‘ಬ್ಲಿಂಕ್’ ಸಿನಿಮಾ ಮೂಲಕ ಅಪರೂಪದ ಕಥಾ ಶೈಲಿಯಿಂದ ಕನ್ನಡಿಗರ ಮನಸು ಗೆದ್ದಿದ್ದ ಬ್ಲಿಂಕ್ ತಂಡ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಹೊಸದಾಗಿ ಅನಾವರಣಗೊಂಡಿರುವ ಹಾರರ್ ಥ್ರಿಲ್ಲರ್ “ವೀಡಿಯೋ” ಸಿನಿಮಾದ ಮೊದಲ ಟೀಸರ್ ಮತ್ತು ಥೀಮ್ ಮ್ಯೂಸಿಕ್ ಇದೀಗ ಬಿಡುಗಡೆಯಾಗಿದೆ.’
‘ಬ್ಲಿಂಕ್’ ಸಿನಿಮಾ ಮೂಲಕ ಹಿಟ್ ಕೊಟ್ಟಿದ್ದ ದೀಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಶ್ರೀನಿಧಿ ಬೆಂಗಳೂರು ಇದೀಗ ಮತ್ತೊಂದು ವಿನೂತನ ಹಾರರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ವೀಡಿಯೋ ಚಿತ್ರದ ಮೊದಲ ಟೀಸರ್ ಹಾಗೂ ಥೀಮ್ ಮ್ಯೂಸಿಕ್ ಬಿಡುಗಡೆಯಾಗಿದ್ದು. ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟಿಯರಿಂದ ಟೀಸರ್ ಬಿಡುಗಡೆ ಮಾಡಿದ್ದು ವಿಶೇಷವೆನಿಸಿದೆ. ಇನ್ನು ವಿಶೇಷವಾಗಿ ಟೀಸರ್ ಲಾಂಚ್ ವೇಳೆ ದೆವ್ವದ ಹಾಡು ಹಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಇದನ್ನೂ ಓದಿ :‘ನಮ್ಮನ್ನ ಹೂಳಬೇಡಿ, ಅಗ್ನಿ ಸ್ಪರ್ಶ ಮಾಡಿ’; ಮನಕಲಕುವಂತಿದೆ ದಂಪತಿ ಬರೆದಿದ್ದ ಡೆತ್ನೋಟ್..!
ದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು. ಇನ್ನು ಈ ಸಿನಿಮಾದಲ್ಲಿ ಭರತ, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ ಆಚಾರ್, ನಲ್ಮೇ ನಾಚಿಯಾರ್ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸನ್ನ ಕುಮಾರ್ ಸಿನಿಮಾಗೆ ಸಂಗೀತ ನಿರ್ದೇಶಕರಾಗಿದ್ದು. ಅವಿನಾಶ್ ಶಾಸ್ತ್ರಿ ಛಾಯಾಗ್ರಹಣದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇದನ್ನೂ ಓದಿ :ಧಾರಕಾರ ಮಳೆಗೆ ಮನೆ ಗೋಡೆ ಕುಸಿದು 3 ವರ್ಷದ ಮಗು ಸಾ*ವು
ಸದ್ಯ ಟೀಸರ್ ಬಿಡುಗಡೆ ಮಾಡಿರೋ ಚಿತ್ರತಂಡ ಇಲ್ಲಿಂದ ಚಿತ್ರೀಕರಣ ಆರಂಭಿಸಲಿದ್ದು, ಇದೇ ವರ್ಷ ಚಿತ್ರವನ್ನ ತೆರೆಗೆ ತರುವ ಉತ್ಸಾಹದಲ್ಲಿದೆ.