Thursday, August 21, 2025
Google search engine
HomeUncategorizedಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಕಮಲ್​ ಹಾಸನ್​ ವಿವಾದ; ಕ್ಷಮೆ ಕೇಳಲು ಕನ್ನಡಿಗರಿಂದ ಒತ್ತಾಯ

ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಕಮಲ್​ ಹಾಸನ್​ ವಿವಾದ; ಕ್ಷಮೆ ಕೇಳಲು ಕನ್ನಡಿಗರಿಂದ ಒತ್ತಾಯ

ನಟ ಕಮಲ್​ ಹಾಸನ್​ ಕನ್ನಡದ ಬಗ್ಗೆ ನೀಡಿರುವ ಹೇಳಿಕೆಗೆ ರಾಜ್ಯದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು. ಕನ್ನಡ ಪರ ಸಂಘಟನೆಗಳು ಕಮಲ್​ ಹಾಸನ್​ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇತ್ತೀಚೆಗೆ ‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಚೆನ್ನೈನಲ್ಲಿ ನಡೆಯಿತು. ಇದಕ್ಕೆ ಶಿವರಾಜ್​ಕುಮಾರ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಮಾತನಾಡುವಾಗ ಕಮಲ್ ಹಾಸನ್ ‘ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು’ ಎಂದು ಹೇಳಿದ್ದರು. ನಟ ಶಿವರಾಜ್​ ಕುಮಾರ್​ ಕೂಡ ಈ ವೇಳೆ ವೇದಿಕೆ ಮೇಲೆ ಇದ್ದರು. ಇದೀಗ ನಟ ಕಮಲ್​ ಹಾಸನ್​ ಹೇಳಿಕೆಗೆ ಎಲ್ಲಡೆ ಟೀಕೆ ವ್ಯಕ್ತವಾಗುತ್ತಿದ್ದು. ನಟ ಕಮಲ್​ ಹಾಸನ್​ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ಸಿನಿಮಾ ಬಿಡುಗಡೆಯಾಗಲು ಬಿಡವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ :ದುಬೈಗೆ ತೆರಳಲು ಅವಕಾಶ ಕೊಡಿ ಎಂದು ನ್ಯಾಯಾಲಯಕ್ಕೆ ದರ್ಶನ್​​ ಮನವಿ

ಕರವೇ ಪ್ರವೀಣ್​ ಶೆಟ್ಟಿ ಬಣದಿಂದ ಪ್ರತಿಭಟನೆ..!

ಕಮಲ್ ಹಾಸನ್ ವಿರುದ್ದ ಕರವೇ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು. ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ವೇಳೆ ಮಾತನಾಡಿದ ಪ್ರವೀಣ್​ ಶೆಟ್ಟಿ “ನಿನ್ನೆ ಥಗ್ ಆಫ್​​ ಲೈಫ್ ಚಿತ್ರದ ಕಾರ್ಯಕ್ರಮದ ವೇಳೆ, ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಅಂತ ಹೇಳಿದ್ದಾರೆ.
ಫಿಲ್ಮಂ ಚೇಂಬರ್ ಇತ್ತೀಚಿಗೆ ಒಳ್ಳೆ ಕೆಲಸ ಮಾಡ್ತಾ ಇದೆ. ಸೋನು ನಿಗಮ್​ರನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ.

ಈಗ ಕಮಲ್ ಹಾಸನ್ ಚಿತ್ರಕ್ಕೆ ಅವಕಾಶ ನೀಡಬಾರದು. ಶಿವರಾಜ್‌ಕುಮಾರ್ ಕಮಲ್ ಹಾಸನ್​ರನ್ನು ತಂದೆ ಸ್ಥಾನದಲ್ಲಿ ಇರಿಸಿದ್ದಾರೆ. ಆದರೆ ತಮಿಳು ಭಾಷೆ ಕನ್ನಡದ ತಾಯಿ ಅಂತ ಹೇಳೋದು ಸರಿಯಲ್ಲ. ಕಮಲ್ ಹಾಸನ್​ ಅವರ ದಾಂಪತ್ಯ ಜೀವನ ಸರಿ ಇಲ್ಲ, ರಾಜಕೀಯವಾಗಿ ಸೋತು ಸುಣ್ಣ ಆಗಿದ್ದಾರೆ, ಅವರ ಸಿನಿಮಾಗಳನ್ನ ಗೆಲ್ಲಿಸಿದ್ದ ಕನ್ನಡಿಗರು. ಇದನ್ನೂ ಓದಿ:ಅಬ್ದುಲ್ ರಹೀಂ ಹತ್ಯೆ ಪ್ರಕರಣ; ಕರಾವಳಿ ಮತ್ತೆ ಉದ್ವಿಘ್ನ, ಬಸ್​ಗಳ ಮೇಲೆ ಕಲ್ಲು ತೂರಾಟ

ಹೀಗಾಗಿ ಅವರು ಕ್ಷಮೆ ಕೇಳುವವರೆಗೂ ಕನ್ನಡ ನಾಡಲ್ಲಿ ಅವರ ಸಿನಿಮಾಗೆ ಅವಕಾಶ ನೀಡಬಾರದು. ಕನ್ನಡ ಚಿತ್ರಗಳಿಗೆ ಇಂದು ಮಾಲ್‌ಗಳು ಹಾಗೂ ಥಿಯೇಟರ್‌ಗಳಿಗೆ ಅವಕಾಶ ಇಲ್ಲ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ್ ಶೆಟ್ಟಿ ಆಗ್ರಹಿಸಿದರು.

ಮೈಸೂರಿನಲ್ಲಿ ಕನ್ನಡಪರ ಸಂಘಟನೆಯಿಂದ ಪ್ರತಿಭಟನೆ..!

ಮೈಸೂರಿನಲ್ಲಿ ಕಮಲ ಹಾಸನ್ ವಿರುದ್ಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದ್ದು. ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಮಲ್ ಹಾಸನ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್​ ಹಾಸನ್​ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಶಿವರಾಜ್​ ಕುಮಾರ್ ಅವರು ಕೂಡ ಇದರ ಬಗ್ಗೆ ಮಾತನಾಡಿಲ್ಲ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ.

ಕನ್ನಡದಲ್ಲಿ 52 ಅಕ್ಷರಗಳಿವೆ ಆದರೆ ತಮಿಳಿನಲ್ಲಿ ಕೇವಲ 18 ಅಕ್ಷರಗಳಿವೆ. ಕನ್ನಡ ತನ್ನದೇ ಆದ ಇತಿಹಾಸ ಹೊಂದಿದೆ. ನಿಮ್ಮ ತಮಿಳಿನಿಂದ ನಮ್ಮ ಕನ್ನಡ ಹುಟ್ಟಿಲ್ಲ‌. ಈ ಕೂಡಲೇ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲ ಅಂದರೆ ಅವರ ಥಗ್ ಲೈಫ್​ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟನಾಕಾರರ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:‘ನಮ್ಮಪ್ಪಂದೆ ಕಾರು, ಏನ್​ ಕಿತ್ಕೋತೀಯಾ’; ಅಪ್ಪನ ದುಡ್ಡಲ್ಲಿ ಯುವಕನ ಹುಚ್ಚಾಟ

ಬೆಳಗಾವಿಯಲ್ಲಿ ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನೆ..!

ಬೆಳಗಾವಿ ನಗರದ ಐನಾಕ್ಸ್ ಚಿತ್ರ ಮಂದಿರದ ಬಳಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಸಿದ ಹೋರಾಟಗಾರರು. ‘ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments