ಗದಗ : ಬಾವಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮ ಹೊರವಲಯದ ಜಮೀನಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು 30 ವರ್ಷದ ಶಂಕ್ರಪ್ಪ ಅಲಿಯಾಸ್ ಮುತ್ತುಕೊಳ್ಳಿ ಎಂದು ಗುರುತಿಸಿದ್ದು. ಹೆಂಡತಿ ಮತ್ತು ಆಕೆಯ ಪ್ರಿಯಕರನೆ ಕೊಲೆ ಮಾಡಿ ಬಾವಿಗೆ ಎಸೆದಿರುವ ಆರೋಪ ಕೇಳಿ ಬಂದಿದೆ.
ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಶಂಕ್ರಪ್ಪ ಕುರಹಟ್ಟಿ ಗ್ರಾಮದ ವಿದ್ಯಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮುದ್ದಾದ ಎರಡು ಮಕ್ಕಳು ಇದ್ದವು. ಆದರೆ ವಿದ್ಯಾಳಿಗೆ ಡ್ರೈವರ್ ಶಿವಕುಮಾರ್ ಎಂಬಾತನ ಜೊತೆ ಪ್ರೀತಿಯಾಗಿ ಆತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಇತ್ತೀಚೆಗೆ ವಿದ್ಯಾಳ ಪತಿಗೆ ತಿಳಿದಿತ್ತು. ಇದನ್ನೂ ಓದಿ :ಜಿಟಿ-ಜಿಟಿ ಮಳೆಯಲ್ಲಿ ನವಜಾತ ಶಿಶುವನ್ನು ರಸ್ತೆಯಲ್ಲಿ ಬಿಟ್ಟು ಹೋದ ಪಾಪಿ ತಾಯಿ
ಇದರಿಂದಾಗಿ ಹೆದರಿದ್ದ ಶಿವಕುಮಾರ್ ಮತ್ತು ವಿದ್ಯಾ, ಶಂಕ್ರಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ನಂತರ ಶವದ ಕೈ-ಕಾಲುಗಳನ್ನು ಕಟ್ಟಿ. ನಂತರ ಶವವನ್ನು ನಾಲ್ಕೈದು ಹಾಸಿಗೆಯಲ್ಲಿ ಸುತ್ತಿ. ರೋಣಾದಿಂದ ಸುಮಾರು 17 ಕಿಮೀ ದೂರದಲ್ಲಿರುವ ಮುಗಳಿ ಗ್ರಾಮದ ಸಮೀಪವಿರುವ ಜಮೀನಿನ ಬಾವಿಯಲ್ಲಿ ಶವವನ್ನು ಎಸೆದಿದ್ದಾರೆ. ಇದನ್ನೂ ಓದಿ:ಸಿಂಗಾಪುರ-ಹಾಂಕಾಂಗ್ನಲ್ಲಿ ಕೋವಿಡ್ ಹೆಚ್ಚಳ: ಭಾರತದಲ್ಲೂ 257 ಪ್ರಕರಣಗಳು ಪತ್ತೆ
ಈ ಕಳೆದ ನಾಲ್ಕೈದು ದಿನಗಳ ಹಿಂದೆ ಘಟನೆ ನಡೆದಿದ್ದು, ಇಂದು ಬಾವಿಯಲ್ಲಿ ಶವ ಪತ್ತೆಯಾಗಿದೆ. ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದು. ಆರೋಪಿ ವಿದ್ಯಾ ಮತ್ತು ಶಿವಕುಮಾರ್ನನ್ನು ವಶಕ್ಕೆ ಪಡೆದು, ತನಿಖೆ ಆರಂಭಿಸಿದ್ದಾರೆ, ಘಟನೆ ಸಂಬಂಧ ರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.