ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಬುಧವಾರ ಚಿತ್ರಕೂಟದಲ್ಲಿರುವ ಆಧ್ಯಾತ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯರ ಆಶ್ರಮಕ್ಕೆ ಭೇಟಿ ನೀಡಿದ್ದು. ಈ ವೇಳೆ ಗುರುಗಳು ತಾವು ಪವಿತ್ರ ದೀಕ್ಷೆಯನ್ನು ನೀಡಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ವನ್ನು ದಕ್ಷಿಣೆಯಾಗಿ ಕೇಳಿರುವುದಾಗಿ ಖಾಸಗಿ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜಗದ್ಗುರು ರಾಮಭದ್ರಾಚಾರ್ಯರು ಭೇಟಿಯ ವಿವರಗಳನ್ನು ಹಂಚಿಕೊಂಡಿದ್ದಾರೆ. “ಭಗವಾನ್ ಹನುಮಂತನು ಮಾತೆ ಸೀತಾಳಿಂದ ಪಡೆದ ಮತ್ತು ನಂತರ ಲಂಕಾವನ್ನು ವಶಪಡಿಸಿಕೊಂಡ ರಾಮ ಮಂತ್ರದೊಂದಿಗೆ ಅದೇ ದೀಕ್ಷೆಯನ್ನು ನಾನು ಅವರಿಗೆ ನೀಡಿದ್ದೇನೆ. ನನಗೆ ಪಿಒಕೆ ಮರಳಿ ಬೇಕು ಎಂದು ನಾನು ಅವರಿಂದ ದಕ್ಷಿಣೆಯನ್ನು ಕೇಳಿದ್ದೇನೆ” ಎಂದು ಹೇಳಿದರು. ಇದನ್ನೂ ಓದಿ:ರಾಜ್ಯ ಸರ್ಕಾರಕ್ಕೆ ಮುಖಭಂಗ: ಹುಬ್ಬಳ್ಳಿ ಗಲಭೆ ಸೇರಿ 43 ಕೇಸ್ ವಾಪಸ್ ಆದೇಶ ರದ್ದುಗೊಳಿಸಿದ ಹೈಕೋರ್ಟ್
ನಿನ್ನೆ (ಮೇ.28) ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಪತ್ನಿಯೊಂದಿಗೆ ಆಧ್ಯಾತ್ಮಿಕ ನಗರ ಚಿತ್ರಕೂಟ ತಲುಪಿದ್ದರು. ಈ ವೇಳೆ ಜನರಲ್ ಉಪೇಂದ್ರ ದ್ವಿವೇದಿ ಅವರು ಎಲ್ಲಾ ಸಂತರು ಮತ್ತು ವಿದ್ಯಾರ್ಥಿಗಳ ಮುಂದೆ ಭಾರತೀಯ ಸೇನೆಯ ಶೌರ್ಯವನ್ನು ಶ್ಲಾಘಿಸಿದರು. ಈ ವೇಳೆ ರಾಮಭದ್ರಾಚಾರ್ಯ ದಿವ್ಯಾಂಗ ರಾಜ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಿದರು.
ಇದನ್ನೂ ಓದಿ :ಕಮಲ್ ಬಳಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡುತ್ತೇವೆ, ಇಲ್ಲದಿದ್ದರೆ ಸಿನಿಮಾ ಬ್ಯಾನ್; ನರಸಿಂಹಲು
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ನುಗ್ಗಿ ಪಿಒಕೆ ಮತ್ತು ಇತರ ಸ್ಥಳಗಳಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಭಾರತದ ಈ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್‌ನ ಅನೇಕ ಸಂಬಂಧಿಕರು ಸಹ ಕೊಲ್ಲಲ್ಪಟ್ಟರು.