Saturday, August 30, 2025
HomeUncategorizedಸಿದ್ದರಾಮಯ್ಯರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ : ವಿಜಯೇಂದ್ರ

ಸಿದ್ದರಾಮಯ್ಯರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ : ವಿಜಯೇಂದ್ರ

ಬೆಂಗಳೂರು : ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದ್ದು. ಕೇವಲ 20 ತಿಂಗಳಲ್ಲೇ ಸಿದ್ದರಾಮ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ಸರ್ಕಾರ ಅಧಿಕಾರದ ಮದದಲ್ಲಿ ತೇಲುತ್ತಿದೆ ಎಂದು ಹೇಳಿದರು.

ಬೆಲೆ ಏರಿಕೆ ವಿರುದ್ದ ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು. ಇದರ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ‘ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 20 ತಿಂಗಳಲ್ಲಿ ಸಿದ್ದರಾಮಯ್ಯರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ಅಧಿಕಾರಕ್ಕೆ ಬರೋಕು ಮುನ್ನ ಇದ್ದ ಕಾಳಜಿ ಅಧಿಕಾರಕ್ಕೆ ಬಂದ ನಂತರ ಯಾಕೆ ಮರೆತು ಹೋಗಿದೆ..? ಅಹಿಂದ ಅಂತಾ ಹೆಸರೇಳಿ ಮುಖ್ಯಮಂತ್ರಿ ಸ್ಥಾನದ ಕುರ್ಚಿಯಲ್ಲಿ ಕುಳಿತು, ಇವಾಗ ಅಹಿಂದ ಅನ್ನೋದೇ ಇಲ್ಲದಂತಾಗಿದೆ. ಕಾಂಗ್ರೆಸ್​ ಮುಸಲ್ಮಾನರ ಹಿಂದೆ ಹೋಗಿ ಹಿಂದುಗಳಿಗೆ ಅವಮಾನ ಮಾಡುತ್ತಿದೆ. ಇವರ ಆಡಳಿತದ ಪರಿಣಾಮವಾಗಿ ಜನರು ಕಣ್ಣೀರಾಕುವಂತಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ಅಲ್ಪಸಂಖ್ಯಾತರಿಗೆ ಅತ್ಯಂತ ಸುರಕ್ಷಿತ ಸ್ಥಳ ಭಾರತ : ಕಿರಣ್​ ರಿಜಿಜು

ಮುಂದುವರಿದು ಮಾತನಾಡಿದ ವಿಜಯೇಂದ್ರ ‘ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಸರ್ಕಾರಕ್ಕೆ ಬಡವರು ಬೇಕಾಗಿಲ್ಲ. ಈ ಅಧಿಕಾರ ಅಮಲನ್ನು ಇಳಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗಿದೆ, ನಾಡಿನ ಮತದಾರರಿಗೂ ನಿಮ್ಮ ದರ್ಪ ಇಳಿಸುವ ಶಕ್ತಿ ಇದೆ. ನಾವೆಲ್ಲರೂ ಒಟ್ಟಾಗಿ ತೀರ್ಮಾನ ಮಾಡಿದ್ದೇವೆ. ಇಟ್ಟ ಗುರಿ, ಮುಂದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ಏಪ್ರಿಲ್ 7 ರಂದು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದು ಜನಾಕ್ರೋಶ ಯಾತ್ರೆ ಶುರು ಮಾಡಿ ಪ್ರತಿ ಜಿಲ್ಲೆಗಳಿಗೂ ಹೋಗುತ್ತೇವೆ. ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯವಿದೆ. ಬಡವರ ಪರವಾಗಿ ಧ್ವನಿಯಾಗಿ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಹಾಗು ಕಿತ್ತೊಸೆಯುವ ಕೆಲಸ ಮಾಡಬೇಕಿದೆ. ಬೆಲೆ ಏರಿಕೆ ಹಿಂದಕ್ಕೆ ತಗೊಳ್ಳಬೇಕು, ಮುಸ್ಲಿಂ ಮೀಸಲಾತಿ ರದ್ದು ಮಾಡಬೇಕು. ಎಸ್ಸಿಪಿ ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ ಅದಕ್ಕೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments