Wednesday, August 27, 2025
HomeUncategorizedಸದ್ದಿಲ್ಲದೆ ಸಪ್ತಪದಿ ತುಳಿದ ನೀರಜ್​ ಚೋಪ್ರಾ : ಟೆನಿಸ್​ ಆಟಗಾರ್ತಿಯ ಕೈಹಿಡಿದ ವಿಶ್ವ ಚಾಂಪಿಯನ್​ !

ಸದ್ದಿಲ್ಲದೆ ಸಪ್ತಪದಿ ತುಳಿದ ನೀರಜ್​ ಚೋಪ್ರಾ : ಟೆನಿಸ್​ ಆಟಗಾರ್ತಿಯ ಕೈಹಿಡಿದ ವಿಶ್ವ ಚಾಂಪಿಯನ್​ !

ಒಲಂಪಿಕ್​ ಸ್ವರ್ಣ ಪದಕ ವಿಜೇತ ಹಾಗೂ ವಿಶ್ವ ಚಾಂಪಿಯನ್​ ಜಾವಲಿನ್​ ಎಸೆತಗಾರ ನೀರಜ್ ಚೋಪ್ರ ಮದುವೆಯಾಗಿದ್ದು. ಟೆನಿಸ್​ ಆಟಗಾರ್ತಿ ಹಿಮಾನಿ ಮೋರ್​ ಕೈ ಹಿಡಿದಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನೀರಜ್​ ‘ ಕುಟುಂಬದ ಜೊತೆ ಜೀವನದ ಹೊಸ ಅಧ್ಯಾಯ’ ಎಂದು ಬರೆದುಕೊಂಡಿದ್ದಾರೆ.

ನೀರಜ್​ ಚೋಪ್ರಾ ಭಾರತದ ಚಿನ್ನದ ಹುಡುಗ ಎಂದೆ ಖ್ಯಾತರಾಗಿದ್ದು. ಒಲಂಪಿಕ್​ನ ಅಥ್ಲೇಟಿಕ್ಸ್​ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದರು. ಟೋಕಿಯೋ ಓಲಂಪಿಕ್ಸ್​ನಲ್ಲಿ ಚಿನ್ನದ ಪದಕ ಮತ್ತು ಪ್ಯಾರಿಸ್​ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಅಥ್ಲೇಟಿಕ್ಸ್​ನಲ್ಲಿ ಸತತ ಎರಡು ಪದಕ ಜಯಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ಇದನ್ನೂ ಓದಿ : ತಡವಾಗಿ ಕೆಲಸಕ್ಕೆ ಬಂದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು !

ಟಿನಿಸ್​ ತಾರೆ ಹಿಮಾನಿ ಮೋರ್​​ ಯಾರು ?

ನೀರಜ್ ಚೋಪ್ರ ಮದುವೆ ಪೋಟೊಗಳು ವೈರಲ್​ ಆದ ಕೂಡಲೆ, ಹಿಮಾನಿ ಮೋರ್​ ಯಾರು ಎಂಬ ಹುಡುಕಾಟಗಳು ಹೆಚ್ಚಾಗಿವೆ.  ಹರಿಯಾಣದ ಸೋನಿಪತ್​ ಮೂಲದವರಾದ ಹಿಮಾನಿ ಟೆನಿಸ್​ ತಾರೆಯಾಗಿದ್ದಾರೆ. ಈ ಹಿಂದೆ ರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು.\

ಆ ಬಳಿಕ ಉನ್ನತದ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ ಹಿಮಾನಿ ಲೂಯಿಸಿಯಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದರು. ಇದೀಗ ನ್ಯೂ ಹ್ಯಾಂಪ್‌ಶೈರ್‌ನಲ್ಲಿರುವ ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾಲಯದಲ್ಲಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್​ನಲ್ಲಿ (ಮೇಜರ್) ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.

ಶಿಕ್ಷಣದ ಜೊತೆ ಟೆನಿಸ್ ಆಟದಲ್ಲೂ ಮುಂದುವರೆದಿರುವ 25 ವರ್ಷ ಹಿಮಾನಿ ಮೊರ್, 2017ರಲ್ಲಿ ತೈಪೆಯಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ದೆಹಲಿ ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಇದಕ್ಕೂ ಮುನ್ನ 2016 ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವ ಜೂನಿಯರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ಹಿಮಾನಿ ಮೊರ್, ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಅವರ ಕೈ ಹಿಡಿಯುವ ಮೂಲಕ ಸಪ್ತಪದಿ ತುಳಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments