು ಸಮೃದ್ಧಿಗೆ ರಕ್ಷಣೆಯಲ್ಲಿ ಮೇಕ್-ಇನ್-ಇಂಡಿಯಾ ಅತ್ಯಗತ್ಯ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments