Tuesday, August 26, 2025
Google search engine
HomeUncategorizedಭಾರತದಲ್ಲಿ ಹಿಂದೂ ಧರ್ಮ ಹುಟ್ಟಿದಾಗ ,ಇಸ್ಲಾಂ ಇರಲೇ ಇಲ್ಲ ಎಂದ ಜೋಶಿ

ಭಾರತದಲ್ಲಿ ಹಿಂದೂ ಧರ್ಮ ಹುಟ್ಟಿದಾಗ ,ಇಸ್ಲಾಂ ಇರಲೇ ಇಲ್ಲ ಎಂದ ಜೋಶಿ

ಹುಬ್ಬಳ್ಳಿ : ಕರ್ನಾಟಕದಲ್ಲಿ ನಡೆಯುತ್ತಿರೊ ವಕ್ಫ್ ಕರ್ಮಕಾಂಡದ ಕುರಿತು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಇಂದು  ಹುಬ್ಬಳ್ಳಿಯಿಲ್ಲಿ ವಾಗ್ದಾಳಿ ನಡೆಸಿದರು. ಇಂದು ವಿಜಯಪುರದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ ಜೋಶಿ ರೈತರಿಗೆ ಮಾನಸಿಕ ಸ್ಥೈರ್ಯ ತುಂಬುವುದಾಗಿ ತಿಳಿಸಿದರು.

ಪ್ರಹ್ಲಾದ್ ಜೋಶಿ ಹೇಳಿಕೆ
ವಕ್ಫ ವಿರುದ್ದದ ರೈತರ ಹೋರಾಟ ವಿಚಾರ. ನಾನು ಕೂಡಾ ಇಂದು ವಿಜಯಪುರ ಕ್ಕೆ ಹೋಗತೇನಿ
ಹೋರಾಟದಲ್ಲಿ ಭಾಗಿಯಾಗಿ ರೈತರ ಸಮಸ್ಯೆ ಆಲಿಸುತ್ತೇನೆ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇಂದು ವಿಜಯಪುರ ಜಿಲ್ಲೆಯ ಹೋರಾಟಕ್ಕೆ ಸಾಥ್ ನೀಡಲಿರೋ ಜೋಶಿ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ದೊರಕಿದೆ.

ವಿಜಯಪುರದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡತೀದಾರೆ. ಕಾಂಗ್ರೆಸ್ ಸರ್ಕಾರ ಮುಗ್ದ ಜನರನ್ನು ದಾರಿ ತಪ್ಪಿಸೋ ಕೆಲಸ ಮಾಡತೀದಾರೆ‌‌‌, ಇದೀಗ ನೋಟಿಸ್ ವಾಪಸ್ ಪಡೆದಿದ್ದೇವೆ ಅಂತಾರೆ
ಪಹಣಿಯಲ್ಲಿ ಹೆಸರು ಕೂತಿದೆ ಅದನ್ನ ಏನು ಮಾಡ್ರೀರಿ.? ಸ್ವತಂತ್ರ ಪೂರ್ವ ಕೆಲವರ ಜಮೀನಿದೆ.
ಆ ಜಮೀನುಗಳ ಪಹಣಿಯಲ್ಲಿ ಇಗಾಗಲೇ  ಅವರ ಹೆಸರು ಬಂದಿದೆ. ಅದನ್ನು ಯಾವ ಕಾಲಕ್ಕೂ ಒಪ್ಪಲು ಸಾಧ್ಯ ಇಲ್ಲ. ವಕ್ಫ ಎಂಬುದು ನ್ಯಾಯಾಲಯ ರೀತಿ ನಡಸ್ತೀದಾರೆ..ಅದನ್ನು ಬಂದ್ ಮಾಡಬೇಕು ಎಂದು ಹೇಳಿದರು.

ರೈತರು ದೀಪಾವಳಿಯನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಚರಣೆ ಮಾಡ್ತೀನಿ ಅಂತೀದಾರೆ. ಅಕಸ್ಮಾತ್ ಬಿಜೆಪಿ ಸರ್ಕಾರದಲ್ಲಿ ನೋಟಿಸ್ ಕೊಟ್ಟಿದ್ರೂ ತಪ್ಪು. ಆ ನೋಟಿಸ್ ಕೊಟ್ಟಿದ್ದು ನಮ್ಮ ಗಮನಕ್ಕೆ ಬಂದಿಲ್ಲ. ನಮ್ಮ ಸರ್ಕಾರದ ಪ್ರಮುಖರ ಗಮನಕ್ಕೆ ಬಂದಿಲ್ಲ ಅಕಸ್ಮಾತ್ ನಮ್ಮ ಗಮನಕ್ಕೆ ಬಂದಿದ್ರೆ ನಾವು ವಾರ್ನ್ ಮಾಡತೀದಿವಿ.
ಅಕಸ್ಮಾತ್ ಅವತ್ತು ನೋಟಿಸ್ ಕೊಟ್ಟಿದ್ರು ತಪ್ಪು ಎಂದು ತಮ್ಮ ಪಕ್ಷದ ಕ್ರಮಗಳನ್ನು ವಿರೋಧಿಸಿದರು.

ಮುಂದುವರಿದು ಮಾತನಾಡಿದ ಜೋಶಿ ಆದಿಲ್ ಶಾಹಿ ವಿಜಯಪುರದಲ್ಲಿ ಆಡಳಿತ ಮಾಡಿದ್ದಾರೆ ಅಂತಾರೆ.
ಆದಿಲ್ ಶಾಹಿ ಇಲ್ಲಿಯವರಾ.? ಇಲ್ಲಿರೋ ಮುಸ್ಲಿಂರೇ ಹಿಂದೂಗಳು ಅವರನ್ನು ಆಮಿಷ ಒಡ್ಡಿ ಕನ್ವರ್ಟ್ ಮಾಡಲಾಗಿದೆ ಇಲ್ಲಿರೋ ಮುಸ್ಲಿಂರೇ ಇಲ್ಲಿಯವರಲ್ಲ ಯಾವ ದಾನ ಕೊಟ್ಟ, ಒಂದು ಲಕ್ಷ ಎಕರೆ ದಾನ ಕೊಡ್ತಾರಾ ಎಂದ ಜೋಶಿ.? ಸರ್ಕಾರದ ಈ ಕ್ರಮವನ್ನು  ಖಂಡ ತುಂಡವಾಗಿ ವಿರೋಧ ಮಾಡ್ತೀವಿ. ಕೇಂದ್ರದಲ್ಲಿ ವಕ್ಫ ಕಾನೂನು ಬದಲಾವಣೆ ಮಾಡ್ತೀವಿ ಎಂದ ಹೇಳಿದರು.

ಭಾರತದಲ್ಲಿ ಹಿಂದೂ ಧರ್ಮ ಹುಟ್ಟಿದಾಗ ,ಇಸ್ಲಾಂ ಇರಲೇ ಇಲ್ಲ ಎಂದ ಜೋಶಿ ದೇಶದಲ್ಲಿ ಸಾವಿರಾರು ವರ್ಷಗಳಿಂದ ದೇವಸ್ಥಾನಗಳಿವೆ. ಸ್ವತಂತ್ರ ಬಂದ ಬಳಿಕ ಯಾವ ದೇವಸ್ಥಾನದ ಜಾಗವೂ ಹೆಚ್ಚಾಗಿಲ್ಲ.
ಆದಾಯ ಬರೋ ಎಲ್ಲ ದೇವಸ್ಥಾನಗಳೂ ರಾಜ್ಯ ಸರ್ಕಾರದ ಕಂಟ್ರೋಲ್ ನಲ್ಲಿವೆ ಎಂದು ಹೇಳಿದರು.

ಜಮೀರ್​ ಬಗ್ಗೆ ವಾಗ್ದಾಳಿ ನಡೆಸಿದ ಪ್ರಹ್ಲಾದ್​ ಜೋಶಿ 

ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಜಮೀರ್ ನನ್ನ ಕಿತ್ತೊಗೆಯಬೇಕು, ಭಾರತ ಮತ್ತು ರಾಜ್ಯವನ್ನು ಇಸ್ಲಾಂಮೀಕರಣ ಮಾಡಲು ಜಮೀರ್ ನಿಂತಿದ್ದಾನೆ, ಜಮೀರ್ ಅಹ್ಮದ್ ಗೆ ಮತಾಂಧತೆ ಇದೆ ಕಾಂಗ್ರೆಸ್ ಪಕ್ಷಕ್ಕೆ ಮಾನ ಮರ್ಯಾದೆ ಇದ್ರೆ ಇವತ್ತು ಕಿತ್ತೊಗೆಯಬೇಕು. ಜಮೀರು ಕೋಮು ದ್ವೇಷ ಹರಡಲು ನಿಂತಿದ್ದಾರೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments